ಆನ್‌ಲೈನ್ ಖರೀದಿಗೆ ಮುನ್ನ ಯೋಚಿಸಿ: ಆಫರ್‌ಗಳ ಬಗ್ಗೆ ಎಚ್ಚರ
ಹೆಚ್ಚಿದ ನಕಲಿ ಇ-ಕಾಮರ್ಸ್ ವೆಬ್‌ಸೈಟ್‌ಗಳ ಹಾವಳಿ
Team Udayavani, Mar 14, 2022, 7:55 AM IST
ಬೆಂಗಳೂರು: ಅಸಲಿ ಇ-ಕಾಮರ್ಸ್ ವೆಬ್‌ಸೈಟ್‌ಗಳನ್ನೇ ಬೆರಗುಗೊಳಿಸುವಂತೆ ನಕಲಿ ಆನ್‌ಲೈನ್ ಶಾಂಪಿಂಗ್ ವೆಬ್‌ಸೈಟ್‌ಗಳು ಜನರಿಂದ ಹಣ ಸುಲಿಗೆ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಸೈಬರ್ ಎಕಾನಾಮಿಕ್ಸ್ ಮತ್ತು ನಾರ್ಕೋಟಿಕ್ಸ್(ಸಿಇಎನ್) ಠಾಣೆಗಳಲ್ಲಿ ಇಂತಹ ಪ್ರಕರಣಗಳು ಪ್ರತಿ ನಿತ್ಯ 2-4 ದಾಖಲಾಗಿದ್ದು, ಅಂದಾಜು ವರ್ಷಕ್ಕೆ ಸಾವಿರ ಗಡಿ ದಾಟುತ್ತಿದೆ.
ಪ್ರಕರಣ-1
ಜೆ.ಪಿ. ನಗರ ನಿವಾಸಿ ವೆಂಕಟೇಶ್ ಅಯ್ಯರ್ ಸಂಬಂಧಿಯೊಬ್ಬರಿಗೆ ಗುಜರಾತಿ ಗಾಗ್ರಾ ಖರೀದಿಸಲು ಲೋಕ್ಯಾಂಟೋ ವೆಬ್‌ಸೈಟ್ ಶೋಧಿಸಿದ್ದರು. ಅದರಲ್ಲಿ ಉಲ್ಲೇಖೀಸಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಆರೋಪಿಗಳು, ಉತ್ತಮ ಕಂುಪನಿಯ ಗಾಗ್ರಾ ಇದ್ದು, ಕಳುಹಿಸುತ್ತೇವೆ. ಮುಂಗಡವಾಗಿ ಡೆಲಿವರಿ ಶುಲ್ಕ ಎಂದು ಹಂತ-ಹಂತವಾಗಿ 4,400 ರೂ. ದೋಚಿದ್ದಾರೆ. ಅನಂತರ ಮೊಬೈಲ್ ಸ್ವಿಚ್x ಆಫ್ ಮಾಡಿಕೊಂಡಿದ್ದಾರೆ. ವೆಂಕಟೇಶ್ ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ-2
ಯಲಹಂಕ ನಿವಾಸಿ ಪುರುಷೋತ್ತಮ್ ಉತ್ತಮ ಕಂಪೆನಿಯ ಮೊಬೈಲ್ ಖರೀದಿಗೆ ಮುಂದಾಗಿದ್ದರು. ಆಗ ಇನ್‌ಸ್ಟ್ರಾಗ್ರಾಂನಲ್ಲಿ ಬಂದಿದ್ದ ವೆಬ್‌ಸೈಟ್‌ವೊಂದರ ಲಿಂಕ್ ತೆರೆದು, 39 ಸಾವಿರ ರೂ. ಮೌಲ್ಯದ ಮೊಬೈಲ್ ಬುಕ್ ಮಾಡಿದ್ದಾರೆ. ಆದರೆ, ಮೊಬೈಲ್ ಬಂದಿಲ್ಲ. ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪುರುಷೋತ್ತಮ್ ದೂರು ದಾಖಲಿಸಿದ್ದಾರೆ.
ಪ್ರಕರಣ-3
ಚಾಮರಾಜಪೇಟೆ ನಿವಾಸಿ ಮಧುಸೂದನ್, ಒಎಲ್‌ಎಕ್ಸ್‌ನಲ್ಲಿ ನೀಡಿದ್ದ ವಾಹನ ಮಾರಾಟದ ಜಾಹಿರಾತು ಕಂಡು, ಉಲ್ಲೇಖೀಸಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾರೆ. ಮುಂಗಡ ಹಣ ಕೊಡಬೇಕೆಂದು 15 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡು, ನಂಬರ್ ಮೊಬೈಲ್ ಸ್ವಿಚ್x ಆಫ್ ಮಾಡಿಕೊಂಡಿದ್ದಾನೆ. ಅಲ್ಲದೆ, ಜಾಹಿರಾತು ಕೂಡ ಡಿಲೀಟ್ ಮಾಡಲಾಗಿದೆ. ಈ ಕುರಿತು ಪಶ್ಚಿಮ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾನ್ಯವಾಗಿ ಇ-ಕಾಮರ್ಸ್ ವೆಬ್‌ಸೈಟ್ ತೆರೆಯಲು ಕೆಲವೊಂದು(ಲೈಸೆನ್ಸ್ ಹಾಗೂ ಇತರೆ) ಮಾನದಂಡಗಳು ಇವೆ. ಆದರೆ, ನಕಲಿ ವೆಬ್‌ಸೈಟ್‌ಗಳು ಯಾವುದೇ ನಿಯಮ ಪಾಲಿಸದೆ ಕೇವಲ 10-20 ಸಾವಿರ ರೂ.ನಲ್ಲಿ ವೆಬ್‌ಸೈಟ್ ಸೃಷ್ಟಿಸಿ, ಅಸಲಿ ವೆಬ್‌ಸೈಟ್ ಮಾದರಿಯಲ್ಲಿ ವಸ್ತುಗಳ ಖರೀದಿಗೆ ಅವಕಾಶ ನೀಡುತ್ತವೆ. ಅಲ್ಲದೆ, ಉತ್ತಮ ಗುಣಮಟ್ಟದ ವಸ್ತುಗಳಿಗೆ ಆಫರ್‌ಗಳು, ರಿಯಾಯಿತಿ ಇವೆ ಎಂದು ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ನೀಡುತ್ತಿವೆ. ಅಂತಹ ವೆಬ್‌ಸೈಟ್‌ಗೆ ಭೇಟಿ ನೀಡಿದ ಕೂಡಲೇ ಕೆಲ ಮಾಹಿತಿ ಪರೋಕ್ಷವಾಗಿ ವಂಚಿಸುತ್ತಿದ್ದಾರೆ. ಜತೆಗೆ ವಸ್ತುಗಳ ಖರೀದಿಗೆ ಮುಂಗಡವಾಗಿಯೇ ಹಣ ಕಟ್ಟಿಸಿಕೊಂಡು ಮೋಸ ಮಾಡುತ್ತಿದ್ದಾರೆ.
ನಕಲಿ ವೆಬ್‌ಸೈಟ್ ಪತ್ತೆ ಕಷ್ಟ!
ಸಾಮಾನ್ಯವಾಗಿ ನಕಲಿ ಇ-ಕಾಮರ್ಸ್ ವೆಬ್‌ಸೈಟ್‌ಗಳು ಪತ್ತೆ ಹಚ್ಚುವುದು ಸಾಮಾನ್ಯ ವ್ಯಕ್ತಿಗೆ ಕಷ್ಟವಾಗುತ್ತದೆ. ವೆಬ್‌ಸೈಟ್ ಯಾರದ್ದು? ಮಾಲಕರ್ಯಾರು? ಎಂದೆಲ್ಲ ಶೋಧಿಸುವುದು ಸವಾಲಿನ ಕೆಲಸ. ಜತೆಗೆ ಅಸಲಿ ವೆಬ್‌ಸೈಟ್‌ಗಳ ಮಾದರಿಯಲ್ಲೇ ಇರುವುದರಿಂದ, ಕೆಲವೊಂದು ರಿಯಾಯಿತಿಗಳ ಆಮಿಷವೊಡ್ಡುವುದರಿಂದ ಸಾರ್ವಜನಿಕರು ಬೇಗನೆ ವಂಚನೆಗೊಳ್ಳಗಾಗುತ್ತಿದ್ದಾರೆ. ಮತ್ತೂಂದೆಡೆ ವೆಬ್‌ಸೈಟ್ ತೆರೆಯಲು ಕಠಿನವಾದ ನಿಯಮಗಳು ಭಾರತದಲ್ಲಿ ಇಲ್ಲ. ಕೇಂದ್ರ ಸರಕಾರ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡುವ ಬದಲು, ಕಠಿನವಾದ ಮಾನದಂಡಗಳನ್ನು ಜಾರಿಗೆ ತರಲಿ. ಅವುಗಳನ್ನು ಪೂರೈಸದಿರುವ ವೆಬ್‌ಸೈಟ್‌ಗಳನ್ನು ನಿಷ್ಟ್ರೀಯಗೊಳಿಸಬೇಕು ಎನ್ನುತ್ತಾರೆ ಸೈಬರ್ ತಜ್ಞೆ ಶುಭಮಂಗಳ.
ಸಾರ್ವಜನಿಕರು ಏನು ಮಾಡಬೇಕು?
-ಯಾವುದೇ ಇ-ಕಾಮರ್ಸ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೊದಲು ಪರಿಶೀಲಿಸಬೇಕು.
-ವಿಮರ್ಶೆಗಳ ಬಗ್ಗೆ ಜಾಗೃತರಾಗಿರಿ.
-ಒಂದು ವೇಳೆ ವೆಬ್‌ಸೈಟ್ ಬಗ್ಗೆ ಅನುಮಾನವಿದ್ದರೆ “ಕ್ಯಾಶ್ ಆನ್ ಡೆಲಿವರಿ’ ಆಯ್ಕೆ ಮಾಡಿಕೊಳ್ಳಿ.
-ಯಾವುದೇ ಕಾರಣಕ್ಕೂ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ, ನೆಟ್‌ಬ್ಯಾಂಕ್ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೊಂದಾಯಿಸಬೇಡಿ.
ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್‌ನಲ್ಲಿ ಮಾರಾಟ ವಸ್ತುಗಳ ಜಾಹಿರಾತು ಅಥವಾ ಫೋಟೋಗಳನ್ನು ಸಾರ್ವಜನಿಕರು ನಂಬಬಾರದು. ಸ್ಟಾಂಡರ್ಡ್ ಕಂಪನಿಗಳಲ್ಲಿ ವಸ್ತುಗಳ ಖರೀದಿಸಿದರೆ ಉತ್ತಮ. ಜತೆಗೆ ಅಪರಿಚಿತ ಮತ್ತು ಅಧಿಕೃತ ಜಾಹಿರಾತು ನೀಡದ ವೆಬ್‌ಸೈಟ್‌ಗಳಲ್ಲಿ ಯಾವುದೇ ವ್ಯವಹಾರ ನಡೆಸಬಾರದು. ಉತ್ತಮ ಗುಣಮಟ್ಟದ ವಸ್ತುಗಳ ರಿಯಾಯಿತಿ,. ಆಫರ್‌ಗಳ ಬಗ್ಗೆ ಶೋಧಿಸುವುದು ಅಗತ್ಯ. ಮತ್ತೂಂದೆಡೆ ಇಂತಹ ವೆಬ್‌ಸೈಟ್‌ಗಳ ವಿಮರ್ಶೆ ಕೂಡ ನಕಲಿಯಾಗಿರುತ್ತದೆ. ಅದನ್ನು ನಂಬಬಾರದು.
– ಅನೂಪ್ ಶೆಟ್ಟಿ, ಈಶಾನ್ಯ ವಿಭಾಗದ ಡಿಸಿಪಿ
ಕೇಂದ್ರ ಸರ್ಕಾರ ಸೈಬರ್ ಭದ್ರತೆ ಬಗ್ಗೆ ಕಠಿಣ ಕ್ರಮಕೈಗೊಳ್ಳುತ್ತಿಲ್ಲ. ನಕಲಿ ವೆಬ್‌ಸೈಟ್‌ಗಳನ್ನು ನಿಷ್ಕ್ರಿಯಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕಿದೆ. ಭವಿಷ್ಯದಲ್ಲಿ ಎದುರಾಗುವ ಸೈಬರ್ ಸಮಸ್ಯೆ ತಡೆಯಲು ಈಗಲೇ ಪ್ರಮುಖವಾಗಿ ಕೇಂದ್ರದಲ್ಲಿ ಸೈಬರ್ ಸೆಕ್ಯೂರಿಟಿ ಸಚಿವಾಲಯ ತೆರೆಯಬೇಕಿದೆ.
– ಶುಭಮಂಗಳ. ಸೈಬರ್ ತಜ್ಞೆ.
-ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.