ಈ ಬಾರಿಯೂ ದಸರಾ ಹಬ್ಬದ ಪ್ರಯಾಣ ದುಬಾರಿ

Team Udayavani, Sep 29, 2017, 7:40 AM IST

ksrtc.jpg

ಬೆಂಗಳೂರು: ಹಬ್ಬದ ಆಚರಣೆಗೆ ಊರಿಗೆ ಹೋಗುವವರಿಗೆ ಬಸ್‌ ಕೊರತೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನೇ ಮಾನದಂಡವಾಗಿಟ್ಟುಕೊಂಡು ಏಕಾಏಕಿ ಬಸ್‌ ಟಿಕೆಟ್‌ ದರ ದುಪ್ಪಟ್ಟು ಮಾಡಿದ ಖಾಸಗಿ ಬಸ್‌ ಮಾಲೀಕರು, ದರ
ದುಪ್ಪಟ್ಟಾದರೂ ಪರವಾಗಿಲ್ಲ. ಊರಿಗೆ ಹೋಗಲು ಬಸ್‌ ಸಿಕ್ಕಿದರೆ ಸಾಕು ಎನ್ನುತ್ತಿರುವ ಪ್ರಯಾಣಿಕರು… ಇದು, ದಸರಾ ಹಬ್ಬದ ರಜೆಗೆ ಬೆಂಗಳೂರಿನಿಂದ ಸ್ವಂತ ಊರಿಗೆ ಹೊರಟು ನಿಂತಿರುವವರ ಗೋಳು. ಕಳೆದ ಹತ್ತು ಹದಿನೈದು ದಿನಗಳ
ಹಿಂದೆಯೇ ಬುಕ್‌ ಮಾಡಿದವರಿಗೆ ಟಿಕೆಟ್‌ ಸಿಕ್ಕಿದೆ. ತುರ್ತಾಗಿ ಮನೆಗೆ ಹೋಗಲು ಸಜ್ಜಾಗಿರುವ ಪ್ರಯಾಣಿಕರಿಗೆ ಬಸ್‌ ಸಿಗುತ್ತಿಲ್ಲ ಎಂಬ ತಲೆನೋವು ಆರಂಭವಾಗಿದೆ. ಈ ಮಧ್ಯೆ, ಹೆಚ್ಚುವರಿ ಬಸ್‌ ಗಳನ್ನೂ ಬಿಡಲಾಗಿದೆ. ಬುಕ್ಕಿಂಗ್‌ ಮಾಡಿಕೊಳ್ಳದೆ ಮೆಜೆಸ್ಟಿಕ್‌, ಯಶವಂತಪುರ, ಮೊದಲಾದ ಭಾಗದಿಂದ ತುರ್ತಾಗಿ ಊರಿಗೆ ಹೋಗುವವರಿಂದ ಬೇಕಾಬಿಟ್ಟಿ ದರ ವಸೂಲಿ ಮಾಡಲಾಗುತ್ತಿದೆ. ಇನ್ನೊಂದೆಡೆ ಟಿಕೆಟ್‌ ಮಾಡಲು ಕೌಂಟರ್‌ಗೆ, ಆನ್‌ಲೈನ್‌ ಸೈಟ್‌ಗೆ ಹೋದರೆ, ಟಿಕೆಟ್‌ ಸೋಲ್ಡ್‌ ಔಟ್‌ ಎಂಬ ಸಂದೇಶ ಬರುತ್ತಿದೆ. ಇದನ್ನೆ ಅವಕಾಶವಾಗಿ ಬಳಸಿಕೊಂಡಿರುವ ಖಾಸಗಿ ಬಸ್‌ ಮಾಲೀಕರು, ಬಸ್‌ ಟಿಕೆಟ್‌ ದರ 850 ರೂ.ಇರುವುದನ್ನು 1,350-1,500ಕ್ಕೆ ಏರಿಸಿದ್ದಾರೆ. ಎಲ್ಲಾ ರೂಟ್‌ಗಳ
ಬಸ್‌ ದರಗಳೂ ಹೆಚ್ಚಿವೆ. 

ಕೆಎಸ್‌ಆರ್‌ಟಿಸಿಯಿಂದ 1,500 ಹೆಚ್ಚುವರಿ ಬಸ್‌: ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಐರಾವತ, ಡೈಮಂಡ್‌ ಕ್ಲಾಸ್‌, ಕ್ಲಬ್‌ಕ್ಲಾಸ್‌, ರಾಜಹಂಸ, ಸ್ಲಿàಪರ್‌ ಕೋಚ್‌… ಹೀಗೆ ನಾನಾ ವರ್ಗದ ಬಸ್‌ಗಳ ಜತೆಗೆ ಸಾಮಾನ್ಯ ಬಸ್‌ ಸೇರಿ ಬೆಂಗಳೂರಿನಿಂದ ಮಂಗಳೂರು, ಮೈಸೂರು, ಕುಂದಾಪುರ, ಹುಬ್ಬಳ್ಳಿ, ರಾಯಚೂರು, ಬಳ್ಳಾರಿ, ಗೋಕರ್ಣ,
ಮುರುಡೇಶ್ವರ, ಮಡಿಕೇರಿ, ಬೀದರ್‌, ಯಾದಗಿರಿ, ಧಾರವಾಡ…ಹೀಗೆ ರಾಜ್ಯದ ವಿವಿಧ ಭಾಗಕ್ಕೆ ಸುಮಾರು 3,500 ಬಸ್‌ ನಿತ್ಯ ಸಂಚಾರ ಮಾಡುತ್ತಿವೆ. ದಸರಾ ಹಬ್ಬದ ನಿಮಿತ್ತ ಊರಿಗೆ ಹೋಗುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್‌ಆರ್‌ ಟಿಸಿಯಿಂದ ಹೆಚ್ಚುವರಿಯಾಗಿ 1,500 ಬಸ್‌ ನಿಯೋಜನೆ ಮಾಡಲಾಗಿದೆ.

ಪ್ರತ್ಯೇಕ ವ್ಯವಸ್ಥೆ: ನಗರದ ಪ್ರಮುಖ ರಸ್ತೆಗಳಲ್ಲಿ ದೂರ ಪ್ರಯಾಣದ ಬಸ್‌ಗಳಿಂದ ಹೆಚ್ಚು ಟ್ರಾμಕ್‌ ಸಮಸ್ಯೆಯಾಗುತ್ತಿದೆ. ಹಬ್ಬದ ದಿನಗಳಲ್ಲಿ ಬಸ್‌ ಸಂಖ್ಯೆ ಏರಿಕೆಯಾಗಿರುವುದರಿಂದ ಟ್ರಾμಕ್‌ ಕಿರಿಕಿರಿಇನ್ನಷ್ಟು ಹೆಚ್ಚಿರುತ್ತದೆ. ಹೀಗಾಗಿ, ಕೆಎಸ್‌ಆರ್‌ ಟಿಸಿಯಿಂದ ಮೆಜೆಸ್ಟಿಕ್‌, ಸ್ಯಾಟಲೈಟ್‌, ವಿಜಯನಗರ, ಜಯನಗರ, ಬನಶಂಕರಿ ಹಾಗೂ ಪೀಣ್ಯ (ಶ್ರೀಬಸವೇಶ್ವರ ಬಸ್‌ ನಿಲ್ದಾಣ)ದಿಂದಪ್ರಯಾಣಿಕರಿಗೆ ಹೊರಡಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಬಸ್‌ಗಳು ಮೆಜೆಸ್ಟಿಕ್‌ನಿಂದ, ಉತ್ತರ ಕರ್ನಾಟಕದ ಬಸ್‌ಗಳು ಪೀಣ್ಯದಿಂದ ಮೈಸೂರು,ಮಡಿಕೇರಿ ಹಾಗೂ ಕೇರಳಕ್ಕೆ ಹೋಗುವ ಬಸ್‌ಗಳು ಸ್ಯಾಟಲೈಟ್‌ ಬಸ್‌ ನಿಲ್ದಾಣದಿಂದ ಹೊರಡಲಿವೆ.

ಗುರುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿನಿಂದ ಬೇರೆ ಬೇರೆ ಊರಿಗೆ ಸುಮಾರು 1.35 ಲಕ್ಷ ಜನ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಿಂದ ಮಂಗಳೂರು, ಕಾರವಾರ ಹಾಗೂ ಕೇರಳಕ್ಕೆ ಹೊರಡುವ ಎಲ್ಲಾ ರೈಲುಗಳು ಭರ್ತಿಯಾಗಿದೆ.

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.