ನಾ ಜನನಾಯಕನೂ ಅಲ್ಲ, ಸೇವಕನೂ ಅಲ್ಲ: ಉಪ್ಪಿ ಸುದ್ದಿಗೋಷ್ಠಿ ಹೈಲೈಟ್ಸ್
Team Udayavani, Aug 12, 2017, 12:38 PM IST
ಬೆಂಗಳೂರು: ಜಾತಿ, ಧರ್ಮ, ದುಡ್ಡು, ಫೇಮಸ್ ಇರುವವರಿಗೆ ವೋಟ್ ಹಾಕಲಾಗುತ್ತಿದೆ. ವೋಟ್ ಬ್ಯಾಂಕ್ ರಾಜಕೀಯ ನಮಗೆ ಬೇಕಾಗಿಲ್ಲ. ಜನರ ಜತೆ ಕೆಲಸ ಮಾಡಬೇಕಾದ ಅನಿರ್ವಾಯತೆ ಇದೆ. ಟೆಕ್ನಾಲಜಿ ಇದೆ, ಖಂಡಿತ ನಾವು ಜನರನ್ನು ತಲುಪಬಹುದು. ಸೋಲು, ಗೆಲುವು ಮುಖ್ಯವಲ್ಲ. ಬನ್ನಿ ಎಲ್ಲರೂ ಸೇರಿ ಹೊಸ ಇತಿಹಾಸ ನಿರ್ಮಿಸೋಣ…ಇದು ನಟ, ನಿರ್ದೇಶಕ ಉಪೇಂದ್ರ ಅವರ ನುಡಿ.
ರಾಜಕೀಯ ಪ್ರವೇಶ ಹಿನ್ನೆಲೆಯಲ್ಲಿ ಶನಿವಾರ ಬಿಡದಿಯ ರುಪ್ಪೀಸ್ ರೆಸಾರ್ಟ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮಗೆ ಪ್ರಜಾಕೀಯ, ಪ್ರಜಾಕಾರಣ, ಪ್ರಜಾಪ್ರಭುತ್ವ ಬೇಕಾಗಿದೆ.ಈಗ ಸಮಾವೇಶಗಳನ್ನು ಯಾಕ್ ನಡೆಸುತ್ತಾರೋ ಗೊತ್ತಿಲ್ಲ. ಒಂದು ಕಾಲದಲ್ಲಿ ಇಷ್ಟೊಂದು ಟಿವಿ ಚಾನೆಲ್ ಇರಲಿಲ್ಲ. ಅಂದು ರಾಲಿ ಮಾಡಿ ಭಾಷಣ ಮಾಡುವ ಪರಿಸ್ಥಿತಿ ಇತ್ತು. ಆದ್ರೆ ಈಗ ರಾಲಿ ಮಾಡಿ ಅದನ್ನೇ ಟಿವಿಯಲ್ಲಿ ನೋಡ್ಬೇಕಾ? ಜಾತಿ, ದುಡ್ಡು, ಹಣ, ಧರ್ಮ ನೋಡಿ ಮತ ಹಾಕ್ಬೇಕಾ?
ರಾಜಕೀಯ ಪಕ್ಷ ಕಟ್ಟಲು ಹಣ ಬೇಕೇ, ಬೇಕು ಎನ್ನುವ ಪರಿಸ್ಥಿತಿ ಇದೆ. ರಾಜಕಾರಣಿಯಾಗಬೇಕಾದರೆ ಮೊದಲು ಅರ್ಹತೆ ಮುಖ್ಯವಾಗಬೇಕಾಗುತ್ತದೆ. ದುಡ್ಡು, ಜಾತಿ ಬಲ ಇಲ್ಲದೆ ಗೆಲ್ಲಲು ಆಗುವುದಿಲ್ಲ ಎನ್ನುತ್ತಿದ್ದಾರೆ. ನಾನು ಕೆಲಸಗಾರ ಅದಕ್ಕಾಗಿ ಖಾಕಿ ಬಟ್ಟೆ ಹಾಕಿಕೊಂಡು ಬಂದಿದ್ದೇನೆ. ನನ್ನ ಪಕ್ಷಕ್ಕೆ ಬರುವವರು, ಸ್ವ ವಿವರ ಕಳುಹಿಸಿ (ಇ ಮೇಲ್ ಐಡಿ: [email protected], [email protected], [email protected]) ನಿಮ್ಮೊಂದಿಗೆ ಚರ್ಚಿಸಿಯೇ ನಾನು ಮುಂದುವರಿಯುತ್ತೇನೆ.
ನಮ್ಮ ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ರಾಜ. ಎಲ್ಲರೂ ಪ್ರತಿವರ್ಷ ಜನರು ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಾರೆ. ನಮ್ಮ ಬಜೆಟ್ ಆಗೋದೆ ಅದ್ರಿಂದ. . ಜನ ಕೊಡ್ತಿರೋ ತೆರಿಗೆ ಸಮರ್ಪಕವಾಗಿ ಖರ್ಚಾಗಬೇಕು. ನನ್ನ ಪ್ರಕಾರ ಜನರು ಶ್ರೀಸಾಮಾನ್ಯರಲ್ಲ, ನನ್ನ ಪ್ರಕಾರ ಅಸಾಮಾನ್ಯರು ಎಂದು ವಿಶ್ಲೇಷಿಸಿದರು.
ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದೇನೆ. ಆದರೆ ಹೊಸ ಪಕ್ಷದ ಹೆಸರೇನು? ಅದರ ಚಿಹ್ನೆ ಏನು ಎಂಬುದು ಈಗಲೇ ಹೇಳಲು ಸಾಧ್ಯವಿಲ್ಲ. ಚುನಾವಣಾ ಆಯೋಗಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅಲ್ಲಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಜನರ ದುಡ್ಡು ಎಲ್ಲೂ ಪೋಲಾಗದೆ ಖರ್ಚಾಗಬೇಕು. ಅವರಿಗೆ ಕೆಲಸ ಮಾಡುವ ತಾಕತ್ತಿದ್ಯಾ ಅಂತ ನೋಡಿ ಮತ ನೀಡಬೇಕು. ನಮ್ಮ ಮನೆಯಲ್ಲಿ ಕೆಲಸ ಮಾಡುವವರ ಜಾತಿ ನೋಡ್ತೇವಾ? ಅದಕ್ಕಾಗಿ ಸಮರ್ಥರು ಮಾತ್ರ ಶಾಸಕರು, ಸಂಸದರು ಆಗಿ ಆಯ್ಕೆಯಾಗಬೇಕು ಎಂದರು.
ಭ್ರಷ್ಟಾಚಾರವೂ ಬೇಡ, ಹಣವೂ ಬೇಡ:
ಭ್ರಷ್ಟಾಚಾರವೂ ಬೇಡ, ಹಣವೂ ಬೇಡ. ಹಣದಿಂದಲೇ ಭ್ರಷ್ಟಾಚಾರವಾಗುತ್ತೆ. ನಾನು ಕೂಡಾ ಪುಕ್ಸಟ್ಟೆಯಾಗಿ ಮಾಡುತ್ತಿಲ್ಲ, ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕನಾಗುತ್ತೇನೆ. ಆದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಬೇಡ. ಯಾಕೆಂದರೆ ನಾನೊಂದು ಆಶಾ ಭಾವನೆ ಹೊಂದಿದ್ದೇನೆ. ಹಣ ಸಂಗ್ರಹಿಸಿ ಪಕ್ಷ ಕಟ್ಟಿದ್ರೆ ಏನಾಗುತ್ತೆ, ನಾಳೆ ನಾವು ಜನರಿಗೆ ಹಣ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಜಾತಿ, ಧರ್ಮ, ಹಣ ಇಲ್ಲದೇ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದೇನೆ. ಖಂಡಿತ ನೀವೆಲ್ಲರೂ ಕೈಜೋಡಿಸಿದರೆ ಸಾಧ್ಯ ಎಂಬುದು ನನ್ನ ವಿಶ್ವಾಸ. ನನ್ನಲ್ಲಿ ಹಿಂದಿನಿಂದಲೂ ಇಂಥದ್ದೊಂದು ಕಲ್ಪನೆ ಇತ್ತು.
ಸುದ್ದಿಗೋಷ್ಠಿಯ ಹೈಲೈಟ್ಸ್
*ಸ್ವ ಇಚ್ಛೆಯಿಂದ ಪ್ರಜಾಕೀಯ ಪಕ್ಷ ಕಟ್ಟುತ್ತಿದ್ದೇನೆ
*ಇ ಮೇಲ್ ಐಡಿಗಳಿಗೆ ನಿಮ್ಮ ಸಲಹೆಗಳನ್ನು ನನಗೆ ಕಳುಹಿಸಿಕೊಡಿ
*ರಾಜಕಾರಣಿಯಾಗಬೇಕಾದರೆ ಮೊದಲು ಅರ್ಹತೆ ಮುಖ್ಯ
*ನಮ್ಮ ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ
*ಇಂದು ದುಡ್ಡು, ತೋಳ್ಬಲದಿಂದ ರಾಜಕೀಯ ಮಾಡುತ್ತಿದ್ದಾರೆ
*ಕೆಳಮಟ್ಟದಿಂದ ಬದಲಾವಣೆ ತರಬೇಕಾಗಿದೆ
*ಸ್ವಚ್ಛ ಭಾರತದಂತೆ ಸ್ವಚ್ಛ ಆಡಳಿತ ನನ್ನ ಉದ್ದೇಶ
*ನಾನು ನಾಯಕನೂ ಅಲ್ಲ, ಸೇವಕನೂ ಅಲ್ಲ, ನಾನು ಕಾರ್ಮಿಕ
*
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.