ಮೇ 3ರ ಬಳಿಕವೇ ವಿ.ವಿ.ಆರಂಭ; ತತ್‌ಕ್ಷಣ ತರಗತಿ ಆರಂಭಿಸಲು ಸರಕಾರ ಉತ್ಸುಕ; ವಿ.ವಿ.ಗಳ ವಿರೋಧ
Team Udayavani, Apr 25, 2020, 7:00 AM IST
ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ತರಗತಿಗಳನ್ನು ತತ್‌ಕ್ಷಣ ಆರಂಭಿಸಲು ಸರಕಾರ ಉತ್ಸುಕವಾಗಿದೆಯಾದರೂ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಉಪ ಕುಲಪತಿಗಳು ಮೇ 3ರ ವರೆಗೂ ತರಗತಿ ತೆರೆಯದಿರಲು ನಿರ್ಧರಿಸಿದ್ದಾರೆ.
ಲಾಕ್‌ಡೌನ್ ಸಂಬಂಧಿಸಿದಂತೆ ರಾಜ್ಯ ದಲ್ಲಿ ಕೆಲವು ಸಡಿಲಿಕೆ ಮಾಡಲಾಗಿದೆ. ಅಲ್ಲದೆ ಹಸಿರು ವಲಯದ ಜಿಲ್ಲೆಯಲ್ಲಿ ಸಾರ್ವಜನಿಕ ಓಡಾಟವೂ ವ್ಯಾಪಕ ವಾಗಿದೆ. ಈ ಹಿನ್ನೆಲೆಯಲ್ಲಿ ವಿ.ವಿ.ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ನಾತಕೋತ್ತರ ತರಗತಿ ಆರಂಭಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಆದರೆ ಮೇ 3ರ ವರೆಗೂ ಅವಕಾಶ ನೀಡುವುದಿಲ್ಲ ಎಂದು ವಿ.ವಿ.ಗಳ ಉಪಕುಲಪತಿಗಳು ಪರೋಕ್ಷ ವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು “ಉದಯವಾಣಿ’ಗೆ ಖಚಿತಪಡಿಸಿವೆ.
ಉನ್ನತ ಶಿಕ್ಷಣ ಪರಿಷತ್ ವತಿಯಿಂದ ಈಗಾಗಲೇ ವಿವಿಧ ವಿ.ವಿ.ಗಳ ಕುಲಪತಿಗಳ ಸಭೆ ಕರೆಯಲಾಗಿದೆ. ವಿ.ವಿ.ಗಳಲ್ಲಿ ಸದ್ಯ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲದೆ ಆನ್‌ಲೈನ್ ತರಗತಿಗಳನ್ನು ಅಗತ್ಯ ಸುರಕ್ಷಾ ಕ್ರಮ ಅನುಸರಿಸಿಕೊಂಡು ನಡೆಸಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಸಮಿತಿ ರಚನೆ
ತರಗತಿ, ಪರೀಕ್ಷೆ ಮತ್ತು ಮೌಲ್ಯ ಮಾಪನಕ್ಕೆ ಸಂಬಂಧಿಸಿ ಸಮಿತಿ ರಚಿಸಲಾಗಿದೆ. ಸೋಮವಾರದೊಳಗೆ ವರದಿ ಒಪ್ಪಿಸಲು ನಿರ್ದೇಶನ ನೀಡಲಾಗಿದೆ. ಈ ಸಂಬಂಧ ರಾಜ್ಯದ ಹಲವು ವಿ.ವಿ .ಗಳ ಉಪಕುಲ ಪತಿ, ಕುಲಸಚಿವರಿಗೆ ಉನ್ನತ ಶಿಕ್ಷಣ ಪರಿಷತ್‌ನಿಂದ ಸೂಚನೆ ಹೋಗಿದೆ ಎಂದು ಮೂಲ ಗಳು ಖಚಿತ ಪಡಿಸಿವೆ.
ತರಗತಿ ನಡೆಸುವುದು ಕಷ್ಟ?
ತರಗತಿ ಆರಂಭಿಸಿದರೆ ಹಾಸ್ಟೆಲ್ ತೆರೆಯಬೇಕಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಚಾರ ವ್ಯವಸ್ಥೆ ಸಮಸ್ಯೆಯಾಗಲಿದೆ. ಹೀಗಾಗಿ ಕನಿಷ್ಠ ಮೇ 3ರ ವರೆಗೆ ತರಗತಿ ಆರಂಭಿಸುವುದು ಕಷ್ಟ ಎಂಬ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗಿದೆ ಎಂದು ಉಪಕುಲ ಪತಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜೂನ್ 2ನೇ
ವಾರದಲ್ಲಿ ಪರೀಕ್ಷೆ?
ಲಾಕ್‌ಡೌನ್ ಅವಧಿಯಲ್ಲಿ ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುತ್ತಿವೆ. ಹೀಗಾಗಿ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಜೂ.2ನೇ ವಾರ ಮತ್ತು 2, 4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳು ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರವಷ್ಟೇ ನಡೆಯಬಹುದು ಎನ್ನಲಾಗುತ್ತಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ನಡೆಸುವ ಪರೀಕ್ಷೆ ಆಧಾರದಲ್ಲಿ ಇಂಟರ್ನಲ್ ಅಸೆಸೆ¾ಂಟ್ ಅಂಕ ನೀಡುವ ಬಗ್ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ಗಂಭೀರ ಚಿಂತನೆ ನಡೆಸಿದೆ.
ಆನ್‌ಲೈನ್ ತರಗತಿ,ಪರೀಕ್ಷೆ ನಡೆಸಬಹುದು.ಬೆಂಗಳೂರು ವಿ.ವಿ. ಪರಿಣಾಮಕಾರಿಯಾಗಿ ಆನ್‌ಲೈನ್ ತರಗತಿ ನಡೆಸುತ್ತಿದೆ.
-ಪ್ರೊ| ಕೆ.ಆರ್. ವೇಣುಗೋಪಾಲ್,
ಬೆಂ. ವಿ.ವಿ. ಉಪಕುಲಪತಿ
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.