ಶ್ರೀರಾಮ ಇರಲೇ ಇಲ್ಲ, ಜೀಸಸ್, ಬುದ್ಧನ ಬಗ್ಗೆ ದಾಖಲೆ ಇದೆ; ಸಿಎಸ್
Team Udayavani, Dec 6, 2017, 12:47 PM IST
ಮಂಗಳೂರು: ಶ್ರೀರಾಮಚಂದ್ರ ಇರಲೇ ಇಲ್ಲ, ಆತನ ಅಸ್ತಿತ್ವಕ್ಕೆ ಯಾವುದೇ ಪುರಾವೆ ಇಲ್ಲ. ಶ್ರೀರಾಮನ ವಿಚಾರದಲ್ಲಿ ಸುಳ್ಳನ್ನೇ ಬಿಂಬಿಸಲಾಗುತ್ತಿದೆ ಎಂದು ಪ್ರಗತಿಪರ ಚಿಂತಕ ಸಿಎಸ್ ದ್ವಾರಕನಾಥ್ ವಿವಾದಿತ ಹೇಳಿಕೆಯನ್ನು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಮಂಗಳೂರಿನ ಪುರಭವನದಲ್ಲಿ ಮಂಗಳವಾರ ನಡೆದ ಬಾಬ್ರಿ ಮಸೀದಿ ಧ್ವಂಸ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ದ್ವಾರಕನಾಥ್ ಈ ರೀತಿ ಹೇಳಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ನಮ್ಮ ತಂದೆ ಹೆಸರು, ತಾತನ ಹೆಸರು ಹೇಳಬಹುದು, ಆದರೆ ತಾತನ ತಂದೆ ಬಗ್ಗೆ ಹೇಳಿ ಅಂದರೆ ಆಗುತ್ತಾ? ಅದೇ ರೀತಿ 9 ಲಕ್ಷ ವರ್ಷಗಳ ಹಿಂದೆ ಇದ್ದ ವ್ಯಕ್ತಿ ಬಗ್ಗೆ ಮಾತನಾಡುತ್ತಾರೆ ಎಂದರೆ ಏನು ಹೇಳಬೇಕು ಎಂದು ದ್ವಾರಕನಾಥ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಗೌತಮ ಬುದ್ಧ, ಜೀಸಸ್ ಹಾಗೂ ಪೈಗಂಬರ್ ಅವರ ಕಾಲಘಟ್ಟವನ್ನು ಗುರುತಿಸಬಹುದಾಗಿದೆ. ಇದು ಅವರ ಅಸ್ತಿತ್ವಕ್ಕೆ ಇರುವ ದಾಖಲೆ, ಇದನ್ನು ಹೊರತುಪಡಿಸಿದರೆ ಶ್ರೀರಾಮನ ಬಗ್ಗೆ ಅಂತಹ ಯಾವುದೇ ದಾಖಲೆ, ಪುರಾವೆ ಸಿಕ್ಕಿಲ್ಲ ಎಂದು ಹೇಳಿದರು.
ವಿವಾದ ಅಲ್ಲಗಳೆದ ದ್ವಾರಕನಾಥ್:
ಖಾಸಗಿ ಚಾನೆಲ್ ವೊಂದರ ಜತೆ ಮಾತನಾಡಿದ ಅವರು, ನಾನು ಮಂಗಳೂರಿನಲ್ಲಿ ಎಸ್ ಡಿಪಿಐ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಭಾಗವಹಿಸಿ, ಅಯೋಧ್ಯೆ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ಕುರಿತು ವಿವರಿಸುತ್ತಿದ್ದೆ. ನಾನು ರಾಮನ ಹುಟ್ಟಿನ ಬಗ್ಗೆ ಏನೂ ಹೇಳಿಲ್ಲ, ನಾನೂ ಕೂಡಾ ಒಂದು ಪರಂಪರೆಯಿಂದ ಬಂದವನು, ನನ್ನದೇ ಆದ ರಾಮನ ದೃಷ್ಟಿಕೋನವಿದೆ. ಅದು ಲೋಹಿಯಾ ಅವರು ಕಂಡಂತಹ ರಾಮ. ಅಷ್ಟೇ ಅಲ್ಲ ನಾನು ಆ ವಿಚಾರ ಸಂಕಿರಣದಲ್ಲಿ ಹುಬ್ಬಳ್ಳಿಯಲ್ಲಿ ಮೌಲ್ವಿಯೊಬ್ಬರು ಗಣೇಶಪೇಟೆ ಪಾಕಿಸ್ತಾನದಂತೆ ಕಾಣಿಸುತ್ತಿದೆ ಎಂಬ ಹೇಳಿಕೆಯನ್ನು ಖಂಡಿಸಿದ್ದೆ. ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದವರು ಹಿಂದುಗಳಲ್ಲ, ಅವರದ್ದು ಕೆಡಹುವ ಧರ್ಮ. ತಾಲಿಬಾನ್ ನಲ್ಲಿ ಬುದ್ಧನ ಪ್ರತಿಮೆಯನ್ನು ಒಡೆದವರು ಕೂಡಾ ಅದೇ ಧರ್ಮದವರು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ದ್ವಾರಕನಾಥ್ ವಿರುದ್ಧ ಬಂಟ್ವಾಳದಲ್ಲಿ ದೂರು ದಾಖಲು:
ಮಂಗಳೂರಿನಲ್ಲಿ ಪ್ರಗತಿಪರ ಚಿಂತಕ ದ್ವಾರಕನಾಥ್ ಅವರು ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಗಣೇಶ್ ಕಲ್ಲಡ್ಕ ಅವರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.