“ಅನುಸರಣೆ’ಗೆ ಹೆಚ್ಚು ಒತ್ತು ನಿರೀಕ್ಷೆಗಳ ಭಾರಕ್ಕೆ ಕುಸಿಯದ ಬಜೆಟ್‌


Team Udayavani, Feb 2, 2017, 3:50 AM IST

budget.jpg

ಗರಿಷ್ಠ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದ ಕಾರಣ ಬೊಕ್ಕಸಕ್ಕೆ ಧಾರಾಳ ಆದಾಯ ಹರಿದು ಬಂದಿರುವುದರಿಂದ ಹತ್ತಾರು ಕೊಡುಗೆಗಳನ್ನು ನಿರೀಕ್ಷಿಸಿದವರಿಗೆ ಬಜೆಟ್‌ ನಿರಾಶೆಯುಂಟು ಮಾಡಿರಬಹುದು. ಆದರೆ ರೈತರು, ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಭಾಗದವರನ್ನು ಆದ್ಯತೆಯಾಗಿಟ್ಟುಕೊಂಡು ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್‌ ಜೇಟಿÉ ದೀರ್ಘಾವಧಿಯಲ್ಲಿ ಫ‌ಲ ನೀಡುವಂತಹ ಹಲವು ಕೊಡುಗೆ, ಕ್ರಮಗಳನ್ನು ಪ್ರಕಟಿಸಿದ್ದಾರೆ. ಇದರ ಜತೆಗೆ ಹೂಡಿಕೆಗೆ ಉತ್ತೇಜನ ನೀಡುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ವ್ಯವಹಾರ ಪಾರದರ್ಶಕತೆ, ಕಪ್ಪುಹಣ, ಭ್ರಷ್ಟಾಚಾರ ತಡೆ ತಣ್ತೀವನ್ನು ಗಟ್ಟಿಯಾಗಿ ಅಪ್ಪಿಕೊಂಡು ಜನಪ್ರಿಯ ಕೊಡುಗೆಗಳ ಬದಲಿಗೆ “ಅನುಸರಣೆ’ಗೆ ಹೆಚ್ಚು ಒತ್ತು ನೀಡಿರುವ ಬಜೆಟ್‌ ಇದು. 

ನಗದು ವ್ಯವಹಾರಕ್ಕೆ 3 ಲಕ್ಷ ರೂ.ಗಳ ಮಿತಿ ವಿಧಿಸಿದ್ದು ಕಪ್ಪು ಹಣ ಜಮೆಯಾಗುವುದನ್ನು ತಡೆಯುವ ಮಹತ್ವದ ಕ್ರಮಗಳಲ್ಲಿ ಒಂದು. ಡಿಜಿಟಲ್‌ ವ್ಯವಹಾರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಘೋಷಿಸಿರುವ ಈ ನಿರ್ಧಾರದಿಂದಾಗಿ ಭವಿಷ್ಯದ ಹೆಚ್ಚಿನೆಲ್ಲ ವಹಿವಾಟುಗಳು ಬ್ಯಾಂಕ್‌ ಮೂಲಕ ನಡೆಯುವುದರಿಂದ ಆರ್ಥಿಕ ಚಟುವಟಿಕೆಗಳ ಪಾರದರ್ಶಕತೆ ಹೆಚ್ಚಾಗಲಿದೆ. ಅಂತೆಯೇ ರಾಜಕೀಯ ಪಕ್ಷಗಳ ನಗದು ದೇಣಿಗೆ ಮಿತಿಯನ್ನು 20,000 ರೂ.ನಿಂದ 2,000 ರೂ.ಗಿಳಿಸಿದ್ದು ಇನ್ನೊಂದು ದಿಟ್ಟ ಕ್ರಮ. ಇಷ್ಟರ ತನಕ 20,000 ರೂ. ತನಕ ಬೇನಾಮಿಯಾಗಿ ದೇಣಿಗೆ ಸ್ವೀಕರಿಸಲು ಅವಕಾಶ ಇತ್ತು. ಈ ಮೂಲಕವೇ ಕೋಟಿಗಟ್ಟಲೆ ಹಣ ಪಕ್ಷಗಳಿಗೆ ಹರಿದು ಬರುತ್ತಿತ್ತು. ಇದಕ್ಕೆ ಲೆಕ್ಕ ತೋರಿಸುವ ಅಗತ್ಯವಿಲ್ಲದ ಕಾರಣ ಕಪ್ಪು ಹಣ ಸುಲಭವಾಗಿ ಬಿಳಿಯಾಗುತ್ತಿತ್ತು. ಇನ್ನು ಮುಂದೆ ಇದಕ್ಕೆ ಆಸ್ಪದವಿಲ್ಲ. 

ಆದಾಯ ತೆರಿಗೆ ಸ್ಲಾéಬ್‌ನ್ನು ಸ್ಪರ್ಶಿಸುವ ಗೋಜಿಗೆ ಹೋಗದೆ ಜೇಟಿÉ ವೇತನ ವರ್ಗದವರನ್ನು ನಿರಾಶೆಗೊಳಿಸಿದ್ದಾರೆ. ಸ್ಲಾéಬ್‌ ವ್ಯವಸ್ಥೆಯನ್ನು ಯಥಾಸ್ಥಿತಿ ಯಲ್ಲಿಟ್ಟು 2.5 ಲ. ರೂ.ಗಳಿಂದ 5 ಲ. ರೂ. ತನಕದ ಆದಾಯವಿರುವವರ ತೆರಿಗೆ ದರವನ್ನು ಶೇ. 10ರಿಂದ ಶೇ. 5ಕ್ಕಿಳಿಸಿರುವುದಷ್ಟೇ ಆಗಿರುವ ಬದಲಾವಣೆ. ಆದಾಯ ತೆರಿಗೆ ಮಿತಿ 3.5 ಲಕ್ಷ ರೂ.ಗೇರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಹೆಚ್ಚು ಜನರನ್ನು ತೆರಿಗೆ ವ್ಯಾಪ್ತಿಯೊಳಗೆ ತರುವ ಸಲುವಾಗಿ ಸ್ಲಾéಬ್‌ ಬದಲಾಯಿಸುವ ಗೋಜಿಗೆ ಹೋಗಿಲ್ಲ. 

ಇದು ಜನಪ್ರಿಯ ಬಜೆಟ್‌ ಅಲ್ಲ. ಜನಸಾಮಾನ್ಯರ ಬದುಕಿನಲ್ಲಿ ತಕ್ಷಣಕ್ಕೆ ಬಜೆಟ್‌ನಿಂದ ದೊಡ್ಡ ಬದಲಾವಣೆಯೇನೂ ಆಗುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶ, ಕೃಷಿ, ನೀರಾವರಿ, ವಸತಿ ಮುಂತಾದ ಬಡವರು, ಕೆಳಮಧ್ಯಮ ವರ್ಗದವರನ್ನು ತಟ್ಟುವ ವಲಯಗಳಿಗೆ ಆದ್ಯತೆ ನೀಡಿರುವುದರಿಂದ ಮುಂಬರುವ ದಿನಗಳಲ್ಲಿ ಸಾಮಾಜಿಕ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗಬಹುದು.

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.