ಇದೇ ವಾರ 2 ಪಕ್ಷಗಳ ಪಟ್ಟಿ? ಮೋದಿ, ಶಾ, ನಡ್ಡಾ ಉಪಸ್ಥಿತಿಯಲ್ಲಿ ರಾಜ್ಯ ಬಿಜೆಪಿ ನಾಯಕರ ಸಭೆ
ಕಾಂಗ್ರೆಸ್‌ನಲ್ಲೂ ಚುರುಕು, 22 ಕ್ಷೇತ್ರಗಳ ಹೆಸರು ಅಂತಿಮಗೊಳ್ಳುವ ನಿರೀಕ್ಷೆ
Team Udayavani, Mar 6, 2024, 7:10 AM IST
ದಿಲ್ಲಿಗೆ ಬಿಜೆಪಿ ನಾಯಕರು
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ರಾಜ್ಯದ ಬಹುತೇಕ ನಾಯ ಕರು ಬುಧವಾರ ಮತ್ತು ಗುರು ವಾರ ದಂದು ಹೊಸದಿಲ್ಲಿ ಪ್ರವಾಸ ಕೈಗೊಳ್ಳು ವರು. ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದ ಸ್ಯರೂ ಆಗಿರುವ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಸಂಜೆ, ಶಿವಮೊಗ್ಗ ದಿಂದ ಹೊರಟು ಹೈದರಾಬಾದ್ ಮೂಲಕ ದಿಲ್ಲಿ ತಲುಪಿದ್ದು, ಬುಧವಾರ ರಾಷ್ಟ್ರೀಯ ಬಿಜೆಪಿ ಕಚೇರಿ ಯಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವರು.
ಇದೇ ಸಭೆಗಾಗಿ ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಉಪನಾಯಕ ಅರವಿಂದ ಬೆಲ್ಲದ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಕೂಡ ಬುಧವಾರ ಬೆಳಗ್ಗೆ ದಿಲ್ಲಿಯತ್ತ ಪ್ರಯಾಣ ಬೆಳೆಸುವರು.
ಬುಧವಾರ ಸಂಜೆ 5 ಗಂಟೆ ವೇಳೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಗುರುವಾರದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಎರಡೂ ಸಭೆಗಳಲ್ಲಿ ರಾಜ್ಯ ಬಿಜೆಪಿಯ ಪ್ರಮುಖರು ಭಾಗಿಯಾಗುವರು. ಈಗಾಗಲೇ ವೀಕ್ಷಕರು ನೀಡಿರುವ 28 ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಮಾ.8ರ ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿಯ ಸಭೆ ನಡೆಯಲಿದೆ. ರಾಜ್ಯದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಜೆಡಿಎಸ್ ಜತೆಗಿನ ಹೊಂದಾಣಿಕ ಮಾಡಿಕೊಳ್ಳಬಹುದಾದ ಕ್ಷೇತ್ರಗಳನ್ನು ಹೊರತುಪಡಿಸಿ, ಬಿಜೆಪಿಗೆ ಕಗ್ಗಂಟಾಗದೇ ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಯಾಗುವ ಸಂಭವ ನಿಚ್ಚಳವಾಗಿದೆ.
ಮೋದಿ, ಶಾ ತೀರ್ಮಾನ
ದಿಲ್ಲಿಯಲ್ಲಿ ಬುಧವಾರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ತೀರ್ಮಾನ ಕೈಗೊಳ್ಳಲಿದ್ದಾರೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ (ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ)
ಮಹತ್ವವೇನು?
-ಈಗಾಗಲೇ ದಿಲ್ಲಿಗೆ ತಲುಪಿ ದ್ದಾರೆ ಬಿಎಸ್‌ವೈ. ಇಂದು ದಿಲ್ಲಿಯತ್ತ ತೆರಳಲಿರುವ ಇತರೆ ರಾಜ್ಯ ಬಿಜೆಪಿ ನಾಯಕರು
-ಬುಧವಾರ ಜೆ.ಪಿ. ನಡ್ಡಾ ಅಧ್ಯಕ್ಷತೆ ಯಲ್ಲಿ ಸಭೆ, ಗುರುವಾರ ಅಮಿತ್ ಶಾ ಉಪಸ್ಥಿತಿಯಲ್ಲಿ ಸಭೆ.
-ಶುಕ್ರವಾರ ಪ್ರಧಾನಿ ಮೋದಿ ಸಮ್ಮುಖದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ
-ವೀಕ್ಷಕರು ನೀಡಿರುವ 28 ಲೋಕಸಭಾ ಕ್ಷೇತ್ರಗಳ ಆಕಾಂಕ್ಷಿಗಳ ಬಗ್ಗೆ ಚರ್ಚೆ.
-ರಾಜ್ಯ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಅಂತಿಮಗೊಳಿಸುವ ಸಾಧ್ಯತೆ. -ಕಗ್ಗಂಟಾಗದೇ ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ?
ನಾಳೆ, ನಾಡಿದ್ದು ಕಾಂಗ್ರೆಸ್ ಸಭೆ
ಬೆಂಗಳೂರು: ಲೋಕ ಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ “ಕೈ’ ಪಡೆ, ಅಭ್ಯರ್ಥಿಗಳ ಆಯ್ಕೆ ಪಟ್ಟಿಗೆ ಅಂತಿಮಸ್ಪರ್ಶ ನೀಡುವ ಕಸರತ್ತು ನಡೆಸಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ವಾರಾಂತ್ಯದಲ್ಲಿ ಮೊದಲ ಪಟ್ಟಿ ಹೊರಬೀಳಲಿದೆ.
ಕಾಂಗ್ರೆಸ್ ರಾಜ್ಯ ಉಸ್ತು ವಾರಿ ರಣದೀಪ್ ಸಿಂಗ್ ಸುಜೇì ವಾಲ ಬೆಂಗ ಳೂರು ಭೇಟಿ ಬೆನ್ನಲ್ಲೇ, ಅಭ್ಯರ್ಥಿ ಗಳ ಪಟ್ಟಿ ಸಿದ್ಧತೆ ಮತ್ತಷ್ಟು ಚುರುಕು ಗೊಂಡಿದೆ. ಈ ಸಂಬಂಧ ಇದೇ 7ರಂದು ರಾಜ್ಯ ನಾಯಕರ ಸಭೆ ನಡೆಯಲಿದೆ. ಅದರ ಮರುದಿನ ಮಾ. 8ರಂದು ಚುನಾ ವಣಾ ಸಮಿತಿ ಸಭೆ ದಿಲ್ಲಿ ಯಲ್ಲಿ ನಡೆಯ ಲಿದೆ. ಅಲ್ಲಿ ಬಹು ತೇಕ ಕ್ಷೇತ್ರ ಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮ ಗೊಳ್ಳುವ ನಿರೀಕ್ಷೆ ಇದೆ.
ಸುನೀಲ್ ಕನಗೋಳು, ಜಿಲ್ಲಾ ಉಸ್ತುವಾರಿಗಳು ಸೇರಿದಂತೆ ವಿವಿಧ ಹಂತಗಳ ಸಮೀಕ್ಷೆ ನಂತರ ಗರಿಷ್ಠ 2-3 ಸಂಭವನೀಯರ ಹೆಸರುಗಳು ಪಕ್ಷದ ನಾಯಕರ ಮುಂದಿವೆ. ಸೋಮವಾರ ಸುಜೇìವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆದ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬಂದಿದೆ. ಅಲ್ಲಿ ಜಾತಿ ಸಮೀಕರಣ, ಹಣಬಲ, ಸ್ಥಳೀಯ ವರ್ಚಸ್ಸು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಬಣ ಮತ್ತಿತರ ಅಂಶಗಳನ್ನು ಅಳೆದು-ತೂಗಿ ಪಟ್ಟಿಯನ್ನು ದಿಲ್ಲಿಗೆ ಕಳುಹಿಸಲಾಗುತ್ತಿದೆ. ಮೊದಲ ಪಟ್ಟಿಯಲ್ಲಿ ಬಹುತೇಕ 20-22 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಬಹುದು ಎನ್ನುತ್ತವೆ ಮೂಲಗಳು.
ಸಮೀಕ್ಷೆ ವರದಿಗಳ ಹೊರತಾಗಿಯೂ ಅಯೋಧ್ಯೆಯಲ್ಲಾದ ರಾಮಮಂದಿರ ಉದ್ಘಾಟನೆ, ಈಚೆಗೆ ವಿಧಾನಸೌಧದಲ್ಲಿ “ಪಾಕಿಸ್ತಾನ ಜಿಂದಾಬಾದ್ ಘೋಷಣೆ’, ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಹಲವು ಬೆಳವಣಿಗೆಗಳು ಅಭ್ಯರ್ಥಿಗಳ ಆಯ್ಕೆ ಮೇಲೆ ಪರಿಣಾಮ ಬೀರಿವೆ. ಈ ಎಲ್ಲ ಅಂಶಗಳನ್ನು ಕ್ರೋಢೀಕರಿಸಿ, ಪಟ್ಟಿ ಅಂತಿಮಗೊಳ್ಳಲಿದೆ. ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿದ್ದು, ಅಲ್ಲಿಂದ ಅಭ್ಯರ್ಥಿಗಳಿಗೆ ಸಮಯಾವಕಾಶ ತುಂಬಾ ಕಡಿಮೆ ಇರಲಿದೆ. ಹಾಗಾಗಿ, ತ್ವರಿತ ಗತಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಹೈಕಮಾಂಡ್‌ನ ಲೆಕ್ಕಾಚಾರ.
ಇನ್ನು ಕೆಲವೆಡೆ ಗೆಲುವುದು ತುಂಬಾ ಕಷ್ಟಸಾಧ್ಯ ಎನ್ನುವ ಹಾಗೂ ವಿಪಕ್ಷಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ 8-10 ಕ್ಷೇತ್ರಗಳನ್ನು ಈ ಮೊದಲು ಗುರುತಿಸಿ, ಅಲ್ಲೆಲ್ಲ ಸಚಿವರನ್ನು ಅಖಾಡಕ್ಕಿಳಿಸುವ ಆಲೋಚನೆ ಇತ್ತು. ಈಗ ಅದು ನೇಪಥ್ಯಕ್ಕೆ ಸರಿದಿದೆ. ಸಚಿವರು ತಮ್ಮ ಬದಲಿಗೆ ಆಪ್ತರು, ದೂರದ ಸಂಬಂಧಿಗಳಿಗೆ ಟಿಕೆಟ್ ಕೊಡಿಸಿ ಶತಾಯಗತಾಯ ಗೆಲ್ಲಿಸಿಕೊಂಡು ಬರುವುದಾಗಿ ನಾಯಕರಿಗೆ ಅಭಯ ನೀಡುತ್ತಿದ್ದಾರೆ ಎನ್ನಲಾಗಿದೆ.
ಮಹತ್ವವೇನು?
-ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುಜೇìವಾಲ ಬೆಂಗಳೂರು ಭೇಟಿ ಬೆನ್ನಲ್ಲೇ, ಅಭ್ಯರ್ಥಿಗಳ ಪಟ್ಟಿ ಸಿದ್ಧತೆ ಕಾರ್ಯಕ್ಕೆ ಮತ್ತಷ್ಟು ವೇಗ.
-ಮಾ.7ರಂದು ರಾಜ್ಯ ನಾಯ ಕರ ಸಭೆ. ಮಾ.8ರಂದು ದಿಲ್ಲಿ ಯಲ್ಲಿ ನಡೆಯಲಿದೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ.
-ಜಾತಿ ಸಮೀಕರಣ, ಸ್ಥಳೀಯ ವರ್ಚಸ್ಸು ಮತ್ತಿತರ ಅಂಶಗಳನ್ನು ಅಳೆದು-ತೂಗಿ ಪಟ್ಟಿ ದೆಹಲಿಗೆ ರವಾನೆ.
-ಮೊದಲ ಪಟ್ಟಿಯಲ್ಲಿ ಬಹುತೇಕ 20-22 ಕ್ಷೇತ್ರ ಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ನಿರೀಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.