ಸೆಲ್ಫಿಗೆ ಮತ್ತೆ ಮೂವರು ವಿದ್ಯಾರ್ಥಿಗಳು ಬಲಿ
Team Udayavani, Oct 4, 2017, 6:25 AM IST
ರಾಮನಗರ: ರೈಲು ಹಳಿಯ ಮೇಲೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಮೂವರು ವಿದ್ಯಾರ್ಥಿಗಳು ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಬೆಳಗ್ಗೆ ವಂಡರ್ ಲಾ ಗೇಟ್ ಬಳಿ ಸಂಭವಿಸಿದೆ.
ಬೆಂಗಳೂರು ನಗರದ ಹುಳಿಮಾವು ನಿವಾಸಿ ಜೆ. ರೋಹಿತ್ (18), ಕೋರಮಂಗಲ ನಿವಾಸಿ ಪ್ರಭು ಆನಂದ್ (18), ಬನಶಂಕರಿ ನಿವಾಸಿ ಪ್ರತೀಕ್ ರಾಯ್ಕರ್ (20) ಮೃತಪಟ್ಟಿರುವ ವಿದ್ಯಾರ್ಥಿಗಳು. ಇವರು ಬೆಂಗಳೂರಿನ ಜಯನಗರದ ನ್ಯಾಶನಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ವಿಚಿತ್ರವೆಂದರೆ, ಕಳೆದ ತಿಂಗಳ 24ರಂದು ಇದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಸೆಲ್ಫಿ ತೆಗೆದು ಕೊಳ್ಳುತ್ತಿರುವಾಗಲೇ ನೀರಿನಲ್ಲಿ ಮುಳುಗಿ ಮೃತ ನಾಗಿದ್ದ. ಮತ್ತೆ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೆಲ್ಫಿ ಗೀಳಿಗೆ ಸಾವನ್ನಪ್ಪಿರುವುದು ಮಾತ್ರ ವಿಷಾದದ ಸಂಗತಿ.
ಮಂಗಳವಾರ ಬೆಳಗ್ಗೆ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದ ಏಳೆಂಟು ಮಂದಿಯ ತಂಡದಲ್ಲಿ ಈ ವಿದ್ಯಾರ್ಥಿಗಳು ಇದ್ದರು. ಮಂಚನಾಯ್ಕನಹಳ್ಳಿ ಸಮೀಪ ವಂಡರ್ ಲಾಗೆ ತೆರಳುವ ರಸ್ತೆಯಲ್ಲಿ ರೈಲು ಹಳಿ ದಾಟಲು ಸೇತುವೆ ಇದ್ದು, ಇವರು ಚಲಿಸುವ ರೈಲಿನ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಸೇತುವೆಗೆ ಇಳಿದಿದ್ದಾರೆ. ಬೆಂಗಳೂರು-ಮೈಸೂರು ನಡುವೆ ದ್ವಿಪಥ ರೈಲು ಮಾರ್ಗ ಇದೆ. ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಚಾಮುಂಡಿ ಎಕ್ಸ್ ಪ್ರಸ್ ರೈಲಿನ ಜತೆ ಸೆಲ್ಫಿ ತೆಗೆದುಕೊಳ್ಳಲು ಮೂವರು ವಿದ್ಯಾರ್ಥಿಗಳು ಇನ್ನೊಂದು ಮಾರ್ಗದ ಹಳಿ ಮೇಲೆ ನಿಂತಿದ್ದರು. ಇದೇ ವೇಳೆಗೆ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಬಂದ ಗೋಲ್ಗುಂಬಜ್ ಎಕ್ಸ್ಪ್ರೆಸ್ ರೈಲು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡಿದೆ. ಸೆಲ್ಫಿ ತೆಗೆದುಕೊಳ್ಳುವಾಗ ಚಾಮುಂಡಿ ಎಕ್ಸ್ಪ್ರೆಸ್ ರೈಲಿನ ಸದ್ದಿಗೆ, ಗೋಲ್ಗುಂಬಜ್ ರೈಲಿನ ಸದ್ದು ಬಹುಶಃ ವಿದ್ಯಾರ್ಥಿಗಳಿಗೆ ಕೇಳಿಸಲಿಲ್ಲ ಎಂದು ಹೇಳಲಾಗಿದೆ.
ವಾರದ ಹಿಂದಷ್ಟೇ ವಿದ್ಯಾರ್ಥಿ ಬಲಿ
ಸೆ. 24ರಂದು ರಾಮನಗರದ ರಾಮಗೊಂಡ್ಲು ಗ್ರಾಮಕ್ಕೆ ಎನ್ಸಿಸಿ ಕ್ಯಾಂಪ್ಗೆಂದು ಹೋಗಿದ್ದ ವಿದ್ಯಾರ್ಥಿಗಳು ಕಲ್ಯಾಣಿಗೆ ಇಳಿದು ಸೆಲ್ಫಿ ತೆಗೆದುಕೊಳ್ಳುವಾಗ ವಿಶ್ವಾಸ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದ. ವಿಚಿತ್ರವೆಂದರೆ ಅಂದೂ ಸೆಲ್ಫಿ ದುರಂತಕ್ಕೆ ಬಲಿಯಾದದ್ದು ನ್ಯಾಶನಲ್ ಕಾಲೇಜಿನ ವಿದ್ಯಾರ್ಥಿಯೇ. ಅಂದು ಉಳಿದ ವಿದ್ಯಾರ್ಥಿಗಳು ಖುಷಿಯಿಂದ ಸೆಲ್ಫಿ ತೆಗೆದು ಕೊಳ್ಳುತ್ತಿರುವಾಗ ವಿಶ್ವಾಸ್ ಮುಳುಗು ತ್ತಿರುವ ದೃಶ್ಯವೂ ಸೆರೆಯಾಗಿತ್ತು. ಈಗ ಮತ್ತೆ ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
HIGH COURT: ಬಿಎಸ್ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.