ಶಿರೂರು ಮಠಕ್ಕೆ ಬಾಲ ಪೀಠಾಧಿಪತಿ: ಸೋದೆ ವಾದಿರಾಜ ಮಠ ಸಮರ್ಥನೆ
Team Udayavani, Sep 14, 2021, 6:25 AM IST
ಬೆಂಗಳೂರು: ಉಡುಪಿಯ ಅಷ್ಟ ಮಠಗಳಲ್ಲಿ ಬಾಲ ಸನ್ಯಾಸಿಗಳನ್ನು ಪೀಠಾಧಿಪತಿಗಳನ್ನಾಗಿ ಮಾಡುವ ಪರಂಪರೆ ಇದೆ ಎಂದು ಸೋದೆ ವಾದಿರಾಜ ಮಠ ಹೈಕೋರ್ಟ್‌ನಲ್ಲಿ ವಿವರಿಸಿದೆ.
ಶಿರೂರು ಮಠಕ್ಕೆ ಬಾಲ ಸನ್ಯಾಸಿ ಯನ್ನು ಪೀಠಾಧಿಪತಿಯನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಮಠದ ಭಕ್ತ ಸಮಿತಿಯ ಪಿ. ಲಾತವ್ಯ ಆಚಾರ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾ| ಸತೀಶ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಸೋದೆ ಮಠದ ಪರ ವಕೀಲರು ವಾದ ಮಂಡಿಸಿ, ಅಷ್ಟಮಠಗಳಲ್ಲಿ ಬಾಲ ಸನ್ಯಾಸಿಗಳನ್ನು ಪೀಠಾಧಿಪತಿ ಗಳನ್ನಾಗಿ ಮಾಡುವ ಪರಂಪರೆ ಇದೆ. ಬಾಲಸನ್ಯಾಸಿಗೆ ದೀಕ್ಷೆ ಕೊಡಿಸಿ ಅವರಿಗೆ ಧರ್ಮಶಾಸ್ತ್ರ, ವೇದ, ಉಪನಿಷತ್ ಬೋಧಿಸಿ ಅವರನ್ನು ಪೀಠಾಧಿಪತಿಗಳನ್ನಾಗಿ ಮಾಡಲಾ ಗುವುದು. ಇದನ್ನು ಬಲವಂತವಾಗಿ ಹೇರುವುದಿಲ್ಲ, ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದರು.
ನ್ಯಾಯಪೀಠ ಅರ್ಜಿ ಕುರಿತಂತೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ಸೂಚನೆ ನೀಡಿ ಅಂತಿಮ ವಿಚಾರಣೆಯನ್ನು ಸೆ. 23ಕ್ಕೆ ನಿಗದಿಪಡಿಸಿತು.
ಅಮಿಕಸ್ ಕ್ಯೂರಿ ನೇಮಕ:
ಇದೇ ವೇಳೆ ಅಪ್ರಾಪ್ತ ಬಾಲಕನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಹಿರಿಯ ನ್ಯಾಯವಾದಿ ಎಸ್.ಎಸ್. ನಾಗಾನಂದ ಅವರನ್ನು ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ಹೈಕೋರ್ಟ್ ನೇಮಕ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್
Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?
ಎ.ಎಂ. ಪ್ರಸಾದ್ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?
B. Y. Vijayendra: ನನ್ನನ್ನು ಟಾರ್ಗೆಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ
MUST WATCH
ಹೊಸ ಸೇರ್ಪಡೆ
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್
Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?
ಎ.ಎಂ. ಪ್ರಸಾದ್ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.