Udayavani Interview; ನಾನಿನ್ನು ರಾಜ್ಯ ರಾಜಕಾರಣಕ್ಕೆ: ಪ್ರತಾಪ್ ಸಿಂಹ
ರಾಜ್ಯ ರಾಜಕಾರಣದಲ್ಲಿದ್ದೇನೆ ; ಈ ಸರಕಾರ ಪತನವಾದರೆ ಹಳೇ ಮೈಸೂರಿನಲ್ಲಿ ಸ್ಪರ್ಧೆ: ಮಾಜಿ ಸಂಸದ
Team Udayavani, Aug 7, 2024, 7:20 AM IST
ಬೆಂಗಳೂರು: ಕೊಡಗು- ಮೈಸೂರು ಸಂಸದ ರಾಗಿದ್ದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದು, ಮುಂದಿನ ದಿನ ಗಳಲ್ಲಿ ಅಧಿಕೃತವಾಗಿ ವಿಧಾನಸಭೆ ಪ್ರವೇಶಿಸುವುದಾಗಿಯೂ ತಿಳಿಸಿದ್ದಾರೆ.
“ಉದಯವಾಣಿ’ಯ “ನೇರಾನೇರ’ ಸಂದರ್ಶನದ ವೇಳೆ ಈ ಕುರಿತು ಮುಕ್ತವಾಗಿ ಮಾತ ನಾಡಿರುವ ಪ್ರತಾಪ್, “ನಾನೀಗ ಸದ್ಯಕ್ಕೆ ವಿಧಾನಸೌಧದಲ್ಲಿ ಇಲ್ಲದಿರಬಹುದು. ಆದರೆ ರಾಜ್ಯ ರಾಜ ಕಾರಣದಲ್ಲೇ ಇದ್ದೇನೆ’ ಎಂದಿದ್ದಾರೆ.
“ಇತ್ತೀಚೆಗೆ ರಾಜ್ಯದ ವಿಷಯಗಳ ಬಗ್ಗೆ ತಾರ್ಕಿಕವಾಗಿ ಹಾಗೂ ಪ್ರಬಲವಾಗಿ ಮಾತ ನಾಡುತ್ತಿದ್ದೇನೆ. ಮೊದಲು ರಾಜ್ಯದ ಬಗ್ಗೆ ನಾನು ಮಾತನಾಡುತ್ತಿರಲಿಲ್ಲ. ಈಗಾಗಲೇ ನಾನು ರಾಜ್ಯ ರಾಜಕಾರಣದಲ್ಲಿ ಇದ್ದೇನೆ. ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಹೋಗುತ್ತೇನೆ’ ಎಂದರು.
ಹಳೇ ಮೈಸೂರು ಭಾಗದಿಂದ ಸ್ಪರ್ಧೆ
ತಯಾರಿ ಎಂದೆಲ್ಲ ಏನೂ ಮಾಡಿ ಕೊಂಡಿಲ್ಲ. ಕ್ಷೇತ್ರ ಯಾವುದು ಎಂಬುದನ್ನು ತಾಯಿ ಚಾಮುಂಡೇಶ್ವರಿ ನಿರ್ಧರಿಸುತ್ತಾಳೆ. ಮುಂದೆ ಕ್ಷೇತ್ರಗಳ ಪುನರ್ವಿಂಗಡಣೆ ಆಗುವು ದಿದೆ. ರಾಜ್ಯದಲ್ಲಿ ಈಗಿರುವುದರಿಂದ 70-80 ಸ್ಥಾನಗಳು ಹೆಚ್ಚಾಗಲಿವೆ. ಶೇ. 33ರ ಮೀಸಲಾತಿ ಅನ್ವಯ ಆಗಲಿದೆ. ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯ ಪಾಲರು ಅನುಮತಿ ಕೊಟ್ಟು ಈ ಸರ ಕಾರ ಪತನಗೊಂಡು ಚುನಾವಣೆ ನಡೆದರೆ ಹಳೇ ಮೈಸೂರಿನಲ್ಲಂತೂ ನಾನಿರುತ್ತೇನೆ ಎಂಬ ಸುಳಿವು ನೀಡಿದರು.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ದಿಂದ ನಾನು ಸ್ಪರ್ಧಿಸಬೇಕೆಂಬ ನಿರ್ಣಯ ವನ್ನು ಕೈಗೊಂಡು ನನಗೆ ಆಶೀರ್ವಾದ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು. ಅವರ ಮಾರ್ಗ ದರ್ಶನ ದಂತೆಯೇ ಸಂಸದನಾದೆ. ಆರೆಸ್ಸೆಸ್ ಇಲ್ಲದೆ ಬಿಜೆಪಿ ಏನೇನೂ ಅಲ್ಲ. ಬಿಜೆಪಿಯು ಆರೆಸ್ಸೆಸ್‌ನ ಹೊಕ್ಕುಳಬಳ್ಳಿ ಇದ್ದಂತೆ. ಸೈದ್ಧಾಂತಿಕ ಬುನಾದಿ ಹಾಕಿಕೊಟ್ಟಿರುವ ಆರೆಸ್ಸೆಸ್ ಬಿಜೆಪಿಯ ಕಿವಿಹಿಂಡಿ ಸರಿದಾರಿಗೆ ತರುವ ಶಕ್ತಿ ಹೊಂದಿದೆ. ಅಂದು ಲೋಕಸಭೆಗೆ ನನ್ನನ್ನು ಕಳುಹಿಸಿದವರೇ ಮುಂದೆ ವಿಧಾನಸಭೆಗೂ ಕಳುಹಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಮುಂಬಾಗಿಲ ಮೂಲಕವೇ ಪ್ರವೇಶ
ಕೊಡಗು-ಮೈಸೂರು ಕ್ಷೇತ್ರದ ಟಿಕೆಟ್ ಬೇರೆಯವರಿಗೆ ಸಿಕ್ಕಿದೆ. ಅಲ್ಲಿ ಬೇಡ ಎಂದ ಮೇಲೆ ಇಲ್ಲೇ ಇರ ಬೇಕು ತಾನೆ? ಲೋಕಸಭೆಗೆ ಮುಂಬಾಗಿಲಿ ನಿಂದಲೇ ಹೋಗಿದ್ದೆ. ಹಿಂಬಾಗಿಲಿನ ಪ್ರಶ್ನೆ ಇಲ್ಲ. ಮುಂಬಾಗಿಲಿನ ಮೂಲಕ ವಿಧಾನಸಭೆ ಪ್ರವೇಶ ಮಾಡುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.