ಉದಯವಾಣಿಯ ಚೆ‌ಲುವ ಕನ್ನಡ

Team Udayavani, Nov 1, 2018, 8:55 AM IST

b-15.jpg

ಹಲವು ಮಗ್ಗಲುಗಳಲ್ಲಿ ಕನ್ನಡ ಒಂದಲ್ಲ ಒಂದು ಅಡೆ-ತಡೆ ಅನುಭವಿಸು ತ್ತಲೇ ಇದೆ. ಆದರೆ, ಆ ದಾಳಿ ಶಾಶ್ವತವೇ? ಖಂಡಿತಾ ಇಲ್ಲ. ಕನ್ನಡ ಮತ್ತೆ ಮೊದಲಿನ ವಿರಾಜಮಾನತೆ ಪಡೆಯಲು ಕೆಲವು ಪ್ರಾಥಮಿಕ ಸಿದ್ಧತೆಗಳು ನಡೆಯಬೇಕಿದೆ. ಆ ಆಶಯಗಳ ಕಿರಣ ಇಲ್ಲಿದೆ…

ಬೇಕಿದೆ ಆನ್‌ಲೈನ್‌ ಶಬ್ದಕೋಶ
ಕನ್ನಡದ ಸಮಗ್ರ ಶಬ್ದಗಳನ್ನು ಹೊಂದಿರುವ, ಬಳಸಲು ಅನುಕೂಲವಾಗಿರುವ ಆನ್‌ಲೈನ್‌ ಶಬ್ದಕೋಶ ವೊಂದರ ಅಗತ್ಯ ತುಂಬಾ ಇದೆ. ಮೊಬೈಲ್‌ನಲ್ಲೂ, ಕಂಪ್ಯೂಟರಿನಲ್ಲೂ ಬಳಸಬಹುದಾದ, ಹುಡುಕಲು ಸುಲಭವಾದ ಶಬ್ದಕೋಶ ಸದ್ಯಕ್ಕಿಲ್ಲ. ಪ್ರಸ್ತುತ ಮೈಸೂರು ವಿ.ವಿ. ರೂಪಿಸಿರುವ ಶಬ್ದಕೋಶ ಉತ್ತಮ ವಾಗಿದೆ. ಆದರೂ ತಾಂತ್ರಿಕ ಸುಧಾ ರಣೆ ಬೇಕಿದೆ.

ಫಾಂಟ್‌ ಬರಲಿ!
ಯೂನಿಕೋಡ್‌ ಅನ್ನು ಸಮಗ್ರವಾಗಿ ಅಳವಡಿಸಿಕೊ ಳ್ಳಲು ಅಗತ್ಯವಾದ, ವೈವಿಧ್ಯಮಯವಾದ ಫಾಂಟ್‌ಗಳು ಕನ್ನಡದಲ್ಲಿ ಕಡಿಮೆ ಇದೆ. ಇವುಗಳನ್ನು ಅಭಿವೃದ್ಧಿಪಡಿಸುವಲ್ಲಿ ಸರಕಾರದ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಕೆಲಸವಾಗಿಲ್ಲ. ಈಗಲೂ ಯುನಿಕೋಡ್‌ ಹೊರತಾದ ಫಾಂಟ್‌ಗಳನ್ನೇ ಡಿಟಿಪಿ, ಪುಸ್ತಕ ಪ್ರಕಟನೆ ಹಾಗೂ ಇತರ ಕೆಲಸಗಳಿಗೆ ಬಳಸಲಾಗುತ್ತಿದೆ.

ಧ್ವನಿಯಿಂದ ಪಠ್ಯ ಸಿಗಲಿ!
ಧ್ವನಿಯಿಂದ ಪಠ್ಯಕ್ಕೆ ಪರಿವರ್ತಿತವಾಗುವ ಉತ್ತಮ ಗುಣಮಟ್ಟದ ಅಪ್ಲಿಕೇಶನ್‌ಗಳ ಕೊರತೆಯಿದೆ. ಇರುವ ಕೆಲವು ಅಪ್ಲಿಕೇಶನ್‌ಗಳು ಉತ್ತಮ ಗುಣಮಟ್ಟದ್ದಾಗಿಲ್ಲ.

ಆನ್‌ಲೈನ್‌ ಪುಸ್ತಕ ಬೇಕು
ಓದುಗರಿಗೆ ಸುಲಭವಾಗಿ ಓದಲು ಪುಸ್ತಕಗಳನ್ನು ಇ-ಪುಸ್ತಕವನ್ನಾಗಿ ಪರಿವರ್ತಿಸುವ ವಿಧಾನ 
ಇನ್ನೂ ಸಕ್ರಿಯವಾಗಿ ಜಾರಿಗೆ ಬಂದಿಲ್ಲ. ಚಾಲ್ತಿಯಲ್ಲಿರುವ ಖಾಸಗಿ ಕಂಪೆ‌ನಿಗಳೂ ಹೆಚ್ಚಿನ ಪುಸ್ತಕಗಳ ಸಂಗ್ರಹಗಳನ್ನು ಹೊಂದಿಲ್ಲ.

ಬಾವುಟ ಹಾರಲಿ
ಕನ್ನಡ ಧ್ವಜ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಚುನಾವಣೆ ವೇಳೆ ಇದ್ದ ಹುಮ್ಮಸ್ಸು ರಾಜಕೀಯ ಪಕ್ಷಗಳಲ್ಲಿ ಕರಗಿಹೋಗಿದೆ. ಈಗ ಯಾವ ಪಕ್ಷಗಳಿಗೂ ಕನ್ನಡ ಧ್ವಜ ಬೇಕಿಲ್ಲ.

ಬಜೆಟ್‌ನಲ್ಲಿ ಆದ್ಯತೆ
ಪ್ರತಿವರ್ಷ ಬಜೆಟ್‌ ಆಗುತ್ತದೆ, ಹೋಗುತ್ತದೆ. ಆದರೆ, ಮಾತೃಭಾಷೆಗೇನು ಪ್ರಯೋಜನವಾಯಿತು? ಕನ್ನಡ ಭಾಷೆಯ ಅಭಿವೃದ್ಧಿಗೆ ಬೃಹತ್‌ ಯೋಜನೆಯೊಂದನ್ನು ಇದುವರೆಗೂ ಯಾವ ಸರಕಾರವೂ ಕೈಗೊಂಡಿಲ್ಲ. ಆ ಕೆಲಸ ಆದಷ್ಟು ಬೇಗ ಆಗಲಿ.

“ನುಡಿ’ ಅಭಿವೃದ್ಧಿಯಾಗಲಿ
ಗಣಕ ಪರಿಷತ್ತು ನುಡಿ ತಂತ್ರಾಂಶವನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಿಲ್ಲ. ನುಡಿ 5.0 ಆವೃತ್ತಿಯ ನಂತರ ನುಡಿ 6.0 ಅಭಿವೃದ್ಧಿ ಹಂತದಲ್ಲೇ ಇದೆ. ಮ್ಯಾಕ್‌ ಒಎಸ್‌ಗೆ ಇನ್ನೂ ನುಡಿ ಅಳವಡಿಸಲು ಸಾಧ್ಯವಾಗಿಲ್ಲ.

ಕ್ರಿಯಾ ಯೋಜನೆ
ಕನ್ನಡ ಅಭಿವೃದ್ಧಿಗಾಗಿ ದೂರದೃಷ್ಟಿತ್ವ ಹೊಂದಿರುವ ನಿರ್ದಿಷ್ಟ ಕ್ರಿಯಾ ಯೋಜನೆ ತಯಾರಾಗಬೇಕು. ಅದು 10 ವರ್ಷಗಳಲ್ಲಿ ಕನ್ನಡವನ್ನು ಸಮೃದ್ಧವಾಗಿಸುವ ಧ್ಯೇಯ ಹೊಂದಿರಬೇಕು.

ಖಾಸಗಿಯವರೂ ಬರಲಿ
ಕನ್ನಡವನ್ನು ಸಂಪದ್ಭರಿತವಾಗಿಸಲು, ಜನರಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಸರಕಾರ ಹಮ್ಮಿಕೊಳ್ಳಬೇಕು. ಕಂಪೆನಿಗಳ ಸಿಎಸ್‌ಆರ್‌ ನಿಧಿಯನ್ನು ಇದಕ್ಕೆ ಸದ್ಬಳಕೆ ಮಾಡಬಹುದು.

ನಾಡಗೀತೆ ಗೊಂದಲ ಬೇಡ
ನಾಡಗೀತೆಯನ್ನು ಮೊಟಕುಗೊಳಿಸುವ ಪ್ರಸ್ತಾವ‌ ಆಗಾಗ ಮುನ್ನೆಲೆಗೆ ಬರುತ್ತಿದೆ. ಇದನ್ನು ಸಂಪೂರ್ಣವಾಗಿ ಕೈಬಿಡುವುದೋ ಅಥವಾ ಜಾರಿಗೊಳಿಸುವುದೋ, ಯಾವುದೇ ನಿರ್ಧಾರವನ್ನು ಕೈಗೊಂಡು ಗೊಂದಲ ಬಗೆಹರಿಸಬೇಕಿದೆ.

ಡಿಜಿಟಲ್‌ ಪಠ್ಯಪುಸ್ತಕ
ಕನ್ನಡ ಪಠ್ಯಪುಸ್ತಕಗಳು ಹಾಗೂ ಆಕರ ಗ್ರಂಥಗಳ ಸಂಗ್ರಹ ಒಂದೇ ಕಡೆ ಸಿಗುವಂತೆ ಮಾಡುವ ಕೆಲಸವಾಗಬೇಕಿದೆ. ಸದ್ಯ, ವಿವಿಧ ಮಾದರಿಯಲ್ಲಿ ಅಲ್ಲಲ್ಲಿ ಸಿಗುತ್ತಿರುವ ಪಠ್ಯಪುಸ್ತಕಗಳನ್ನು ಒಂದೇ ಸೂರಿನಡಿ ತಂದು, ಪ್ರತಿ ಅಧ್ಯಾಯಕ್ಕೂ ಪೂರಕ 2 ಆಕರ ಗ್ರಂಥಗಳು ಕನ್ನಡದಲ್ಲಿ ಸಿಗುವಂತಾಗಬೇಕು.

  “ಕೇಳುಲಿ’ ಬೇಗ ಬರಲಿ
ಕನ್ನಡದಲ್ಲಿ ಕಥೆಗಳು, ಕವನ ಹಾಗೂ ಸಾಹಿತ್ಯಗಳನ್ನು ಓದಿ ಹೇಳುವ ಮತ್ತು ಅದನ್ನು ಜನರಿಗೆ ತಲುಪಿಸುವ “ಕೇಳುಲಿ’ (ಪಾಡ್‌ಕಾಸ್ಟ್‌) ಪ್ರಯತ್ನ ನಡೆಯಲಿಲ್ಲ. ಕನ್ನಡವನ್ನು ಈ ಮೂಲಕ ಹೆಚ್ಚಿನ ಜನರಿಗೆ ತಲುಪಿಸುವ ಅವಕಾಶದಿಂದ ನಾವು ವಂಚಿತರಾಗಿದ್ದೇವೆ. ಆ ಪ್ರಯತ್ನ ಬೇಗ ಆಗಲಿ.

ಟಾಪ್ ನ್ಯೂಸ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.