ಇಂದು ನಾಗನಕೆರೆಯಲ್ಲಿ ವೈಭವದ ಗಿಡದ ಜಾತ್ರೆ
Team Udayavani, Dec 8, 2017, 10:55 AM IST
ನಾಗಮಂಗಲ: ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ತಾಲೂಕಿನ ನಾಗನಕೆರೆಯಲ್ಲಿ ಶುಕ್ರವಾರ ಗಿಡದ ಜಾತ್ರೆ
ನಡೆಯಲಿದೆ. ತಾಲೂಕಿನಲ್ಲಿ ವೆಂಕಟೇಶ್ವರ ದೇವರ ಆರಾಧಕರನ್ನು ಗ್ರಾಮ್ಯ ಭಾಷೆಯಲ್ಲಿ ದಾಸಯ್ಯ ಎನ್ನುತ್ತಾರೆ. ಇವರು ತಿರುಪತಿಗೆ ತೆರಳುವ ವೇಳೆ ಗಿಡದ ಜಾತ್ರೆಯಲ್ಲಿ ಪೂಜೆ ಸಲ್ಲಿಸಿ, ಅಕ್ಕಪಕ್ಕದ ಗ್ರಾಮಗಳ ವೆಂಕಟೇಶ್ವರನ ಇತರೆ ಏಳು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ತೆರಳುವುದು ಸಂಪ್ರದಾಯ. ಶತಮಾನಗಳಿಂದಲೂ ಈ ಪರಂಪರೆ ನಡೆದು ಬಂದಿದೆ. ಪ್ರತೀ ವರ್ಷ ಡಿಸೆಂಬರ್ ತಿಂಗಳ ಮೊದಲ ಶುಕ್ರವಾರದಂದು ಜಾತ್ರೆ ನಡೆಯುತ್ತದೆ. ತಿರುಪತಿಗೆ ಹೋಗಲು ಶಕ್ತರಲ್ಲದವರು ಇದನ್ನೇ ತಿರುಪತಿ ಎಂದು ಭಾವಿಸಿ ಈ ಜಾತ್ರೆಯಲ್ಲಿ ತಮ್ಮ ಹರಕೆಗಳನ್ನು ಅರ್ಪಿಸುವುದು ಪ್ರತೀತಿ.
ಬಾಡೂಟ: ಗಿಡದ ಜಾತ್ರೆಗೆ ಆಗಮಿಸುವ ಎಲ್ಲಾ ಹರಿಭಕ್ತರು (ದಾಸಪ್ಪ) ಜೋಳಿಗೆಯಲ್ಲಿ ತಂದ ದೇವರನ್ನು ಗಿಡದ ಪ್ರದೇಶದಲ್ಲಿ ಇಟ್ಟು ಪೂಜಿಸುತ್ತಾರೆ. ಇಲ್ಲಿ ದೇವರಿಗೆ ಮಾಂಸದ ಜತೆಗೆ ಮದ್ಯದ ನೈವೇದ್ಯವೂ ನಡೆಯುತ್ತದೆ. ಬಳಿಕ ಅದನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಿ ತಾವೂ ಸೇವಿಸುತ್ತಾರೆ. ಜಾತ್ರೆ ವೇಳೆ ಮದ್ಯ ಮಾರಾಟ ಮಾಡುವುದು, ಮಾಂಸದ ಭೂರೀ ಭೋಜನ ಇಲ್ಲಿನ ವಿಶೇಷ.
20 ಸಾವಿರ ಭಕ್ತರು: ತಾಲೂಕಿನ ಧಾರ್ಮಿಕ ಮತ್ತು ಪುಣ್ಯಕ್ಷೇತ್ರ ಆದಿಚುಂಚನಗಿರಿ ಜಾತ್ರೆ ಬಳಿಕ ಅತಿ ಹೆಚ್ಚು ಜನ ಸೇರುವ ಜಾತ್ರೆ ಗಿಡದ ಜಾತ್ರೆಯಾಗಿದೆ. ನಾಡಿನಾದ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ತಿಮ್ಮಪ್ಪನ ಭಕ್ತರು ಜಾತ್ರೆಗೆ ಸೇರಲಿದ್ದಾರೆ. ಇಲ್ಲಿಗೆ ಬಂದು ವೆಂಕಟೇಶ್ವರನ ದರ್ಶನ ಪಡೆದರೆ ತಿರುಪತಿ ತಿಮ್ಮಪ್ಪನನ್ನು ನೋಡಿದಷ್ಟೇ ಫಲ ಸಿಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.
ಕೊಠಡಿಗಳ ಕೊರತೆ: ಜಾತ್ರೆ ನಡೆಯುವ ಪಕ್ಕದಲ್ಲಿ ನಾಗನಕೆರೆ ಇದೆ. ಹೇಮಾವತಿ ಜಲಾಶಯದಿಂದ ನೀರು ಹರಿಸಿದ ಕಾರಣ ಈ ಬಾರಿ ಕೆರೆ ಭರ್ತಿಯಾಗಿದೆ. ಜಾತ್ರೆಯಲ್ಲಿ ವೆಂಕಟೇಶ್ವರ (ಮೂಡಲ ಗಿರಿಯಪ್ಪ)ನ ಭಕ್ತರು ಕೇಶಮುಂಡನ ಮಾಡಿಸಿ ಕೊಂಡು ಕೆರೆಯಲ್ಲಿ ಸ್ನಾನ ಮಾಡುವುದು ಪದ್ಧತಿ. ಆದರೆ ಇಲ್ಲಿ ಸ್ನಾನ ಮಾಡಿದ ಭಕ್ತರಿಗೆ ಬಟ್ಟೆ ಬದಲಿಸಲು ಕೊಠಡಿ, ಮೊಬೈಲ್ ಕೊಠಡಿ ವ್ಯವಸ್ಥೆಗಳಿಲ್ಲ.
ಮೂಲ ಸೌಲಭ್ಯಗಳ ಕೊರತೆ: ಗುಂಡಿ ಬಿದ್ದ ರಸ್ತೆ ಜಾತ್ರೆಗೆ ಸಾವಿರಾರು ಮಂದಿ ಆಗಮಿಸಲಿದ್ದಾರೆ. ಆದರೆ, ಮುಖ್ಯರಸ್ತೆಯಿಂದ ಜಾತ್ರೆಗೆ ತೆರಳುವ ರಸ್ತೆ ಗುಂಡಿ ಬಿದ್ದಿದೆ. ವಾಹನ ಸವಾರರು ಆಯತಪ್ಪಿ$ಬೀಳುವ ಸಂಭವವಿದೆ. ರಸ್ತೆಯು ಒಮ್ಮೆಯೂ ಡಾಂಬರನ್ನೇ ಕಂಡಿಲ್ಲ. ಜಲ್ಲಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಭಕ್ತರು, ಜಾತ್ರಾ ಪ್ರವಾಸಿಗರ ತೊಂದರೆ ಹೇಳತೀರದು.
ಶತಮಾನಗಳ ಇತಿಹಾಸವಿ ರುವ ಗಿಡದ ಜಾತ್ರೆ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಜಾತ್ರೆಗೆ ತೆರಳುವ ರಸ್ತೆ ಡಾಂಬರೀಕರಣ ಟೆಂಡರ್ ಹಂತದ ಲ್ಲಿದೆ. ಶೀಘ್ರ ಕಾಮಗಾರಿಯನ್ನು ಆರಂಭಿಸಲಾಗುವುದು.
●ಚೆಲುವರಾಯಸ್ವಾಮಿ, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.