“ಕಡತಗಳ ಶಾಸ್ತ್ರಿ’ ಖ್ಯಾತಿಯ ಅನಂತ ಕೃಷ್ಣ ಶಾಸ್ತ್ರಿ ಇನ್ನಿಲ್ಲ
Team Udayavani, Jan 5, 2020, 3:04 AM IST
ಶಿರಸಿ: ಪ್ರಸಿದ್ಧ ಇತಿಹಾಸ ತಜ್ಞ, ತಾಳೆಗರಿಗಳ ಸಂಶೋಧಕ, ಕಡತಗಳ ಶಾಸ್ತ್ರಿ ಎಂದೇ ಹೆಸರಾಗಿದ್ದ ಇಲ್ಲಿನ ಅನಂತ ಕೃಷ್ಣ ಶಾಸ್ತ್ರಿ (80) ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು. 15ರಿಂದ 19ನೇ ಶತಮಾನದ ತನಕ ಮೋಡಿಲಿಪಿಯಲ್ಲಿರುವ ಕಡತಗಳನ್ನು ಅಧ್ಯಯನ ಮಾಡಿದ್ದ ಇವರು, ರಾಜ್ಯದ ಪ್ರಮುಖ ಇತಿಹಾಸಕಾರ ಹಾಗೂ ಸಂಶೋಧಕರಾಗಿ ಗುರುತಿಸಿ ಕೊಂಡಿದ್ದರು. ಸಾರಸ್ವತ ಲೋಕಕ್ಕೆ 30ಕ್ಕೂ ಹೆಚ್ಚು ಅಮೂಲ್ಯ ಕೃತಿ ನೀಡಿದ್ದರು.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಯನ ಮಾಡಿದ ನಂತರ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಶಾಸ್ತ್ರಿಗಳು, ಕವಿವಿಯಿಂದ ಶೃಂಗೇರಿ ಮಠದ ಚರಿತ್ರೆ ಮೇಲೆ ಪಿಎಚ್‌ಡಿ ಪಡೆದಿದ್ದರು. ಸ್ವರ್ಣವಲ್ಲೀ, ಇಡಗುಂಜಿ ಸೇರಿ ಪೌರಾಣಿಕ, ಧಾರ್ಮಿಕ ಕ್ಷೇತ್ರಗಳ ಅಧ್ಯಯನ ಮಾಡಿದ್ದರು. ಅವರಿಗೆ ಅನೇಕ ಪ್ರಶಸ್ತಿ-ಪುರಸ್ಕಾರ ದೊರೆತಿದ್ದವು. ಶೋಕ: ಎ.ಕೆ.ಶಾಸ್ತ್ರಿಗಳ ನಿಧನಕ್ಕೆವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ದಂಟ್ಕಲ್ ಶೋಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.