ಮೂವರಿಗೆ ದೃಶ್ಯಕಲಾ ಜೀವಮಾನ ಸಾಧನೆ ಗೌರವ ಪ್ರಶಸ್ತಿ
Team Udayavani, Jun 29, 2017, 3:45 AM IST
ಬೆಂಗಳೂರು: ದೃಶ್ಯಕಲಾ ಪ್ರಪಂಚಕ್ಕೆ ಜೀವಮಾನದ ಅಮೂಲ್ಯ ಸೇವೆ ಪರಿಗಣಿಸಿ 2017ನೇ ಸಾಲಿನ ಗೌರವ ಪ್ರಶಸ್ತಿಗೆ ಮೂವರು ಹಿರಿಯ ಕಲಾವಿದರಾದ ಬಿ.ಜಿ.ಗುಜ್ಜಾರಪ್ಪ (ಬೆಂಗಳೂರು), ಎಂ.ಸಿ.ಚೆಟ್ಟಿ (ಹುಬ್ಬಳ್ಳಿ) ಹಾಗೂ ವಿಜಯ ಬಾಗೋಡಿ (ಕಲಬುರಗಿ) ಅವರನ್ನು ಆಯ್ಕೆ ಮಾಡಲಾಗಿದೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ, ಈ ಮೂವರು ಹಿರಿಯ ಕಲಾವಿದರನ್ನು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 50
ಸಾವಿರ ರೂ.ನಗದು, ಪ್ರಶಸ್ತಿ ಪತ್ರ, ಫಲಕನೀಡಿ ವಾರ್ಷಿಕ ಕಲಾಪ್ರದರ್ಶನದಲ್ಲಿ ಗೌರವಿಸಲಾಗುವುದು ಎಂದು ತಿಳಿಸಿದರು.
ಪುಸ್ತಕ ಬಹುಮಾನ: 2016 ಮತ್ತು 17ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ಎಸ್.ಸಿ.ಪಾಟೀಲ ಹಾಗೂ ಕಲಬುರಗಿ ಜಿಲ್ಲೆಯ ಬಾಗೋಡಿಯ ಡಾ.ಸಿ.ಮಲ್ಲಿಕಾರ್ಜುನ ಅವರ ಕೃತಿಗಳು ಆಯ್ಕೆಗೊಂಡಿವೆ. ಪುರಸ್ಕೃತರಿಗೆ ತಲಾ 25 ಸಾವಿರ ನಗದು, ಪ್ರಶಸ್ತಿ ಪತ್ರ, ಫಲಕ ನೀಡಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ವಾರ್ಷಿಕ ಕಲಾ ಬಹುಮಾನ: ಕರ್ನಾಟಕ ಲಲಿತ ಕಲಾ ಅಕಾಡೆಮಿಯು 2017-18ನೇ 49ನೇ ವಾರ್ಷಿಕ ಕಲಾಪ್ರದರ್ಶನ ಹಾಗೂ ಬಹುಮಾನಕ್ಕೆ 10 ಕಲಾವಿದರನ್ನು ಆಯ್ಕೆ ಮಾಡಲಾಗಿದೆ.
ಕಲಬುರಗಿಯ ಪ್ರಕಾಶ್ ಗಡ್ಕರ್, ಇಳಕಲ್‌ನ ಚಂದ್ರಕಾಂತ ಸರೋದೆ (ತೈಲವರ್ಣ), ಬೆಳಗಾವಿ ಮಹ್ಮದ ಇಸಾØಕ ಗುಲಾಬಶಾ ಮಕಾನದಾರ (ಜಲವರ್ಣ), ಹುಬ್ಬಳ್ಳಿಯ ಜಿ.ಆರ್.ಮಲ್ಲಾಪೂರ, ಚಿತ್ರದುರ್ಗದ ಎನ್.ಪಾಲಯ್ಯ, ಯಾದಗಿರಿಯ ನರಸಿಂಹ ಗಂಟಿ (ಅಕ್ರಲಿಕ್), ಕಲಬುಗರಿಯ ಡಾ.ಅಶೋಕ ಎಸ್.ಶಟಗಾನ, ಚಿಕ್ಕಮಗಳೂರಿನ
ಎಂ.ಎಚ್.ಜಯಪ್ರಕಾಶ್ (ಮಿಶ್ರ ಮಾಧ್ಯಮ), ಮಂಡ್ಯದ ಎನ್.ಪೂರ್ಣಿಮಾ (ಅಥೋಗ್ರμ), ಬಳ್ಳಾರಿಯ ನಿಹಾಲ್ ವಿಕ್ರಂ ರಾಜು (ಪೆನ್ ಮತ್ತು ಇಂಕ್-ಡ್ರಾಯಿಂಗ್) ಅವರ ಕಲಾಕೃತಿಗಳು ಆಯ್ಕೆಯಾಗಿವೆ.
ಕಲಾ ಪುರಸ್ಕಾರ: ಸುವರ್ಣ ಸಂಭ್ರಮ ಕಲಾ ಪುರಸ್ಕಾರ ವಿಶೇಷ ಬಹುಮಾನಕ್ಕೆ ಮಹಾಲಿಂಗಪುರದ ಡಿ.ಕೆ.ರಂಗನಾಥ (ಭಾವಚಿತ್ರ), ಚಾಮರಾಜನಗರದ ಎಸ್.ವಿರೂಪಾಕ್ಷ(ಸ್ಮಾರಕ ಸ್ತಂಭ ಶ್ರೀರಂಗಪಟ್ಟಣ (ಪ್ರಕೃತಿ ಚಿತ್ರ), ಬೆಂಗಳೂರಿನ ಎಚ್.ಪಿ.ಶಾಂತಲ (ಬ್ಯಾಟಲ್ ಬಿಟ್ವೀನ್ ರಾಮ ಮತ್ತು ರಾವಣ), ಕೊಪ್ಪಳದ ಗಂಗಾಧರ ಈ ಬಂಡಾನವರ (ಕ್ರೈಂ ನ್ಯೂಸ್), ಬಾಗಲಕೋಟೆಯ ವೀರೇಶ ಎಂ. ರುದ್ರಸ್ವಾಮಿ (ಫ್ಲೋ ಆಫ್ ಮೈಂಡ್), ಬೆಳಗಾವಿಯ ಡಾ.ಸುಭಾಷ ಕಮ್ಮಾರ (ಅವನಂತಾಗಬೇಕು), ಕಲಬುರಗಿಯ ರಾಮಲಿಂಗ ಬೆಳಕೋಟೆ (ದಿ ಕಾಂಕ್ರಿಟ್ ಫಾರೆಸ್ಟ್), ಹುಣಸೂರಿನ ವೀರಣ್ಣ ಕರಡಿ (ಪರಿಸರ), ಮೈಸೂರು ಕೆ.ಎಸ್.ಪರಮೇಶ್ವರ (ಪವರ್ ಆಫ್ ಬುಲ್), ಬೆಂಗಳೂರಿನ ಎಚ್.ಸತೀಶ್ (ಕರ್ವ್ಸ್) ಅವರ ಕಲಾಕೃತಿಗಳು ಆಯ್ಕೆಗೊಂಡಿವೆ ಎಂದು ಡಾ.ಎಂ.ಎಸ್.ಮೂರ್ತಿ ತಿಳಿಸಿದರು.
ಜು.5ರಂದು ಪ್ರಶಸ್ತಿ ಪ್ರದಾನ
46ನೇ ವಾರ್ಷಿಕ ಕಲಾ ಪ್ರದರ್ಶನ ಜು.5ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸುವರು. ಅಂದು ಸಂಜೆ 6ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಸುವರ್ಣ
ಸಂಭ್ರಮ ಕಲಾಪುರಸ್ಕಾರ, ಪುಸ್ತಕ ಬಹುಮಾನ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.