ಜಾರಕಿಹೊಳಿ ಸಾಮ್ರಾಜ್ಯದಲ್ಲಿ ಯಾವುದೇ ಬಿರುಕಿಲ್ಲ: ಬಾಲಚಂದ್ರ
Team Udayavani, Apr 29, 2019, 3:00 AM IST
ಗೋಕಾಕ: “ದೇವರು ಹಾಗೂ ಜನರ ಆಶೀರ್ವಾದದಿಂದ ನಾನು ಹಾಗೂ ಸಹೋದರರಾದ ರಮೇಶ, ಸತೀಶ, ಭೀಮಶಿ ಮತ್ತು ಲಖನ್ ಎಲ್ಲರೂ ಒಂದಾಗಿ ಇದ್ದೇವೆ. ಮೂರು ದಶಕಗಳ ಹಿಂದೆ ಜನರ ಆಶೀರ್ವಾದದಿಂದ ಕಟ್ಟಿದ ನಮ್ಮ ಸಾಮ್ರಾಜ್ಯದಲ್ಲಿ ಯಾವುದೇ ಬಿರುಕಿಲ್ಲ-ಒಡಕಿಲ್ಲ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಕೊಣ್ಣೂರ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಅವರು ಮಾತನಾಡಿದರು. ಕೆಲ ವಿರೋಧಿ ಗಳು ನಮ್ಮ ಕುಟುಂಬದ ಏಳ್ಗೆ ಸಹಿಸದೆ, ಕುಟುಂಬ ಒಡೆಯುವ ಯತ್ನ ಮಾಡುತ್ತಿದ್ದಾರೆ. ನಮ್ಮ ಕುಟುಂಬ ಜನರ ಆಶೀರ್ವಾದದಿಂದ ಜನಸೇವೆ ಮಾಡುತ್ತಿದೆ. ಒಂದೇ ಮನೆಯಲ್ಲಿ ಮೂವರು ಶಾಸಕರು ಇರುವುದು ರಾಜ್ಯದಲ್ಲಿಯೇ ಅಪರೂಪದ ಸಂಗತಿ.
ರಾಜಕೀಯ ಬೇರೆ-ಬೇರೆಯಾದರೂ ಕೌಟುಂಬಿಕವಾಗಿ ನಾವು ಐವರು ಸಹೋದರರು ಒಗ್ಗಟ್ಟಾಗಿಯೇ ಇದ್ದೇವೆ. ಕೆಲವರು ನಮ್ಮ ಕುಟುಂಬದಲ್ಲಿ ಜಗಳ ಹಚ್ಚುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಕುಟುಂಬ ಎಂದ ಮೇಲೆ ಭಿನ್ನಾಭಿಪ್ರಾಯಗಳು ಇರುವುದು ಸ್ವಾಭಾವಿಕ. ನಮ್ಮ ಕುಟುಂಬದ ಸಮಸ್ಯೆಗಳನ್ನು ನಾವೇ ಕುಳಿತು ಪರಿಹರಿಸಿಕೊಳ್ಳುತ್ತೇವೆ. ಜಾರಕಿಹೊಳಿ ಕುಟುಂಬ ಯಾವಾಗ ಒಡೆದೀತು ಎಂಬುದನ್ನು ಕೆಲವರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಅವರ ಬಯಕೆ ಎಂದಿಗೂ ಈಡೇರುವುದಿಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.