Politics: ಮೂವರು ಬಿಜೆಪಿ ಸಂಸದರು,ಮಾಜಿ ಸಿಎಂ ಕಾಂಗ್ರೆಸ್ ಸಂಪರ್ಕದಲ್ಲಿ: ಡಿ.ಕೆ. ಶಿವಕುಮಾರ್
Team Udayavani, Mar 13, 2024, 11:55 AM IST
ಕಲಬುರಗಿ: ಕಾಂಗ್ರೆಸ್ ಸೇರ್ಪಡೆಯಾಗಲು ಮೂವರು ಬಿಜೆಪಿ ಸಂಸದರು ಬಯಸಿದ್ದು, ಅದಲ್ಲ ಮಾಜಿ ಸಿಎಂ ಒಬ್ಬರೂ ಕೂಡ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಯಾರು? ಮತ್ತು ಎಲ್ಲಿಂದ ಸ್ಪರ್ಧಿಸುತ್ತಾರೆ ಎನ್ನುವ ಗುಟ್ಟು ಬಿಟ್ಟು ಕೊಡಲು ಸುತ್ತರಾಂ ಒಪ್ಪದ ಅವರು, ವಿರೋಧ ಪಕ್ಷರದವರು ಲೋಕಸಭೆಯ ಬಳಿಕ ವಿಚಾರ ಮಾತಾಡ್ತಾರೆ. ಅದಕ್ಕೂ ಮುನ್ನವೇ ನಾವೇ ಕ್ಲೈಮಾಕ್ಸ್ ತೋರಿಸುತ್ತೇವೆ ಎಂದರು.
ಸರ್ಕಾರದ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ನಗರಕ್ಕೆ ಬಂದಿರುವ ಶಿವಕುಮಾರ್ ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದಿಷ್ಟೇ ಅಲ್ಲ, ಇನ್ನೂ ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ಬಿಜೆಪಿಯ ಡಿ.ವಿ.ಸದಾನಂದಗೌಡ ಅವರು ಬೆಂಗಳೂರಿನ ಕ್ಷೇತ್ರವೊಂದರಿಂದ ಕಾಂಗ್ರೆಸ್ ಟಿಕೆಟ್ ಮೂಲಕ ಸ್ಪರ್ಧಿಸುವ ಸಾಧ್ಯತೆಗಳ ಕುರಿತು ಶಿವಕುಮಾರ್ ಏನು ಹೇಳದೆ, ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿ, ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ, ಅವರ ಮನೆಯವರು, ಅವರ ಮಗನ ಸ್ಪರ್ಧೆಯನ್ನೂ ನೋಡಿದ್ದೇವೆ. ಡಿ.ಕೆ. ಸುರೇಶ್ ಬರೀ ಸಂಸದಾಗಿಲ್ಲ ಪಂಚಾಯಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಅವರಿಗೆ ಚುನಾವಣೆ ಎದುರಿಸುವುದು ಗೊತ್ತಿದೆ ಎಂದು ಹೇಳಿದರು.
ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುವ ರಾಜ್ಯದ ಬಿಜೆಪಿ ನಾಯಕರಿಗೆ ಸತ್ಯ ಗೊತ್ತಿರಲಿ, ಮೋದಿ ಗ್ಯಾರಂಟಿಯಾಗಿ ನಮ್ಮ ಯೋಜನೆಗಳ್ಲನ್ನು ಕಾಪಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನೀರಿನ ಅಭಾವ ನೀಗಿಸಲು ಕ್ರಮ:
ರಾಜ್ಯದಲ್ಲಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನೀರಿನ ಅಭಾವವಾಗಲಿದ್ದು, ಸಮಸ್ಯೆ ನೀಗಿಸಲು ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ತೆಗೆದಿರಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರು, ನಗರಾಭಿವೃದ್ಧಿ ಸಚಿವರು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂದರು.
ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ, ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.