ಕೋವಿಡ್ ನಿಂದ ಪತ್ನಿ ಸಾವು : ಖಿನ್ನತೆಯಿಂದ ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾದ ಪತಿ.!
Team Udayavani, Jun 30, 2021, 4:15 PM IST
ಆನೇಕಲ್ : ತಂದೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸತೀಶ್ ರೆಡ್ಡಿ (45), ಮಕ್ಕಳಾದ ಕೀರ್ತಿ(19) , ಮೊನಿಷಾ(17) ಮೃತ ದುರ್ದೈವಿಗಳು. ಸತೀಶ್ ರೆಡ್ಡಿಯವರ ಪತ್ನಿ ಆಶಾ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಚಿಕಿತ್ಸೆಯ ಬಳಿಕವೂ ಅಷ್ಟಾಗಿ ಚೇತರಿಸಿಕೊಳ್ಳದ ಆಶಾ ಮೇ.6 ರಂದು ಸಾವನ್ನಪ್ಪುತ್ತಾರೆ. ಅಮ್ಮ ಚೇತರಿಸಿಕೊಂಡು ಮತ್ತೆ ಮನೆಗೆ ಬರುತ್ತಾರೆ ಎಂದುಕೊಂಡಿದ್ದ ಮಕ್ಕಳಿಗೆ ಅಮ್ಮನಿಲ್ಲದ ಸುದ್ದಿ ದೊಡ್ಡ ಆಘಾತವುಂಟು ಮಾಡುತ್ತದೆ.
ಇದನ್ನೂ ಓದಿ: ಗೋವಾ : ಕರ್ನಾಟಕ ಮೂಲದ ಒಂದೇ ಕುಟುಂಬದ ಮೂವರು ನೇಣಿಗೆ ಶರಣು
ಆಶಾ ಸಾವಿನ ಬಳಿಕ ಸ್ಮಶಾನ ಮೌನದಂತೆ ಇದ್ದ ಸತೀಶ್ ಅವರ ಕುಟುಂಬ ಖಿನ್ನತೆಗೆ ಒಳಗಾಗಿತ್ತು. ಈ ಪರಿಸ್ಥಿತಿಯನ್ನು ನಿಭಾಯಿಸಲಾಗದೆ ತಂದೆ ಸತೀಶ್ ರೆಡ್ಡಿ ಮತ್ತವರ ಮಕ್ಕಳು ಮಂಗಳವಾರ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.