ವರ್ಗಾವಣೆ ಕಾನೂನಿಗೆ ಕೆಲ ತಿದ್ದುಪಡಿ ಅಗತ್ಯ
Team Udayavani, Sep 10, 2019, 3:00 AM IST
ರಾಮನಗರ: ಶಿಕ್ಷಣ ಇಲಾಖೆ ವರ್ಗಾವಣೆ ಕಾನೂನಿ ನಲ್ಲಿ ಅಗತ್ಯ ತಿದ್ದುಪಡಿ ತರುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿಪ್ರಾಯ ಪಟ್ಟರು. ತಾಲೂಕಿನ ಕೈಲಾಂಚ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಕಡ್ಡಾಯ ವರ್ಗಾವಣೆಯಡಿ ವರ್ಗಾವಣೆ ಆಗಿರುವ ಕೆಲವು ಶಿಕ್ಷಕರ ಮನವಿಗೆ ಪ್ರತಿಕ್ರಿಯಿಸಿದರು.
ಶಿಕ್ಷಕಿಯೊಬ್ಬರು ತಮಗೆ ಬುದ್ಧಿಮಾಂದ್ಯ ಮಗಳಿದ್ದು ತಾವು ಹಾಲಿ ಕಾರ್ಯನಿರ್ವಹಿಸುತ್ತಿರುವ ಘಟಕದಲ್ಲೇ ಬಿ ಅಥವಾ ಸಿ ವಲಯದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಪ್ರಾರ್ಥಿಸಿದರು. ಶಿಕ್ಷಕಿಯ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆ ಸೇರಿದಂತೆ 5 ಖಾಯಿಲೆಗಳು ಇದ್ದರೆ ಮಾತ್ರ ಪರಿಗಣಿಸಲು ಅವಕಾಶವಿದೆ.
ಆದರೆ ಬುದ್ಧಿಮಾಂದ್ಯ, ಸಿಜೋಫೆರ್ನಿಯಾ, ಬೈಪೋಲಾರ್ ಮುಂತಾದ ಖಾಯಿಲೆಗಳನ್ನು ವರ್ಗಾವಣೆ ಕಾನೂನಿಯಲ್ಲಿ ದಾಖಲಿಸಲಾಗಿಲ್ಲ. ಹೀಗಾಗಿ ಅಂತಹ ಪ್ರಕರಣಗಳಿಗೆ ತಾವು ಅಸಹಾಯಕ ರಾಗಿರುವುದಾಗಿ ತಿಳಿಸಿದರು. ಸದ್ಯದಲ್ಲಿ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು ಇನ್ನಷ್ಟು ಗಂಭೀರ ಕಾಯಿಲೆಗಳನ್ನು ಸೇರಿಸುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು