Transgender; ವಿವಸ್ತಗೊಳಿಸಿ ಅಮಾನುಷ ಹಲ್ಲೆ: ಐವರು ಮಂಗಳಮುಖಿಯರ ಬಂಧನ
ಹೆಣ್ಣಾಗಿ ಹುಟ್ಟಿದ್ದರೂ ಗಂಡಾಗಿ ಪರಿವರ್ತನೆಯಾಗಿದ್ದೇನೆ... ಇದು ವಿಜಯಪುರದ ''ನಾನವಳಲ್ಲ'' ಕಥೆ!!!
Team Udayavani, Aug 1, 2024, 5:42 PM IST
ವಿಜಯಪುರ : ಹೆಣ್ಣಾಗಿ ಜನಿಸಿ ಗಂಡಾಡಿ ಪರಿವರ್ತನೆಗೊಂಡಿದ್ದ ವ್ಯಕ್ತಿಯನ್ನು ಹಾಡುಹಗಲೆ ವಿವಸ್ತ್ರಗೊಳಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಕ್ಕಾಗಿ ಪ್ರಕಕರಣ ದಾಖಲಿಸಿಕೊಂಡಿರುವ ಪೊಲೀಸರು ಐವರು ಮಂಗಳಮುಖಿಯರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ‘ಉದಯವಾಣಿ’ ವರದಿ ಮಾಡಿತ್ತು.
ಇದರಿಂದ ಎಚ್ಚತ್ತ ಪೊಲೀಸರು ಬಾಧಿತನಿಂದ ದೂರು ಪಡೆದು, ಕೃತ್ಯ ನಡೆಸಿದ ಐವರು ಮಂಗಳಮುಖಿಯರ ವಿರುದ್ಧ ದೂರು ದಾಖಲಿಸಿಕೊಂಡು, ಬಂಧಿಸಿದ್ದಾರೆ. ಇದೀಗ ಇಡೀ ಪ್ರಕರಣ ‘ನಾನವಳಲ್ಲ’ ಎಂಬ ಕಥೆಗೆ ತಿರುಗಿದೆ.
ನಗರದ ಬಸ್ ನಿಲ್ದಾಣದ ಪರಿಸರದಲ್ಲಿ ಜೂನ್ 21 ರಂದು ಮುಂಗಳಮುಖಿಯರ ಗುಂಪು ಪ್ಯಾಂಟ್ ಧರಿಸಿದ್ದ ಹೆಣ್ಣಿನ ರೂಪದಲ್ಲಿದ್ದ ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿ ಸಂಪೂರ್ಣ ವಿವಸ್ತ್ರಗೊಳಿಸಿ, ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ್ದರು.
ಸದರಿ ಘಟನೆಯ ಕುರಿತು ಸಾರ್ವಜನಿಕರು ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಉದಯವಾಣಿ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಬಾಧಿತ ರೇಖಾರೆಡ್ಡಿ ಉರ್ಫ ಸಚಿನ್ ರೆಡ್ಡಿ ಎಂಬ ಲಿಂಗ ಪರಿವರ್ತಿತನಿಂದ ಗೋಲಗುಂಬಜ ಠಾಣೆ ಪೊಲೀಸರು ದೂರು ಪಡೆದು, ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೇ ಅಮಾನವೀಯ ಕೃತ್ಯ ಎಸಗಿದ ಮಂಗಳಮುಖಿಯರಾದ ಅಶ್ವಿನಿ, ಹುಲಿಗೆಮ್ಮ, ಕವಿತಾ, ದಾನಮ್ಮ, ಮಹಾನಮ್ಮ ಎಂಬವರನ್ನು ಬಂಧಿಸಲಾಗಿದೆ. ಇಡೀ ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆಯ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು SP ಋಷಿಕೇಶ ಭಗವಾನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹಿನ್ನೆಲೆ : ಘಟನೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂತ್ರಸ್ತ ಸಚಿನ್ ರೆಡ್ಡಿ, ತಾನು ಹೆಣ್ಣಾಗಿ ಹುಟ್ಟಿದ್ದು, ಹಾರ್ಮೋನ್ ಬದಲಾವಣೆಯಿಂದಾಗಿ ಗಂಡಾಗಿ ಪರಿವರ್ತನೆಗೊಂಡಿದ್ದೇನೆ. ಪುರುಷರಂತೆ ಪ್ಯಾಂಟ್-ಶರ್ಟ್ ಧರಿಸಿ ಪುಣೆಯ ಅಶ್ವಿನಿ ಎಂಬ ಮಂಗಳಮುಖಿ ಜೊತೆ ಒಡನಾಟ ಇರಿಸಿಕೊಂಡಿದ್ದೆ.
ಈ ಹಂತದಲ್ಲಿ ನಾನು ಗಂಡಲ್ಲ ಹೆಣ್ಣೆಂದು ಗೊತ್ತಾಗಿ ಮಂಗಳಮುಖಿಯರು ಪುಣೆಯಲ್ಲಿ ಹಲ್ಲೆ ಮಾಡಿದ್ದರು. ಇದರಿಂದಾಗಿ ನಮ್ಮ ಊರಿಗೆ ಬಂದ ಬಳಿಕ ನಾನು ಸಾಮಾಜಿಕ ಜಾಲ ತಾಣದಲ್ಲಿ ನನ್ನ ವಿರುದ್ಧ ಹಲ್ಲೆ ಮಾಡಿದವರ ವಿರುದ್ಧ ನಿಂದಿಸಿ ಪೋಸ್ಟ್ ಮಾಡಿದ್ದೆ ಎಂದಿದ್ದಾರೆ.
ಇದರಿಂದ ಕುಪಿತರಾಗಿದ್ದ ಮಂಗಳಮುಖಿಯರು, ಜೂನ್ 21 ರಂದು ವಿಜಯಪುರ ನಗರದಲ್ಲಿ ಹಾಡುಹಗಲೇ ನನ್ನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದರು. ಇದೀಗ ಪೊಲೀಸರು ನನ್ನ ನೆರವಿಗೆ ನಿಂತಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದಕ್ಕೆ ಸಂತಸವಾಗಿದೆ. ನನ್ನ ಮೇಲೆ ಹಲ್ಲೆ ನಡೆಸಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.