ಮೇಲ್ಮನೆ: ಗದ್ದಲ, ಘೋಷಣೆ ನಡುವೆಯೇ 8 ಮಸೂದೆಗಳಿಗೆ ಅಂಗೀಕಾರ
Team Udayavani, Feb 15, 2019, 1:41 AM IST
ಬೆಂಗಳೂರು: ವಿಪಕ್ಷ ಸದಸ್ಯರ ಗೈರು ಮತ್ತು ಗದ್ದಲದ ನಡುವೆಯೇ ಕರ್ನಾಟಕ ಋಣ ಪರಿಹಾರ ಮಸೂದೆ, ಭೂ ಸ್ವಾಧೀನ, ಪುನರ್ವಸತಿ, ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ, ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ ಮತ್ತು ಶಿಕ್ಷಕರ ವರ್ಗಾವಣೆ ಕಾಯ್ದೆ ಸಹಿತವಾಗಿ 8 ತಿದ್ದುಪಡಿ ಮಸೂದೆ ಅಂಗೀಕರಿಸಲಾಯಿತು.
ಗುರುವಾರ ಬೆಳಗ್ಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು, ಮೂರು ವಿಶ್ವ ವಿದ್ಯಾಲಯಗಳ ಮಸೂದೆಗಳು, ಕರ್ನಾಟಕ ಋಣ ಪರಿಹಾರ ಮಸೂದೆ, ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ, ಶಿಕ್ಷಕರ ವರ್ಗಾವಣೆ ಕಾಯ್ದೆ, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಮಸೂದೆಗಳ ಮಂಡನೆಗೆ ಅನುಮತಿ ನೀಡಿದರು.
ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಕರ್ನಾಟಕ ಋಣ ಪರಿಹಾರ ಮಸೂದೆ-2018 ಮಂಡಿಸಿದರು. ಯಾವುದೇ ಚರ್ಚೆ ಇಲ್ಲದೇ ಅಂಗೀಕಾರಗೊಂಡಿತು. ಈ ಮೂರು ಮಸೂದೆ ಅಂಗೀಕಾರ ಆಗುವವರೆಗೂ ವಿಪಕ್ಷದ ಸದಸ್ಯರು ಸದನದಲ್ಲಿ ಇರಲಿಲ್ಲ.
10.20 ಗಂಟೆ ಕಲಾಪ
ಈ ಬಾರಿಯ ಅಧಿವೇಶನದದಲ್ಲಿ ಏಳು ದಿನಗಳ ಕಾಲ 10 ತಾಸು 20 ನಿಮಿಷ ಕಲಾಪ ನಡೆದು 11 ಮಸೂದೆಗಳು ಅಂಗೀಕಾರವಾಗಿವೆ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ತಿಳಿಸಿದರು. ಈ ಅವಧಿಯಲ್ಲಿ 671 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಅದರಲ್ಲಿ 90 ಪ್ರಶ್ನೆಗಳನ್ನು ಅಂಗೀಕರಿಸಿ, 16 ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಅಧಿವೇಶನದಲ್ಲಿ ಒಂದು ಹಕ್ಕುಚ್ಯುತಿ ಸೂಚನೆಯನ್ನು ಮಂಡಿಸಿ, ಹಕ್ಕುಬಾಧ್ಯತಾ ಸಮಿತಿಗೆ ವಹಿಸಲಾಯಿತು. ಶೂನ್ಯವೇಳೆಯ ಒಟ್ಟು 6 ಪ್ರಸ್ತಾವಗಳ ಪೈಕಿ ಎರಡಕ್ಕೆ ಉತ್ತರ ಮಂಡಿಸಲಾಯಿತು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.