University ಇನ್ನು ಘಟಿಕೋತ್ಸವ ಕಾರ್ಯಕ್ರಮಗಳಲ್ಲಿ ಏಕರೂಪತೆ!

ವಿಶ್ವವಿದ್ಯಾನಿಲಯಗಳ ಕಾರ್ಯಕ್ರಮಗಳಿಗೆ ಮಾರ್ಗಸೂಚಿ ರೂಪಿಸಲು ಉನ್ನತ ಶಿಕ್ಷಣ ಇಲಾಖೆ ಸಿದ್ಧತೆ

Team Udayavani, Sep 9, 2024, 6:45 AM IST

University ಇನ್ನು ಘಟಿಕೋತ್ಸವ ಕಾರ್ಯಕ್ರಮಗಳಲ್ಲಿ ಏಕರೂಪತೆ!

ಬೆಂಗಳೂರು: ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪ್ರದಾನ ಮಾಡುವ ಘಟಿಕೋತ್ಸವ ಕಾರ್ಯಕ್ರಮಗಳು ಗೊಂದಲದ ಗೂಡಾಗು
ತ್ತಿರುವುದನ್ನು ಮನಗಂಡಿರುವ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಶಿಸ್ತನ್ನು ತುಂಬಲು ಏಕರೂಪದ ಪ್ರಮಾಣಿಕೃತ ಕಾರ್ಯವಿಧಾನ ರೂಪಿಸಲು ಮುಂದಾಗಿದೆ.

ವಿ.ವಿ. ಗಳ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲರೇ ಘಟಿಕೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿರುತ್ತಾರೆ. ಉನ್ನತ ಶಿಕ್ಷಣ ಸಚಿವರು, ಮುಖ್ಯ ಅತಿಥಿ, ಗೌರವ ಡಾಕ್ಟರೇಟ್‌ ಪುರಸ್ಕೃತರು ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತಾರೆ. ಇದೆಲ್ಲದರ ಜತೆಗೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸ್ವಷ್ಟ ಸ್ವರೂಪವೊಂದು ಇದ್ದು ಅದರಂತೆ ನಡೆಸಬೇಕೇ ಹೊರತು ಯಾವುದೋ ಸಮಾವೇಶದಂತೆ ನಡೆಸುವಂತಿಲ್ಲ.

ಆದರೆ ಇತ್ತೀಚೆಗೆ ಮಂಗಳೂರು ಸಹಿತ ಹಲವು ವಿ.ವಿ.ಗಳಲ್ಲಿ ಘಟಿಕೋತ್ಸವ ಕಾರ್ಯಕ್ರಮ ಅಶಿಸ್ತಿನಿಂದ ಕೂಡಿದ್ದನ್ನು ಖುದ್ದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್‌ ಅವರೇ ಗಮನಿಸಿದ್ದಾರೆ.

ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಯಾವ ರೀತಿಯ ಉಡುಪು ಧರಿಸಬೇಕು ಎಂಬುದರಿಂದ ಹಿಡಿದು ರಾಜ್ಯಪಾಲರನ್ನು ವೇದಿಕೆಗೆ ಕರೆತರುವ ಮತ್ತು ರಾಜ್ಯಪಾಲರ ನಿರ್ಗಮನದವರೆಗೂ ಹಲವು ವಿ.ವಿ.ಗಳಲ್ಲಿ ಗೊಂದಲಗಳಾಗಿವೆ.

ವಿ.ವಿ.ಯ ದಂಡವನ್ನು ಮೆರವಣಿಗೆಯ ಹಿಂದಿನಿಂದ ತೆಗೆದುಕೊಂಡು ಬಂದ ವಿದ್ಯಮಾನವೂ ಘಟಿಸಿದ್ದಿದೆ. ಒಂದು ಘಟಿಕೋತ್ಸವದಲ್ಲಿ ಸ್ವಾಗತ ಭಾಷಣವೂ ಇರಲಿಲ್ಲ ಎಂದು ಡಾ| ಸುಧಾಕರ್‌ ಹೇಳುತ್ತಾರೆ.ಅದೇ ರೀತಿ ಘಟಿಕೋತ್ಸವದಲ್ಲಿ ಪದಕ ಪಡೆದ ವಿದ್ಯಾರ್ಥಿಗಳು ರಾಜ್ಯಪಾಲರಿಂದ ಪದಕ ಸ್ವೀಕರಿಸುತ್ತಲೇ ವೇದಿಕೆ ಇಳಿದು ಫೋಟೋ ಶೂಟ್‌ಗೆ ತೆರಳಿ ಬಿಡುತ್ತಾರೆ. ಘಟಿಕೋತ್ಸವದ ಮುಖ್ಯ ಅತಿಥಿಗಳ ಭಾಷಣ ಕೇಳಲು ಮತ್ತೆ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಬೇಕಾಗುತ್ತದೆ. ಇದರೊಂದಿಗೆ ವೇದಿಕೆಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಗೂ ಸ್ಪಷ್ಟವಾದ ಶಿಷ್ಟಾಚಾರಗಳಿದ್ದು, ಕೆಲವೆಡೆ ಇದರ ಪಾಲನೆ ಅಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿಯಾಗಿರುವ ಡಾ| ಎಂ.ಸಿ.ಸುಧಾಕರ್‌, ಘಟಿಕೋತ್ಸವ ಕಾರ್ಯಕ್ರಮಕ್ಕೆ ಸ್ವಷ್ಟ ರೂಪುರೇಷೆ ರಚಿಸಿ ಅದರ ಕಡ್ಡಾಯ ಪಾಲನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೀಗ ಉನ್ನತ ಶಿಕ್ಷಣ ಇಲಾ ಖೆಯು ರಾಜ್ಯಪಾಲರ ಕಚೇರಿಯ ಜತೆ ಸಮಾಲೋಚನೆ ನಡೆಸಿ ಘಟಿಕೋತ್ಸವ ಕಾರ್ಯಕ್ರಮಗಳಿಗೆ ಏಕರೂಪದ ಪ್ರಮಾಣಿಕೃತ ಕಾರ್ಯವಿಧಾನವೊಂದನ್ನು ರಚಿಸುವ ಪ್ರಕ್ರಿಯೆ ಆರಂಭಿಸುವ ಹಂತದಲ್ಲಿದೆ.

ಘಟಿಕೋತ್ಸವ ನಿರ್ವಹಣೆಗೆ ಇದೆ ಬ್ಲ್ಯೂಬುಕ್‌
ವಿಶ್ರಾಂತ ಕುಲಪತಿಯೊಬ್ಬರ ಪ್ರಕಾರ, ವಿ.ವಿ.ಗಳ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಏಕರೂಪತೆ ತರುವುದು ಸ್ವಾಗತಾರ್ಹ. ಆದರೆ, ಈಗಾಗಲೇ ಘಟಿಕೋತ್ಸವ ಕಾರ್ಯಕ್ರಮ ಹೇಗೆ ನಡೆಸಬೇಕು ಎಂಬ ಸಮಗ್ರ ಮಾಹಿತಿ, ಸೂಚನೆಯುಳ್ಳ ಬ್ಲ್ಯೂ ಬುಕ್‌ ಪ್ರತಿ ವಿ.ವಿ.ಗಳಲ್ಲಿಯೂ ಇದೆ. ವಿ.ವಿ.ಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವಿಗೆ ಈ ಬ್ಲೂé ಬುಕ್‌ನ ಅರಿವು ಇಲ್ಲದಿರುವುದರಿಂದ ಎಡವಟ್ಟುಗಳು ಜರಗುತ್ತಿವೆ. ಬ್ಲ್ಯೂ ಬುಕ್‌ನ ಪಾಲನೆ ಮಾಡಿದರೆ ಗೊಂದಲಗಳಿಗೆ ಆಸ್ಪದವಿರುವುದಿಲ್ಲ. ಘಟಿಕೋತ್ಸವ ಶಿಸ್ತುಬದ್ಧವಾಗಿ ನಡೆಯಲು ಅಗತ್ಯವಿದ್ದರೆ ಕಾನೂನು ತಿದ್ದುಪಡಿ ಮಾಡಲು ಸರಕಾರ ಮುಂದಾಗಬೇಕು. ಮನಸ್ಸಿಗೆ ತೋಜಿದಂತೆ ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸಿದರೆ ಘಟಿಕೋತ್ಸವದ ಘನತೆಗೆ ಚ್ಯುತಿ ಬರುತ್ತದೆ ಎಂದು ಹೇಳುತ್ತಾರೆ.

ಹಲವು ಘಟಿಕೋತ್ಸವಗಳು ಗೊಂದಲದಲ್ಲಿ ನಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ಬಗ್ಗೆ ರಾಜ್ಯಪಾಲರ ಜತೆ ಚರ್ಚೆ ನಡೆಸಿದ್ದು ಘಟಿಕೋತ್ಸವ ಕಾರ್ಯಕ್ರಮಗಳಿಗೆ ಏಕರೂಪತೆ ತರುವ ಚಿಂತನೆಯಲ್ಲಿದ್ದೇವೆ. ನಾವು ಈ ಬಗ್ಗೆ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿ ಎಲ್ಲ ವಿ.ವಿ.ಗಳಿಗೂ ಕಳುಹಿಸಿ, ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಿದ್ದೇವೆ.
-ಡಾ| ಎಂ. ಸಿ. ಸುಧಾಕರ್‌, ಉನ್ನತ ಶಿಕ್ಷಣ ಸಚಿವ

– ರಾಕೇಶ್‌ ಎನ್‌.ಎಸ್‌.

ಟಾಪ್ ನ್ಯೂಸ್

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

NEP ವಿಷಯ ಆಯ್ಕೆ ಕಾರಣ ಸ್ನಾತಕೋತ್ತರ ಪ್ರವೇಶ ಸಂಕಟ!

NEP ವಿಷಯ ಆಯ್ಕೆ ಕಾರಣ ಸ್ನಾತಕೋತ್ತರ ಪ್ರವೇಶ ಸಂಕಟ!

puಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಇನ್ನಷ್ಟು ಕಠಿನ! 3 ನೀಲನಕ್ಷೆ ಪ್ರಕಟಿಸಿದ ಮಂಡಳಿ

ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಇನ್ನಷ್ಟು ಕಠಿನ! 3 ನೀಲನಕ್ಷೆ ಪ್ರಕಟಿಸಿದ ಮಂಡಳಿ

Pan-Adhar

Scheme: ದಂಡ ಸಹಿತ ಪಾನ್‌-ಆಧಾರ್‌ ಜೋಡಿಸಿದವರು ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ!

RSS ಸಂಘದ ಕಚೇರಿಗೆ ಪೊಲೀಸರು: ಪಾಂಡವಪುರ ಉದ್ವಿಗ್ನ

RSS ಸಂಘದ ಕಚೇರಿಗೆ ಪೊಲೀಸರು: ಪಾಂಡವಪುರ ಉದ್ವಿಗ್ನ

1-ccrr

Cricket ದಾಖಲೆಯ ಹೊಸ್ತಿಲಲ್ಲಿ ಭಾರತ-ಬಾಂಗ್ಲಾ ಸರಣಿ

ಇಂದು ದಿಲ್ಲಿಗೆ ಹೊಸ ಸಿಎಂ? ಸಂಜೆ ಸಿಎಂ ಕೇಜ್ರಿವಾಲ್‌ ರಾಜೀನಾಮೆ

ಇಂದು ದಿಲ್ಲಿಗೆ ಹೊಸ ಸಿಎಂ? ಸಂಜೆ ಸಿಎಂ ಕೇಜ್ರಿವಾಲ್‌ ರಾಜೀನಾಮೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಇನ್ನಷ್ಟು ಕಠಿನ! 3 ನೀಲನಕ್ಷೆ ಪ್ರಕಟಿಸಿದ ಮಂಡಳಿ

ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಇನ್ನಷ್ಟು ಕಠಿನ! 3 ನೀಲನಕ್ಷೆ ಪ್ರಕಟಿಸಿದ ಮಂಡಳಿ

Govt., ಕಲ್ಯಾಣ ಅಭಿವೃದ್ಧಿಗೆ ಸರಕಾರದಿಂದ ಪಣ: ದಶಕದ ಬಳಿಕ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ

Govt., ಕಲ್ಯಾಣ ಅಭಿವೃದ್ಧಿಗೆ ಸರಕಾರದಿಂದ ಪಣ: ದಶಕದ ಬಳಿಕ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ

ಕಲ್ಲೇಶ್‌, E.D., arrest: Officer, Kallesh, anticipatory bail, ಇ.ಡಿ., ಬಂಧನ, ನಿರೀಕ್ಷಣಾ ಜಾಮೀನು, ಅಧಿಕಾರಿ, ಕಲ್ಲೇಶ್‌

ED ಬಂಧನ ಭೀತಿ:ನಿರೀಕ್ಷಣಾ ಜಾಮೀನು ಕೋರಿದ ಅಧಿಕಾರಿ ಕಲ್ಲೇಶ್‌-ವಿಚಾರಣೆ ಇಂದಿಗೆ ಮುಂದೂಡಿಕೆ

GOVTCM ಆರ್ಥಿಕ ಸಲಹೆಗಾರರ ಕೊಠಡಿ ನವೀಕರಣಕ್ಕೆ 15 ಲಕ್ಷ ರೂ.

CM ಆರ್ಥಿಕ ಸಲಹೆಗಾರರ ಕೊಠಡಿ ನವೀಕರಣಕ್ಕೆ 15 ಲಕ್ಷ ರೂ.

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

NEP ವಿಷಯ ಆಯ್ಕೆ ಕಾರಣ ಸ್ನಾತಕೋತ್ತರ ಪ್ರವೇಶ ಸಂಕಟ!

NEP ವಿಷಯ ಆಯ್ಕೆ ಕಾರಣ ಸ್ನಾತಕೋತ್ತರ ಪ್ರವೇಶ ಸಂಕಟ!

puಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಇನ್ನಷ್ಟು ಕಠಿನ! 3 ನೀಲನಕ್ಷೆ ಪ್ರಕಟಿಸಿದ ಮಂಡಳಿ

ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಇನ್ನಷ್ಟು ಕಠಿನ! 3 ನೀಲನಕ್ಷೆ ಪ್ರಕಟಿಸಿದ ಮಂಡಳಿ

Pan-Adhar

Scheme: ದಂಡ ಸಹಿತ ಪಾನ್‌-ಆಧಾರ್‌ ಜೋಡಿಸಿದವರು ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ!

RSS ಸಂಘದ ಕಚೇರಿಗೆ ಪೊಲೀಸರು: ಪಾಂಡವಪುರ ಉದ್ವಿಗ್ನ

RSS ಸಂಘದ ಕಚೇರಿಗೆ ಪೊಲೀಸರು: ಪಾಂಡವಪುರ ಉದ್ವಿಗ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.