US; ದಾವಣಗೆರೆಯ ಟೆಕ್ಕಿ ಪತ್ನಿ, ಮಗುವಿಗೆ ಗುಂಡಿಕ್ಕಿ ಆತ್ಮಹತ್ಯೆ ಶಂಕೆ
ಯೋಗೇಶ್ ಮತ್ತು ಪ್ರತಿಭಾ ಸಂಬಂಧಿಕರು ಬಾಲ್ಟಿಮೋರ್‌ಗೆ
Team Udayavani, Aug 20, 2023, 8:10 PM IST
ದಾವಣಗೆರೆ: ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್‌ನಲ್ಲಿ ಮೃತಪ ಟ್ಟಿರುವ ದಾವಣಗೆರೆ ಮೂಲದ ಮೂವರ ಸಾವಿಗೆ ಖಚಿತ ಕಾರಣ ತಿಳಿದು ಬಂದಿಲ್ಲವಾದರೂ, ಪತಿ ಗುಂಡಿಕ್ಕಿ ಪತ್ನಿ ಮಗುವನ್ನು ಹತ್ಯೆಗೈದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬಾಲ್ಟಿಮೋರ್‌ನಲ್ಲಿ ದಾವಣಗೆರೆ ಮೂಲದ ಯೋಗೇಶ್ ಹೊನ್ನಾಳ್ (37), ಪ್ರತಿಭಾ ಹೊನ್ನಾಳ್(35), ಯಶ್ ಹೊನ್ನಾಳ್(6) ಮೂವರು ಸಾವನ್ನಪ್ಪಿರುವ ಕಾರಣ ಯುಎಸ್ ಪೊಲೀಸ್ ಮೂಲದ ಪ್ರಕಾರ ಯೋಗೇಶ್ ಪತ್ನಿ ಮತ್ತು ಮಗುವನ್ನು ಸಾಯಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾದ ಅಮೆರಿಕದಲ್ಲಿ ಸಾಮಾನ್ಯವಾಗಿರುವ ಶೂಟ್‌ಔಟ್ ಆಗಿರಬಹುದು ಎನ್ನಲಾಗುತ್ತಿದೆ. ಆದರೆ ಯಾವ ಕಾರಣಕ್ಕೆ ಮೂವರು ಏಕಕಾಲದಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಖಚಿತ ಆಗಬಹುದು.
ಶುಕ್ರವಾರ ಬಾಲ್ಟಿಮೋರ್ ಕೌಂಟಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರುತಪಾಸಣೆ ನಡೆಸಿದಾಗ ಗುಂಡೇಟುಗಳು ತಗಲಿರುವುದು ಕಂಡು ಬಂದಿದೆ.
ಮೃತ ಯೋಗೇಶ್ ಮತ್ತು ಪ್ರತಿಭಾ ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಕಳೆದ ಒಂಭತ್ತು ವರ್ಷದಿಂದ ಬಾಲ್ಟಿಮೋರ್‌ನಲ್ಲಿ ವಾಸವಾಗಿದ್ದರು. ಇಬ್ಬರ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ. ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರಿಂದ ಹಣಕಾಸಿನ ಸಮಸ್ಯೆಯೂ ಇರಲಿಲ್ಲ. ಬಾಲ್ಟಿಮೋರ್‌ನಲ್ಲಿ ಸ್ವಂತ ಮನೆ ಹೊಂದಿದ್ದರು. ಈಚೆಗೆ ಬೆಂಗಳೂರಿನಲ್ಲೂ ಒಂದು ಕೋಟಿ ರೂ. ಮೌಲ್ಯದ ಫ್ಲಾಟ್ ಖರೀದಿಸಿದ್ದರು.
ಈಚೆಗೆ ದಾವಣಗೆರೆಯಲ್ಲಿನ ಪೋಷಕರಿಗೆ ಕರೆ ಮಾಡಿದ್ದ ಯೋಗೇಶ್ ಸಾಧ್ಯವಾದರೆ ಡಿಸೆಂಬರ್‌ನಲ್ಲಿ ದಾವಣಗೆರೆಗೆ ಬರುವುದಾಗಿ ತಿಳಿಸಿದ್ದರು. ಕರೆ ಮಾಡಿದ್ದ ಸಂದರ್ಭದಲ್ಲಿ ಎಂದಿನಂತೆಯೇ ಮಾತನಾಡಿದ್ದರು. ಪತ್ನಿ ಪ್ರತಿಭಾ ಸಹ ಬೆಂಗಳೂರಿನಲ್ಲಿ ಪೋಷಕರಿಗೆ ಕರೆ ಮಾಡಿ, ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದರು ಎಂದು ತಿಳಿದು ಬಂದಿದೆ.
ಅಮೆರಿಕದಲ್ಲೇ ಇರುವ ಯೋಗೇಶ್ ಮತ್ತು ಪ್ರತಿಭಾ ಸಂಬಂಧಿಕರು ಬಾಲ್ಟಿಮೋರ್‌ಗೆ ಹೋಗಿದ್ದು ಸಾವಿಗೆ ಖಚಿತ ಕಾರಣ ಗೊತ್ತಾಗಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾಧಿಕಾರಿ ಡಾ| ಎಂ.ವಿ. ವೆಂಕಟೇಶ್ ಯೋಗೇಶ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪಾರ್ಥಿವ ಶರೀರಗಳ ತರಿಸುವ ಬಗ್ಗೆ ಮಾತನಾಡಿದರು. ಅಮೆರಿಕಾದಲ್ಲಿ ಎಲ್ಲ ಕಾನೂನು ಪ್ರಕ್ರಿಯೆಗಳ ಮುಗಿದ ನಂತರವೇ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಹ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.