ಬೆಂಗಳೂರು ರೈಲುಗಳ ಸಂಚಾರ ರದ್ದು
Team Udayavani, Aug 11, 2019, 3:00 AM IST
ಹುಬ್ಬಳ್ಳಿ: ನೈಋತ್ಯ ರೈಲ್ವೆ ಮೈಸೂರು ವಲಯದ ಹಾಸನ ಹಾಗೂ ಮಂಗಳೂರು ಮಾರ್ಗದ ಸಕಲೇಶಪುರ-ಸುಬ್ರಹ್ಮಣ್ಯ ನಿಲ್ದಾಣಗಳ ಮಧ್ಯೆ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
ಆ.12, 14, 16, 19, 21, 23ರಂದು ಯಶವಂತಪುರದಿಂದ ತೆರಳಲಿರುವ ಯಶವಂತಪುರ -ಕಾರವಾರ ಎಕ್ಸ್‌ಪ್ರೆಸ್ (16515), ಆ.13, 15, 17, 20; 22ರಂದು ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ (16516), ಆ.14, 15, 16, 17, 21, 22ರಂದು ಬೆಂಗಳೂರು-ಕಣ್ಣೂರ/ಕಾರವಾರ ಎಕ್ಸ್‌ಪ್ರೆಸ್ (16511/16513), ಆ. 11, 12, 13, 18, 18, 20ರಂದು ಮೈಸೂರು ಮಾರ್ಗವಾಗಿ ಸಂಚರಿಸುವ ಬೆಂಗಳೂರು ನಗರ-ಕಣ್ಣೂರ/ಕಾರವಾರ (16517/16523) ರೈಲು, ಆ.11, 12, 13, 14, 18, 20, 21ರಂದು ಕಣ್ಣೂರ /ಕಾರವಾರ-ಬೆಂಗಳೂರು ನಗರ (16512/16514) ರೈಲು, ಆ.15, 16, 17, 22ರಂದು ಮೈಸೂರು ಮಾರ್ಗವಾಗಿ ಸಾಗುವ ಕಣ್ಣೂರ/ ಕಾರವಾರ-ಬೆಂಗಳೂರು ನಗರ (16518/16524) ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಆ.13, 15, 18, 20, 22ರಂದು ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (16575), ಆ.12,14, 16, 19, 21, 23ರಂದು ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ (16576) ರೈಲು, ಆ.11, 13, 15, 18, 20, 22ರಂದು ಯಶವಂತಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (16585) ರೈಲು, ಆ.12, 14, 16, 19, 21, 23ರಂದು ಯಶವಂತಪುರ-ಮಂಗಳೂರು ಸೆಂಟ್ರಲ್ (16586) ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದುಪಡಿಸಲಾಗಿದೆ.
ಆ.12ರಂದು ಛತ್ರಪತಿ ಶಿವಾಜಿ ಟರ್ಮಿನಸ್-ತ್ರಿವೇಂಡ್ರಂ ಸೆಂಟ್ರಲ್ ಎಕ್ಸ್‌ಪ್ರೆಸ್ (16331), ದೆಹಲಿ ಸರಾಯ್ ರೊಹಿಲಾ-ಯಶವಂತಪುರ ಎಕ್ಸ್‌ಪ್ರೆಸ್ (12214) ರೈಲಿನ ಸಂಚಾರ ರದ್ದುಪಡಿಸಲಾಗಿದೆ. ಆ.11ರಂದು ಬಿಕಾನೇರ್-ಯಶವಂತಪುರ ಎಕ್ಸ್‌ಪ್ರೆಸ್ (16558) ರೈಲು ಸೂರತ್, ಜಲಗಾಂವ, ವಾರ್ಧಾ ಬಾಲಹರ್ಷಾಹ್, ಸಿಕಂದರಾಬಾದ್, ಸುಲೆಹಳ್ಳಿ, ಗುಂತ್ಕಲ್, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರ ಮಾರ್ಗವಾಗಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.