ಚುನಾವಣೆ ರಣತಂತ್ರ: ಆರ್‌ಎಸ್‌ಎಸ್ ನೆರವು ಕೋರಿದ ಬಿಜೆಪಿ ನಾಯಕರು
Team Udayavani, Mar 6, 2018, 7:20 PM IST
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ರಣತಂತ್ರಕ್ಕೆ ಸಂಬಂಧಿಸಿ ರಾಜ್ಯದ ಆರ್‌ಎಸ್‌ಎಸ್ ನಾಯಕರೊಂದಿಗೆ ಸಭೆ ನಡೆಸಿ ಮುಂಬರುವ ಚುನಾವಣೆಗೆ ಸಂಘ ಪರಿವಾರದ ಯೋಜನೆಯನ್ನು ರೂಪಿಸುವ ಬಗ್ಗೆ ಚರ್ಚಿಸಿರುವುದಾಗಿ ತಿಳಿದು ಬಂದಿದೆ.
“ಮಾರ್ಚ್ 3ರಂದು ಸಂಘ ಪರಿವಾರ ರಾಜ್ಯದಲ್ಲಿನ ತನ್ನ ಪ್ರಧಾನ ಕಾರ್ಯಾಲಯದಲ್ಲಿ ವಾರ್ಷಿಕ ಸಂಚಾಲನಾ ಸಭೆ ನಡೆಸಿತು. ಬಿ ಎಸ್ ಯಡಿಯೂರಪ್ಪ, ಅನಂತ ಕುಮಾರ್, ಸದಾನಂದ ಗೌಡ ಮತ್ತು ಇತರರು ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಘ ಪರಿವಾರದ ನೆರವನ್ನು ಅವರು ಕೋರಿದರು’ ಎಂದು ಹಿರಿಯ ಆರ್‌ಎಸ್‌ಎಸ್ ನಾಯಕರೋರ್ವರು ಮಾಧ್ಯಮಕ್ಕೆ ತಿಳಿಸಿದರು.
ಇದಕ್ಕೆ ಉತ್ತರವಾಗಿ ಸಂಘವು ತಾನು ಬಿಜೆಪಿಗೆ ಚುನಾವಣಾ ನೆರವು ನೀಡಲು ನೇರ ಪ್ರವೇಶ ಮಾಡುವುದಿಲ್ಲ; ಆದರೆ ಸಂಘದ ಸ್ವಯಂಸೇವಕರಿಗೆ ಆ ರೀತಿಯಲ್ಲಿ ನೆರವಾಗುವುದಕ್ಕೆ ಪೂರ್ಣ ಸ್ವಾತಂತ್ರ್ಯವಿದೆ ಎಂದು ಆರ್‌ಎಸ್‌ಎಸ್ ನಾಯಕರು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ ಅವರ ಬಗ್ಗೆ ಒಲವು ಹೊಂದಿರುವ ಓಬಿಸಿ ಮತ್ತು ದಲಿತರ ಓಟುಗಳನ್ನು ಒಡೆಯಲು ಬಿಜೆಪಿ ಆರ್‌ಎಸ್‌ಎಸ್ ಅನ್ನು ಕೇಳಿಕೊಂಡಿದೆಯೇ ? ಎಂಬ ಪ್ರಶ್ನೆಗೆ ಉತ್ತರವಾಗಿ “ಅಂತಹ ಯಾವುದೇ ಸಲಹೆಯನ್ನು ನಾವು ನೀಡಿಲ್ಲ ಅಥವಾ ಬಿಜೆಪಿ ಆ ರೀತಿಯಲ್ಲಿ ಏನನ್ನೂ ಕೇಳಿಲ್ಲ’ ಎಂದವರು ಹೇಳಿದರು.
ಆರ್‌ಎಸ್‌ಎಸ್ ಕಾರ್ಯಕರ್ತರು ಬಿಜೆಪಿಗೆ ಚುನಾವಣೆ ಸಂಬಂಧವಾಗಿ ಯಾವ ರೀತಿಯಲ್ಲಿ ನೆರವಾಗುವರು ಎಂಬ ಪ್ರಶ್ನೆಗೆ ಉತ್ತರವಾಗಿ ಅವರು, “ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ಮಾಡಲು ಅತ್ಯಧಿಕ ಸಂಖ್ಯೆಯಲ್ಲಿ ಮತ ಹಾಕುವಂತೆ ಮತದಾರರ ಮನ ಒಲಿಸುವ ಕೆಲಸವನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಮಾಡಬಲ್ಲರು’ ಎಂದು ಹೇಳಿದರು.
“ಪ್ರಜಾಸತ್ತೆಯ ಯಶಸ್ಸಿಗೆ ದೊಡ್ಡ ಸಂಖ್ಯೆಯಲ್ಲಿ ಮತದಾರರು ಮತ ಹಾಕುವುದು ಮತ್ತು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುವುದರಿಂದ ಆರ್‌ಎಸ್‌ಎಸ್ ಕಾರ್ಯಕರ್ತರು ಆ ಸಂದೇಶವನ್ನು ಮತದಾರರಿಗೆ ತಲುಪಿಸಲು ಕ್ಷೇತ್ರ ಕಾರ್ಯ ಮಾಡಬಲ್ಲರು’ ಎಂದು ಆ ಆರ್‌ಎಸ್‌ಎಸ್ ನಾಯಕ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.