ಕಾಂಗ್ರೆಸ್ಗೆ ಮರಳುವ ಪ್ರಶ್ನೆಯೇ ಇಲ್ಲ: ಎಸ್.ಟಿ.ಸೋಮಶೇಖರ್
Team Udayavani, Mar 2, 2020, 3:06 AM IST
ಚನ್ನಪಟ್ಟಣ: ಕಾಂಗ್ರೆಸ್ಗೆ ಮರಳುವ ಪ್ರಶ್ನೆಯೇ ಇಲ್ಲ. ಪಕ್ಷದಿಂದ ನಾವು ಹೊರಗಡೆ ಹೋಗುತ್ತೇವೆ ಎಂದು ಹೇಳಿರಲಿಲ್ಲ. ಪಕ್ಷದಿಂದ ಅವರೇ ಹೊರಗೆ ಹಾಕಿದರು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಶಾಸಕನಾಗಿ ಆಯ್ಕೆಯಾಗಿ ಸರ್ಕಾರದಲ್ಲಿ ಸಹಕಾರ ಮಂತ್ರಿಯಾಗಿದ್ದೇನೆ. ಇಂತಹ ಸಮಯದಲ್ಲಿ ಕಾಂಗ್ರೆಸ್ಗೆ ಮರಳುವ ಪ್ರಮೇಯವಿಲ್ಲ.
ಯಾರು ಹೇಳಿದರೂ ಅಷ್ಟೇ, ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ಆದರೆ, ಈ ಹುದ್ದೆಯ ಆಕಾಂಕ್ಷಿಯಲ್ಲ. ಯಾವ ಜಿಲ್ಲೆಗೆ ಉಸ್ತುವಾರಿ ಕೊಡ್ತಾರೋ ಗೊತ್ತಿಲ್ಲ. ಸದ್ಯ ಡಿಸಿಎಂ ಡಾ.ಅಶ್ವಥ ನಾರಾಯಣ ಅವರು ಜಿಲ್ಲೆಯ ಉಸ್ತುವಾರಿ ಆಗಿದ್ದಾರೆ. ಎರಡು ಜಿಲ್ಲೆ ಇರೋರಿಗೆ ಒಂದು ಜಿಲ್ಲೆಯ ಉಸ್ತುವಾರಿ ಕೊಡುತ್ತಾರೆ.
ಡಾ.ಅಶ್ವಥ ನಾರಾಯಣ ಯಾವ ಜಿಲ್ಲೆ ಬಿಡ್ತಾರೋ ಗೊತ್ತಿಲ್ಲ. ರಾಮನಗರ ಜಿಲ್ಲೆ ಕೊಟ್ಟರೆ ಸಂತೋಷದಿಂದ ತೆಗೆದುಕೊಳ್ಳುತ್ತೇನೆ. ಇದು ನನ್ನೂರು. ನಾನು ಓಡಾಡಿರುವ ಊರು. ಇಲ್ಲಿ ಹಲವು ರೀತಿಯ ಅಭಿವೃದ್ಧಿ ಮಾಡುವ ಚಿಂತನೆ ಇದೆ ಎಂದರು. ಬಜೆಟ್ ಅಧಿವೇಶನಕ್ಕೆ ಕಾಂಗ್ರೆಸ್ ವಿರೋಧ ಮಾಡುವುದು ಸರಿಯಲ್ಲ. ಏನೇ ಸಮಸ್ಯೆ ಇದ್ದರೂ, ಬಂದು ಚರ್ಚೆ ಮಾಡಲಿ.
ವಿಧಾನಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಏನು ಮಾತಾಡಿದರೂ ಅದಕ್ಕೆ ಉತ್ತರ ಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ಸಜ್ಜಾಗಿದ್ದಾರೆ. ವಿರೋಧ ಪಕ್ಷದವರು ಬಜೆಟ್ಗೆ ಬಾರದೆ ಬಹಿಷ್ಕರಿಸಿದರೆ ಏನೂ ಪ್ರಯೋಜನವಾಗುವುದಿಲ್ಲ. ಅವರಿಗೆ ಮೂರು ಗಂಟೆ ಕಾಲಾವಕಾಶ ಕೊಡುತ್ತಾರೆ. ಆ ಸಮಯದಲ್ಲಿ ತಪ್ಪಿದ್ದರೆ ಸರ್ಕಾರಕ್ಕೆ ಚಾಟಿ ಬೀಸಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.