ಕೇಂದ್ರ ಸಚಿವ ಸದಾನಂದಗೌಡ ನನಗಿಂತ ಸೀನಿಯರ್ ಅಲ್ಲ- ಯತ್ನಾಳ ತಿರುಗೇಟು
Team Udayavani, Dec 25, 2020, 9:45 PM IST
ವಿಜಯಪುರ: ನಾನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿ ಆಗಿದ್ದು, ಸದಾನಂದಗೌಡ ಅವರು ಈಗ ಸಚಿವರಾಗಿದ್ದಾರೆ. ಹೀಗಾಗಿ ಯಾರು ಸೀನೀಯರ್ ಎಂದು ನೀವೇ ನಿರ್ಧರಿಸಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.
ಸಂಪುಟ ವಿಸ್ತರಣೆ, ಪುನಾರಚನೆ ಕುರಿತ ತಮ್ಮ ಹೇಳಿಕೆ ಸಚಿವ ಸದಾನಂದ ಗೌಡ ಅವರು ಯತ್ನಾಳ ಬಿಜೆಪಿ ರಾಜ್ಯಾಧ್ಯಕ್ಷರಲ್ಲ, ಪಕ್ಷದ ಸಾಮಾನ್ಯ ಶಾಸಕ ಮಾತ್ರ. ಅವರಿಂದ ಏನು ಮಾಡಲು ಸಾಧ್ಯ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕೇಂದ್ರ ಸಚಿವ ಸದಾನಂದಗೌಡರು ಸರಿಯಾಗೇ ಹೇಳಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರೇ ತಾವು ಪ್ರಧಾನಿ ಅಲ್ಲ, ಸಾಮಾನ್ಯ ಜನ ಸೇವಕ ಎಂದಿದ್ದಾರೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನೇ. ಸದಾನಂದಗೌಡ ಒಳ್ಳೆಯ ಸಲಹೆ ಕೊಟ್ಟಿದ್ದಾರೆ ಎಂದು ಕುಟುಕಿದ್ದಾರೆ.
ನಾನು ಸಾಮಾನ್ಯ ಶಾಸಕ, ಸೇವಕ. ಹೀಗಾಗಿ ಸದಾನಂದಗೌಡ ಅವರಿಗೆ ಅಭಿನಂದನೆಗಳು. ಇಷ್ಟಕ್ಕೂ ಎಲ್ಲಿಯೂ ನನ್ನನ್ನು ನಾನು ರಾಷ್ಟ್ರೀಯ ನಾಯಕನೆಂದು ಹೇಳಿಕೊಂಡಿಲ್ಲ. ನಾನು ಓರ್ವ ಸಾಮಾನ್ಯ ಶಾಸಕ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ ಹಾಗೂ ಸೂಕ್ತವಾಗಿದೆ. ಅವರು ಇಷ್ಟೋಂದು ಜ್ಞಾನ ಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಕೃತಜ್ಞತೆಗಳು. ಹಾದೀಬೀದಿಯಲ್ಲಿ ಪತ್ರಕರ್ತರು ಕೇಳುತ್ತಾರೆ. ಪತ್ರಕರ್ತರು ಎಲ್ಲಿ ಪ್ರಶ್ನೆ ಕೇಳುತ್ತಾರೋ ಅಲ್ಲೇ ಉತ್ತರಿಸಿದ್ದೇನೆ. ನಾನು ಸ್ಚಯಂ ಘೋಷಿತ ರಾಷ್ಟೀಯ, ರಾಜ್ಯ, ಜಿಲ್ಲಾ ನಾಯಕನಲ್ಲ. ಜನರಿಂದ ಜನರಿಗಾಗಿ ಆಯ್ಕೆಯಾಗಿದ್ದೇನೆ. ಸದಾನಂದಗೌಡ ಮುಖ್ಯಮಂತ್ರಿ ಆಗಿದ್ದವರು, ಕೇಂದ್ರ ರೇಲ್ವೇ ಖಾತೆ ಸಚಿವರಾಗಿದ್ದವರು. ಈಗ ರಸಗೊಬ್ಬರ ಸಚಿವರಾಗಿ ಯಶಸ್ವಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಅವರು ನಾನು ಒಂದೇ ಕಾಲದಲ್ಲಿ ಶಾಸಕರಾಗಿ ಆಯ್ಕೆಯಾದವರೇ, ನನಗಿಂತ ಅವರೇನೂ ಹಿರಿಯರಲ್ಲ.ಅವರು ರಾಜ್ಯಾಧ್ಯಕ್ಷರಾಗಿದ್ದ ವೇಳೆಯೇ ನನ್ನನ್ನು ಪಕ್ಷದಿಂದ 6 ವರ್ಷ ಅಮಾನತ್ತು ಮಾಡಿದ್ದರು. ಅವರಿಗೆ ನಮ್ನ ಮೇಲೆ ಪ್ರೀತಿ ಜಾಸ್ತಿ ಇದೆ ಎಂದು ಕುಟುಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.