Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
ಜ್ಞಾನೇಂದ್ರ ಅವರನ್ನು ಆಯ್ಕೆ ಮಾಡಿದ್ದೆ ನಮ್ಮ ದುರಂತ ಎಂದ ಕಿಮ್ಮನೆ ರತ್ನಾಕರ್!
Team Udayavani, Nov 15, 2024, 1:09 PM IST
ತೀರ್ಥಹಳ್ಳಿ: ಆರಗ ಜ್ಞಾನೇಂದ್ರ ಅವರು 25 ವರ್ಷ ರಾಜಕೀಯದಲ್ಲಿದ್ದು, ಅರಣ್ಯ ಇಲಾಖೆಯ ಜಾಗದಲ್ಲಿ ಮದ್ಯದ ಅಂಗಡಿ ಮಾಡಲು ಪ್ರತಿಭಟನೆ ಮಾಡ್ತಾರಲ್ಲ, ಅಂತಹ ವಿಷಯದಲ್ಲಿ ಶಾಸಕ ಸ್ಥಾನವನ್ನು ಅಡ (ಗಿರವಿ) ಇಡುವುದಾದರೆ ರಾಜೀನಾಮೆ ಕೊಟ್ಟು ಹೋಗಲಿ. ಇವರನ್ನು ಆಯ್ಕೆ ಮಾಡಿದ್ದೆ ನಮ್ಮ ದುರಂತ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.
ನ.15ರ ಶುಕ್ರವಾರ ಪಟ್ಟಣದ ಗಾಂಧಿಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮದ್ಯದಂಗಡಿ ಬಿಜೆಪಿಯವರಾದರೆ ಯಾರೇ ಸಾಯಲಿ ಅಥವಾ, ಸಂಬಂಧಿಕರೇ ಸತ್ತರು ಪರವಾಗಿಲ್ಲ, ಇಂತಹ ಶಾಸಕರ ಅಗತ್ಯ ಕ್ಷೇತ್ರಕ್ಕೆ ಇದೆಯೇ? ಸಮಾಜಕ್ಕೆ ವಿವೇಕ ಹೇಳುವವರು ಹೀಗೆ ಮಾಡುತ್ತಾರ? ತಾಲೂಕಿನಲ್ಲಿ ಯಾರು ಮರಳು ಹೊಡೆಯುತ್ತಾರೆ ಎಂದು ಪ್ರತಿಯೊಬ್ಬರಿಗೂ ಮಾಹಿತಿ ಕೊಟ್ಟಿದ್ದೇನೆ. ಟ್ರಂಚ್ ಹೊಡೆದರೆ ಅದನ್ನು ತೆಗೆಸುತ್ತಾರೆ, ಇಂತಹ ಶಾಸಕರು ನಮಗೆ ಬೇಕಾ? ಎಂದು ಪ್ರಶ್ನಿಸಿದರು.
ಆರಗ ಜ್ಞಾನೇಂದ್ರ ಜೊತೆ ಚರ್ಚೆ ಮಾಡಲು ನಾನು ಸಿದ್ದ. ನನ್ನ ಹಾಗೂ ಅವರ ಸಿದ್ದಾಂತದ ಬಗ್ಗೆ ಮಾತನಾಡೋಣ. ನನ್ನ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಹಾಗೂ ಅವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಣ. ವಿರೋಧ ಪಕ್ಷದಲ್ಲಿದ್ದು, ಸಹ ನಾನು 200 ಕೋಟಿ ಹಣ ತಂದಿದ್ದೇನೆ. ಹಾಗಾದರೆ ಇವರ ಕೈಲಿ ಯಾಕೆ ಹಣ ತರಲು ಸಾಧ್ಯ ಆಗುತ್ತಿಲ್ಲ? ಇವರ ನಡುವಳಿಕೆ ಸರಿಯಿಲ್ಲ. ಮೊದಲು ಅವರ ನಡುವಳಿಕೆ ಸರಿ ಮಾಡಿಕೊಳ್ಳಲಿ. ಅವರ ಮುಖದಲ್ಲಿರುವ ದ್ವೇಷದ ಭಾವನೆಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಅವರು ನನಗಿಂತ ಮೊದಲು 15 ವರ್ಷ ಶಾಸಕರಾಗಿದ್ದರು. ಆಗ ಏನು ಅಭಿವೃದ್ಧಿ ಮಾಡಿದ್ದರು. 25 ವರ್ಷದ ಅವರ ಸಾಧನೆ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಒಂದು ಘಟನೆ.. ನಾನು ಹತ್ತು ವರ್ಷಗಳ ಕಾಲ ಶಾಸಕನಾಗಿ ಇದ್ದಾಗ ಆಗಿದೆಯೇ? ಬುಕ್ಲಾಪುರದಲ್ಲಿ ಯಾರು ಮರಳು ಹೊಡೆಯುತ್ತಿರುವುದು? ಬಿಜೆಪಿಯವರು ಮರಳು ಹೊಡೆದರೆ ಅರಣ್ಯ ಇಲಾಖೆ ಅಥವಾ ಯಾವುದೇ ಜಾಗವಾಗಿರಲಿ ಮರಳು ಹೊಡೆಯಬಹುದೇ? ಎಂದು ಪ್ರಶ್ನಿಸಿದ ಅವರು, ಇವರು ಮಾಡಿರುವ ಸಾಧನೆ ಏನು ಎಂದರೆ ಮುಸ್ಲಿಂ ವಿಷಯ ಸಿಕ್ಕಿದರೆ, ನಂದಿತಾ ವಿಷಯದಲ್ಲಿ ಕೋಮುಗಲಭೆ ವಿಷಯದಲ್ಲಿ ಗಲಾಟೆ ಮಾಡಿದ್ದಾರೆ ಹೊರತು ಮತ್ತೇನು ಮಾಡಿಲ್ಲ. ಕೊರೋನ ಸಂದರ್ಭದಲ್ಲಿ ತಬ್ಲಿಘಿಗಳಿಂದ ಕೊರೋನ ರೋಗ ಬಂತು ಎಂದು ಬಾಯಿ ಬಡಿದುಕೊಂಡರಲ್ಲ, ಇವರಿಗೂ ಎರಡು ಬಾರಿ ಕೊರೋನ ಬಂದಿತ್ತಲ್ಲ, ಇವರ್ಯಾಕೆ ತಬ್ಲಿಘಿ ಬಳಿ ಹೋಗಿದ್ದರು ಎಂದು ಪ್ರಶ್ನೆ ಮಾಡಿದರು.
ಇವರು ಎಲ್ಲಿಗೆ ಹೋದರೂ ಕೂಡ ಮೋದಿ, ಉಪನಯನ, ಕಾರ್ಯಕ್ರಮ, ಮಾಧ್ಯಮದವರು ಸೇರಿ ಯಾರ ಜೊತೆಗೂ ಮಾತನಾಡುವಾಗಲು ಮೋದಿ, ಮೋದಿ ಈ ದೇಶದಲ್ಲಿ ಬಿಜೆಪಿಯವರೆಲ್ಲರೂ ಪರಿಶುದ್ಧರೇ? ಇವರ ಪರಿಶುದ್ಧತೆಯನ್ನು ಇನ್ನು 15 ದಿನದಲ್ಲಿ ನಾನು ಬಹಿರಂಗ ಮಾಡುತ್ತೇನೆ. ಜ್ಞಾನೇಂದ್ರ ಅವರ ವಿರುದ್ಧ ದೊಡ್ಡಮಟ್ಟಿನ ಪ್ರತಿಭಟನೆ ಸದ್ಯದಲ್ಲೇ ಆಗಲಿದೆ. ಸಭೆಯಲ್ಲಿ ಮಾತನಾಡುವಾಗ ಅ ಸಭೆಗೆ ಸಂಬಂಧಪಟ್ಟ ವಿಷಯ ಮಾತನಾಡಲು ಹೇಳಿ, ಮೋದಿ, ಮೋದಿ, ಆರ್.ಎಸ್.ಎಸ್. ಎನ್ನುವ ಬದಲು ಕಾರ್ಯಕ್ರಮದ ಬಗ್ಗೆ ವಿಷಯ ಮಾತನಾಡಲು ಹೇಳಿ ಅದು ಅವರಿಗೂ ಹಾಗೂ ಸಭೆಗೂ ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ಜಿ.ಎಸ್. ನಾರಾಯಣ ರಾವ್, ವಿಶ್ವನಾಥ್ ಶೆಟ್ಟಿ, ರಹಮತ್ ಉಲ್ಲಾ ಅಸಾದಿ, ರಾಘವೇಂದ್ರ ಶೆಟ್ಟಿ,ವಿಲಿಯಮ್ ಮಾರ್ಟಿಸ್, ಗೀತಾ ರಮೇಶ್ ಸುಶೀಲಾ ಶೆಟ್ಟಿ, ಶಬನಮ್, ರತ್ನಾಕರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್
Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Tabla Maestro; ಉಸ್ತಾದ್ ಜಾಕೀರ್ ಹುಸೇನ್ ದೈವೀ ಪುರುಷ
Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.