ಹಂಪಿ ಉತ್ಸವದ ಲಾಂಛನ ಅನಾವರಣ
Team Udayavani, Jan 1, 2020, 3:04 AM IST
ಬಳ್ಳಾರಿ: ಜ.10, 11ರಂದು ನಡೆಯಲಿರುವ ಹಂಪಿ ಉತ್ಸವದ ಲಾಂಛನವನ್ನು ಜಿಲ್ಲಾ ಧಿಕಾರಿಗಳ ಸಭಾಂಗಣದಲ್ಲಿ ಸಂಸದ ವೈ. ದೇವೆಂದ್ರಪ್ಪ ಹಾಗೂ ಶಾಸಕರಾದ ಕರುಣಾಕರ ರೆಡ್ಡಿ, ಕೆ.ಸಿ.ಕೊಂಡಯ್ಯ ಮತ್ತು ಅಲ್ಲಂವೀರಭದ್ರಪ್ಪ ಅವರು ಬಿಡುಗಡೆ ಮಾಡಿದರು.
ಕಾರವಾರದ ಕಲಾವಿದ ದಾಮೋಧರ್ ರಚಿಸಿರುವ ಕಲ್ಲಿನ ರಥ ಮತ್ತು ವಿಜಯನಗರ ಅರಸರ ಲಾಂಛನ, ಕಾಮನಬಿಲ್ಲಿನ ಏಳು ಬಣ್ಣಗಳಿಂದ ಕೂಡಿರುವ ಉತ್ಸವದ ಲಾಂಛನ ಬಿಡುಗಡೆ ಮಾಡಿದ ನಂತರ ಮಾತನಾಡಿದ ಶಾಸಕ ಜಿ.ಕರುಣಾಕರ ರೆಡ್ಡಿ, ಮೈಸೂರು ದಸರಾದಂತೆ ಹಂಪಿ ಉತ್ಸವವು ವಿಜೃಂಭಣೆಯಿಂದ ಜರುಗಬೇಕು.
ಉತ್ಸವಕ್ಕೆ ಬರುವ ಪ್ರವಾಸಿಗರಿಗೆ ಬೆಂಗಳೂರಿನಿಂದ ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಸಂಬಂಧಿ ಸಿದಂತೆ ಖಾಸಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚಿಸಬೇಕು. ಉತ್ಸವದಲ್ಲಿ ಬಂದೋಬಸ್ತ್ಗೆ ಮಹಿಳಾ ಮತ್ತು ಗಸ್ತು ಪೊಲೀಸರನ್ನು ಹೆಚ್ಚಿನದಾಗಿ ನೇಮಿಸುವಂತೆ ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಮಾತನಾಡಿ, ಉತ್ಸವವು ನಾಡಹಬ್ಬದ ರೀತಿಯಲ್ಲಿ ಆಚರಣೆಯಾಗಲಿ. ಹಂಪಿ ವಿಶ್ವವಿದ್ಯಾಲಯವನ್ನು ಈ ಉತ್ಸವದಲ್ಲಿ ತೊಡಗಿಸಿಕೊಳ್ಳಿ ಎಂದರು. ಸಂಸದ ವೈ. ದೇವೇಂದ್ರಪ್ಪ ಮಾತನಾಡಿ, ಉತ್ಸವಕ್ಕೆ ಬೇಕಾದ ಅಗತ್ಯ ಅನುದಾನವನ್ನು ಸರ್ಕಾರದಿಂದ ಕೊಡಿಸುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.