24 ಗಂಟೆಯಲ್ಲಿ ಟ್ರಾನ್ಸ್‌ಫಾರ್ಮರ್ ಬದಲಾವಣೆ: ಸಚಿವ ವಿ. ಸುನಿಲ್ ಕುಮಾರ್
Team Udayavani, Dec 31, 2021, 6:12 AM IST
ಬೆಂಗಳೂರು: ವಿಫಲಗೊಂಡ ವಿದ್ಯುತ್ ಪರಿವರ್ತಕ (ಟ್ರಾನ್ಸ್ ಫಾರ್ಮರ್) ಬದಲಾವಣೆಗಾಗಿ ವರ್ಷಾನುಗಟ್ಟಲೆ ಹೋರಾಟ ಮಾಡಬೇಕಿದ್ದ ರೈತರ ಬವಣೆಗೆ ರಾಜ್ಯ ಇಂಧನ ಇಲಾಖೆ ಈಗ ಕೊನೆ ಹಾಡಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರೈತರ ಟ್ರಾನ್ಸ್ ಫಾರ್ಮರ್ ಬದಲಾವಣೆಯನ್ನು ದೂರು ಸಲ್ಲಿಕೆಯಾದ 24 ಗಂಟೆಯೊಳಗೆ ಮಾಡಬೇಕೆಂಬ ಗುರಿ ಸಾಧನೆಯಲ್ಲಿ ಇಂಧನ ಇಲಾಖೆ ಈಗ ಶೇ. 100ರಷ್ಟು ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದ್ದು, ಸದ್ಯಕ್ಕೆ 10248 ಟ್ರಾನ್ಸ್ ಫಾರ್ಮರ್‌ಗಳ ದಾಸ್ತಾನು ಲಭ್ಯವಿದೆ. ರೈತರ ಮನವಿಗೆ ಸ್ಪಂದಿಸುವ ಮೂಲಕ ಜನಸ್ನೇಹಿ ಕಾರ್ಯದಲ್ಲಿ ಉಳಿದ ಇಲಾಖೆಗಿಂತ ನಮ್ಮ ಇಲಾಖೆ ಒಂದು ಹೆಜ್ಜೆ ಮುಂದೆ ಸಾಗಿದೆ.
27,637 ಅಳವಡಿಕೆ:
ತಾವು ಅಧಿಕಾರ ಅಳವಡಿಸಿಕೊಂಡ ಆರಂಭದಿಂದ ಇಲ್ಲಿಯವರೆಗೆ ಹಿಂಬಾಕಿ ಬೇಡಿಕೆಯೂ ಸೇರಿ ಎಲ್ಲ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ 27,650 ವಿದ್ಯುತ್ ಪರಿವರ್ತಕಗಳು ವಿಫಲಗೊಂಡಿರುವ ಬಗ್ಗೆ ರೈತರು ದೂರು ದಾಖಲಿಸಿದ್ದರು. ಈ ಪೈಕಿ 21,145 ಪ್ರಕರಣಗಳಲ್ಲಿ 24 ಗಂಟೆಯೊಳಗಾಗಿ ಪರಿವರ್ತಕಗಳನ್ನು ಬದಲಾವಣೆ ಮಾಡಲಾಗಿದೆ. ರಸ್ತೆ ಸಂಪರ್ಕ ಸೇರಿದಂತೆ ಉಳಿದ ಅಡೆತಡೆಗಳು ಇರುವ ಕಡೆಗಳಲ್ಲಿ 24 ಗಂಟೆ ಕಳೆದ ಕೆಲ ತಾಸಿನ ಒಳಗಾಗಿ ಪರಿವರ್ತಕ ಬದಲಾವಣೆ ಮಾಡಿದ ಪ್ರಕರಣ 6492 ಎಂದು ತಿಳಿಸಿದ್ದಾರೆ.
ಹಿಂದೆ ಹೇಗಿತ್ತು ? :
ಈ ಹಿಂದೆ ಪರಿವರ್ತಕ ಬದಲಾವಣೆ ವ್ಯವಸ್ಥೆ ಶೋಚನೀಯವಾಗಿತ್ತು. ರೈತರು ದೂರು ನೀಡಿ ಬದಲಾವಣೆಗೆ ಅರ್ಜಿ ಸಲ್ಲಿಸಿದ ಬಳಿಕ ತಿಂಗಳಾನುಗಟ್ಟಲೆ ಕಾಯಬೇಕಿತ್ತು. ನಾನಾ ಕಾರಣಗಳನ್ನು ನೀಡಿ ವಿಳಂಬ ಮಾಡಲಾಗುತ್ತಿತ್ತು. ಇದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗು ತ್ತಿತ್ತು. ಅಲ್ಲದೆ ವಿಫಲಗೊಂಡ ಪರಿವರ್ತಕಗಳನ್ನು ರೈತರು ಎತ್ತಿನಗಾಡಿ ಅಥವಾ ತಮ್ಮ ವಾಹನಗಳಲ್ಲಿ ಆಯಾ ಸರಬರಾಜು ಕಚೇರಿಗೆ ತಲುಪಿಸುತ್ತಿದ್ದರು. ಆದರೆ ರಾಜ್ಯ ಸರಕಾರ ಈ ಪದ್ಧತಿಯಲ್ಲೂ ಬದಲಾವಣೆ ತಂದಿದೆ. ಈಗ ವಿಫಲಗೊಂಡ ಪರಿವರ್ತಕವನ್ನು ಇಲಾಖೆ ವತಿಯಿಂದಲೇ ಉಚಿತವಾಗಿ ಸಾಗಿಸಿ ಹೊಸ ಟ್ರಾನ್ಸ್ ಫಾರ್ಮರ್ ಸರಬರಾಜು ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.