ರಾಜ್ಯದ 108 ಹಳ್ಳಿಗಳಲ್ಲಿ ಪಿಯು ಪೂರೈಸಿದವರಿಲ್ಲ..!
Team Udayavani, Jan 1, 2018, 8:47 AM IST
ಬೆಂಗಳೂರು: ರಾಜ್ಯದ ಎರಡು ಸಾವಿರ ಹಳ್ಳಿಗಳಲ್ಲಿ ಪದವೀಧರರೇ ಇಲ್ಲ ಎಂಬ ಸುದ್ದಿ ಬಹಿರಂಗಗೊಂಡ ಬೆನ್ನಲ್ಲೇ 108 ಹಳ್ಳಿಗಳಲ್ಲಿ ಪಿಯು ಪೂರೈಸಿದವರೂ ಇಲ್ಲವೆಂಬ ಅಂಶ ಬೆಳಕಿಗೆ ಬಂದಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯೂ ಇತ್ತೀಚೆಗೆ ಸಮೀಕ್ಷೆ ನಡೆಸಿದ್ದು, ಅದರ ವರದಿಯನ್ನು ಕೂಡ ಬಿಡುಗಡೆ ಮಾಡಿದೆ.ಎಸ್ಸೆಸ್ಸೆಲ್ಸಿ ನಂತರ ಕಾಲೇಜು ಮೆಟ್ಟಿಲೇರದ ವಿದ್ಯಾರ್ಥಿಗಳ ಜಾಡನ್ನು ಹಿಡಿದು
ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಸಮೀಕ್ಷೆ ನಡೆಸಲಾಗಿದೆ. 108 ಹಳ್ಳಿಗಳಲ್ಲಿ ಪಿಯು ಪೂರೈಸಿದ ಅಭ್ಯರ್ಥಿಗಳೇ ಇಲ್ಲ ಎಂಬುದು ಖಾತ್ರಿಯಾಗಿದೆ.
ರಾಯಚೂರಿನ 26, ಮಂಡ್ಯದ 8, ಹಾಸನ, ಉತ್ತರ ಕನ್ನಡ ಹಾಗೂ ಬೆಳಗಾವಿಯ ತಲಾ 7, ಹಾಗೂ ಬೀದರ್‌ನ 6 ಹಳ್ಳಿ ಸೇರಿ ರಾಜ್ಯದ 108 ಹಳ್ಳಿಗಳಲ್ಲಿ ಪಿಯು ಪೂರೈಸಿದವರು ಇಲ್ಲ ಎಂಬುದು ಸಮೀಕ್ಷೆಯಿಂದ ಸ್ಪಷ್ಟಗೊಂಡಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ ತನ್ನ ಪ್ರಾಧ್ಯಾಪಕರ ಮೂಲಕ ಎಲ್ಲಾ ಹಳ್ಳಿಗಳಿಗೆ ಭೇಟಿ ನಿಡಿ, ಪದವೀಧರರನ್ನು ಪತ್ತೆ ಹಚ್ಚಿತ್ತು. ಆಗ ರಾಜ್ಯದ 2,070 ಹಳ್ಳಿಗಳಲ್ಲಿ ಪದವೀಧರರು ಇಲ್ಲದೇ ಇರುವುದು ಗೊತ್ತಾಗಿತ್ತು. ಅದೇ ಮಾದರಿಯಲ್ಲಿ ಪಿಯು ಇಲಾಖೆ ಅಧಿಕಾರಿಗಳು ಸಮೀಕ್ಷೆಯ ರೂಪು ರೇಷೆ ಸಿದ್ಧಪಡಿಸಿ, ಉಪನ್ಯಾಸಕರ ಮೂಲಕ ಸಮೀಕ್ಷೆ ಮಾಡಿಸಿದ್ದಾರೆ.
ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಕೌಟುಂಬಿಕ ಸಮಸ್ಯೆ ಸೇರಿ ಇತರ ಕಾರಣಕ್ಕಾಗಿ ಶಿಕ್ಷಣ ಮುಂದುವರಿಸದೇ
ಇರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಮಾಹಿತಿಯ ಆಧಾರದಲ್ಲಿ ಕಾಲೇಜು ಶಿಕ್ಷಣದಿಂದ ಹೊರಗುಳಿದ ಅಭ್ಯರ್ಥಿಗಳ ಭೇಟಿ ಮಾಡಿ, ಅವರ ಕುಟುಂಬದ ಜತೆಗೆ ಮಾತುಕತೆ ನಡೆಸಲಾಗುತ್ತದೆ. ಪುನಃ ಅವರನ್ನು ಕಾಲೇಜಿಗೆ ಕರೆತರಲು ಬೇಕಾದ ಪ್ರಯತ್ನವನ್ನು ಇಲಾಖೆಯಿಂದ ಮಾಡಲಾಗುತ್ತದೆ ಎಂದು ಪಿಯು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
Belagavi; ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.