ಮೇಲ್ಮನೆ ಚುನಾವಣೆ: ಯಾರ ಲೆಕ್ಕಾಚಾರ ಏನು?
Team Udayavani, Nov 10, 2021, 6:40 AM IST
ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಯಾವ ಪಕ್ಷದ ಲೆಕ್ಕಾಚಾರ ಏನು ಎಂಬುದರ ಮಾಹಿತಿ ಇಲ್ಲಿದೆ…
ಬಿಜೆಪಿಗೆ 12 ಸ್ಥಾನ ಗೆಲ್ಲುವ ನಿರೀಕ್ಷೆ
ಬೆಂಗಳೂರು: ಉಪ ಚುನಾವಣೆ ಬೆನ್ನಲ್ಲೇ ಎದುರಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. 25 ಸ್ಥಾನಗಳಲ್ಲಿ ಬಿಜೆಪಿ ಪ್ರಸ್ತುತ ಆರು ಸ್ಥಾನಗಳನ್ನು ಹೊಂದಿದ್ದು ಗ್ರಾಮ ಪಂಚಾಯಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿರುವುದರಿಂದ 10 ರಿಂದ 12 ಸ್ಥಾನ ಗೆಲ್ಲುವ ಗುರಿ ಹೊಂದಿದೆ.
ಈ ಮಧ್ಯೆ, ಕೋಲಾರ- ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್‌ನಿಂದ ಗೆಲುವು ಸಾಧಿಸಿರುವ ಮನೋಹರ್ ಹಾಗೂ ಮೈಸೂರು- ಚಾಮರಾಜನಗರದಿಂದ ಗೆದ್ದಿದ್ದ ಸಂದೇಶ ನಾಗರಾಜ್ ಬಿಜೆಪಿಯತ್ತ ಮುಖ ಮಾಡಿದ್ದು ಬೇರೆ ಪಕ್ಷದಲ್ಲಿರುವ ಪ್ರಭಾವಿ ನಾಯಕರನ್ನು ಸೆಳೆದು ಟಿಕೆಟ್ ನೀಡುವ ಕಾರ್ಯತಂತ್ರ ರೂಪಿಸಲಾಗಿದೆ. ಪ್ರಸ್ತುತ ಬೆಳಗಾವಿ ದ್ವಿಸದಸ್ಯ ಕ್ಷೇತ್ರದಿಂದ ಮಹಂತೇಶ ಕವಟಗಿಮಠ, ಧಾರವಾಡ ದ್ವಿಸದಸ್ಯ ಕ್ಷೇತ್ರದಿಂದ ಪ್ರದೀಪ್ ಶೆಟ್ಟರ್, ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಿಂದ ಕೋಟ ಶ್ರೀನಿವಾಸಪೂಜಾರಿ, ಚಿಕ್ಕಮಗಳೂರು ಕ್ಷೇತ್ರದಿಂದ ಎಂ.ಕೆ.ಪ್ರಾಣೇಶ್, ಕಲಬುರಗಿ ಕ್ಷೇತ್ರದಿಂದ ಬಿ.ಜಿ.ಪಾಟೀಲ್ ಆಯ್ಕೆಯಾಗಿ ದ್ದಾರೆ. ದ್ವಿಸದಸ್ಯ ಕ್ಷೇತ್ರಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಬಹುತೇಕ ಒಬ್ಬರನ್ನೇ ಅಭ್ಯರ್ಥಿ ಇಳಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಉಳಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವು ಸಾಧಿಸಿರುವ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಸಾಕಷ್ಟು ಅಭ್ಯರ್ಥಿಗಳು ತಯಾರಿ ನಡೆಸಿದ್ದು ಹೊಸಬರಿಗೆ ಅವಕಾಶ ಕೊಡುವ ಸಾಧ್ಯತೆಯೂ ಇದೆ. ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ಹಾಗೂ ಕೋರ್ ಕಮಿಟಿ ಸಭೆ ನಡೆಯುತ್ತಿರುವ ಸಂದರ್ಭದಲ್ಲೇ ಚುನಾವಣೆ ದಿನಾಂಕ ಹೊರಬಿದ್ದಿರುವುದರಿಂದ ಎರಡೂ ಸಭೆಗಳಲ್ಲಿ ಪರಿಷತ್ ಚುನಾವಣೆ ವಿಚಾರವೇ ಪ್ರಮುಖವಾಗಿ ಪ್ರಸ್ತಾಪವಾಗಿದೆ.
ಇದನ್ನೂ ಓದಿ:ಭಾರತೀಯ ನೌಕಾಪಡೆಗೆ ಐಎನ್‌ಎಸ್ ವೇಲಾ ಸೇರ್ಪಡೆ
ಜೆಡಿಎಸ್‌ಗೆ ಸ್ಥಾನ ಉಳಿಸಿಕೊಳ್ಳುವ ಸವಾಲು
ಬೆಂಗಳೂರು: ಉಪ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಕಹಿ ಇನ್ನೂ ಹಾಗೇ ಇದೆ. ಅಷ್ಟರಲ್ಲಿ ಜೆಡಿಎಸ್ ಮತ್ತೂಂದು “ಅಗ್ನಿಪರೀಕ್ಷೆ’ ಎದುರಾಗಿದೆ. ಅತ್ತ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ 25 ಸ್ಥಾನಗಳಿಗೆ ನಡೆಯುವ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇತ್ತ ಜೆಡಿಎಸ್‌ನಲ್ಲಿ ಲೆಕ್ಕಾಚಾರಗಳು ಶುರುವಾಗಿವೆ.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಭ್ಯರ್ಥಿಗಳನ್ನು ಹುಡುಕುವುದೇ ಆ ಪಕ್ಷಕ್ಕೆ ದೊಡ್ಡ ಸವಾಲಾಗಿದೆ! ತೆರವಾಗಲಿರುವ 25 ಸ್ಥಾನಗಳಲ್ಲಿ ಇರುವ ಜೆಡಿಎಸ್ ಸ್ಥಾನಗಳು ನಾಲ್ಕು. ಆ ಹಾಲಿ ಸದಸ್ಯರು ಕೂಡ ಈಗ ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡುತ್ತಿ ದ್ದಾರೆ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಒತ್ತಟ್ಟಿಗೆ ಇರಲಿ, ಈಗಿರುವ ಸ್ಥಾನಗಳನ್ನು ಯಥಾವತ್ತಾಗಿ ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಪ್ರಬಲ ಅಭ್ಯ ರ್ಥಿಗಳ ಹುಡುಕಾಟ ನಡೆಸಬೇಕಾಗಿದೆ. ಆ ಆಯ್ಕೆಗಳು ಬಿಜೆಪಿ ಮತ್ತು ಕಾಂಗ್ರೆಸ್ ಕಣಕ್ಕಿಳಿ ಸುವ ಅಭ್ಯರ್ಥಿ ಗಳನ್ನು ಅವಲಂಬಿಸಿವೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. “ಪ್ರಸ್ತುತ ಸಂದೇಶ ನಾಗರಾಜ್, ಮನೋಹರ್, ಕಾಂತರಾಜು ಮತ್ತು ಅಪ್ಪಾಜಿಗೌಡ ಅವರು ಜೆಡಿಎಸ್ ಪ್ರತಿನಿಧಿಸುತ್ತಿದ್ದಾರೆ. ಬರುವ ಚುನಾವಣೆ¿ ುಲ್ಲಿ ಈ ನಾಲ್ಕು ಸ್ಥಾನ ಗಳನ್ನು 10ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಸಿದ್ಧತೆ ನಡೆದಿದೆ. ಸದ್ಯ ಪಕ್ಷದ “ಜನತಾ ಸಂಗಮ’ ಕಾರ್ಯಾಗಾರ ಕೂಡ ನಡೆಯುತ್ತಿದ್ದು, ಅಲ್ಲಿ ಮುಂಬರುವ ಚುನಾವಣೆಗಳನ್ನು ಎದುರಿಸುವ ವಿಷಯದ ಬಗ್ಗೆಯೂ ಚರ್ಚೆ ಇದೆ. ಅದನ್ನು ಮತ್ತಷ್ಟು ಗಂಭೀರವಾಗಿ ಚರ್ಚೆ ನಡೆಸಲಾಗುವುದು.
ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಗೆಲ್ಲುವ ಅನಿವಾರ್ಯತೆ
ಬೆಂಗಳೂರು: 25 ಸ್ಥಾನಗಳ ಪೈಕಿ ಪ್ರಸ್ತುತ ಕಾಂಗ್ರೆಸ್ 14 ಸ್ಥಾನ ಹೊಂದಿದ್ದು ಇದೀಗ ಇದರ ಜತೆಗೆ ಮತ್ತಷ್ಟು ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಯದ ಕಾರಣ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ಸದಸ್ಯರನ್ನು ಹೆಚ್ಚು ಸೆಳೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಕಳೆದ ತಿಂಗಳು ವಿಧಾನಪರಿಷತ್ ಚುನಾ ವಣೆಗೆ ಸಂಬಂಧಿಸಿದಂತೆ ಕ್ಷೇತ್ರಾವಾರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಇದೀಗ ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ಕ್ಷೇತ್ರಾವಾರು ಸಭೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷವು ಪ್ರಸ್ತುತ ಬೀದರ್ ಕ್ಷೇತ್ರದಿಂದ ವಿಜಯ್‌ಸಿಂಗ್, ಬಿಜಾಪುರ ದ್ವಿಸದಸ್ಯ ಕ್ಷೇತ್ರದಿಂದ ಎಸ್.ಆರ್. ಪಾಟೀಲ್, ಸುನಿಲ್‌ಗೌಡ ಪಾಟೀಲ್, ಉತ್ತರ ಕನ್ನಡದಿಂದ ಶ್ರೀಕಾಂತ್ ಘೋಕ್ಲೃಕರ್, ಧಾರವಾಡದಿಂದ ಶ್ರೀನಿವಾಸ ಮಾನೆ, ಬಳ್ಳಾರಿಯಿಂದ ಕೊಂಡಯ್ಯ, ರಾಯಚೂರಿನಿಂದ ಬಸವರಾಜ ಪಾಟೀಲ್ ಇಟಗಿ, ಚಿತ್ರದುರ್ಗದಿಂದ ರಘು ಆಚಾರ್, ಶಿವಮೊಗ್ಗದಿಂದ ಪ್ರಸನ್ನಕುಮಾರ್, ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಿಂದ ಕೆ.ಪ್ರತಾಪಚಂದ್ರಶೆಟ್ಟಿ, ಹಾಸನದಿಂದ ಎಂ.ಎ.ಗೋಪಾಲಸ್ವಾಮಿ, ಬೆಂಗಳೂರು ಕ್ಷೇತ್ರದಿಂದ ಎಂ.ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎಸ್.ರವಿ, ಮೈಸೂರು ಕ್ಷೇತ್ರದಿಂದ ಧರ್ಮಸೇನಾ ಸದಸ್ಯರಾಗಿದ್ದಾರೆ. ತುಮ ಕೂರಿನಿಂದ ಜೆಡಿಎಸ್‌ನಿಂದ ಗೆದ್ದಿದ್ದ ಬೆಮೆಲ್ ಕಾಂತರಾಜ್ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.