ಪಟ್ಟು ಬಿಡದ ಅತಿಥಿ ಉಪನ್ಯಾಸಕರ ವಿರುದ್ಧ ಬಲಪ್ರಯೋಗ
ಕಠಿನ ಕ್ರಮಕ್ಕೆ ಸರಕಾರ ಚಿಂತನೆ ಸೋಮವಾರ ಗೈರಾಗುವ ಅತಿಥಿ ಉಪನ್ಯಾಸಕರ ವಜಾ?
Team Udayavani, Jan 1, 2024, 7:05 AM IST
ಬೆಂಗಳೂರು: ಸೇವಾ ಭದ್ರತೆಗಾಗಿ ಪಟ್ಟು ಹಿಡಿದಿರುವ ಅತಿಥಿ ಉಪನ್ಯಾಸಕರಿಗೆ ಬಲ ಪ್ರಯೋಗದ ಮೂಲಕ ಪಾಠ ಕಲಿಸಲು ರಾಜ್ಯ ಸರಕಾರ ಮುಂದಾಗಿದೆ.
ಸೋಮವಾರದಿಂದ ಅತಿಥಿ ಉಪನ್ಯಾಸಕರು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರ ಡಲು ನಿರ್ಧರಿಸಿದ್ದಾರೆ. ಇತ್ತ ರಾಜ್ಯ ಸರಕಾರ ಸೋಮವಾರ ಕಾಲೇಜು ಗಳಿಗೆ ಗೈರು ಹಾಜರಾಗುವ ಅತಿಥಿ ಉಪನ್ಯಾಸಕರ ಪಟ್ಟಿ ತಯಾರಿ ಸಲು ಸಿದ್ಧತೆ ನಡೆಸಿದೆ. ತನ್ಮೂಲಕ ಅತಿಥಿ ಉಪನ್ಯಾಸಕರು ಮತ್ತು ಸರಕಾರದ ಮಧ್ಯೆ ಸಂಘರ್ಷ ತಾರಕಕ್ಕೇರುವುದು ನಿಚ್ಚಳವಾಗಿದೆ.
ರಾಜ್ಯ ಸರಕಾರ ಈಗಾಗಲೇ ತನ್ನ ಎಲ್ಲ 430 ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಸೋಮವಾರ ಮಧ್ಯಾಹ್ನ 2 ಗಂಟೆಯೊಳಗೆ ತರಗತಿಗೆ ಹಾಜರಾಗಿರುವ ಅತಿಥಿ ಉಪನ್ಯಾಸಕರ ಮಾಹಿತಿ ಸಲ್ಲಿಸುವಂತೆ ಸೂಚಿಸಿದೆ. ಗೈರು ಹಾಜರಾದ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸುವ ಚಿಂತನೆ ಉನ್ನತ ಶಿಕ್ಷಣ ಇಲಾಖೆಯ ಮಟ್ಟದಲ್ಲಿ ನಡೆದಿದೆ.
ಉನ್ನತ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ 11 ಸಾವಿರಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರಿದ್ದಾರೆ. ಈ ಪೈಕಿ ಶೇ. 35ರಷ್ಟು ಉಪನ್ಯಾ ಸಕರು ಈಗಾಗಲೇ ತರಗತಿಗೆ ಹಾಜರಾಗಿದ್ದಾರೆ. ಉಳಿದವರಿಗೆ ಸೋಮವಾರ ಮಧ್ಯಾಹ್ನದವರೆಗೆ ಅವಕಾಶ ಕಲ್ಪಿಸಲಾಗಿದ್ದು, ಪ್ರತಿಭಟನ ನಿರತ ಉಪನ್ಯಾಸಕರಲ್ಲಿ ಹಲವರು ಅಂದು ತರಗತಿಗೆ ಹಾಜರಾಗುವ ಸಾಧ್ಯತೆ ಯಿದೆ. ಒಂದು ವೇಳೆ ಹಾಜರಾಗದಿದ್ದರೆ ಮಕ್ಕಳ ಶೈಕ್ಷಣಿಕ ಹಿತವನ್ನು ಗಮನಿಸಿ ಗೈರು ಹಾಜರಾಗಿರುವ ಅತಿಥಿ ಉಪನ್ಯಾಸಕರ ಜಾಗವನ್ನು ತುಂಬಲು ಸರಕಾರ ತನ್ನ ಮುಂದಿರುವ ಆಯ್ಕೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿವಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರಾಂಶುಪಾಲರು, ಉಪನ್ಯಾಸಕರನ್ನು ಗೈರಾದ ಅತಿಥಿ ಉಪನ್ಯಾಸಕರ ಸ್ಥಾನಕ್ಕೆ ನೇಮಿಸಿಕೊಳ್ಳುವುದು ಸರಕಾರದ ಮೊದಲ ಆಯ್ಕೆ ಎಂದು ತಿಳಿದುಬಂದಿದೆ.
ಬಾಕಿ ಅರ್ಜಿಗಳ ಪರಿಗಣನೆ?
ಇದರ ಜತೆಗೆ 11 ಸಾವಿರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನಿಸಿದಾಗ 30 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 5 ಸಾವಿರ ಮಂದಿಯ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿತ್ತು. ಒಂದು ವೇಳೆ ಅತಿಥಿ ಉಪನ್ಯಾಸಕರ ಹೋರಾಟ ಮುಂದುವರಿದರೆ ಈ 5 ಸಾವಿರ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ತ್ವರಿತಗೊಳಿಸ ಲಾಗುವುದು. ಜತೆಗೆ ಇನ್ನೂ ಸಾವಿರಾರು ಅತಿಥಿ ಉಪನ್ಯಾಸಕರ ಅರ್ಜಿಗಳು ಇರುವುದರಿಂದ ಅವರ ನೇಮಕಕ್ಕೂ ಪ್ರಯತ್ನ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ನೂರಾರು ಮಂದಿ ಪಿಎಚ್‌ಡಿ ವಿದ್ಯಾರ್ಥಿಗಳಿದ್ದಾರೆ. ಅವರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿಯೂ ಕಾಲೇಜು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಇಂದಿನಿಂದ ಪಾದಯಾತ್ರೆ
ರಾಜ್ಯ ಸರಕಾರ ನೀಡಿರುವ ಮಾಸಿಕ 5 ಸಾವಿರ ರೂ. ಗೌರವ ಧನ ಹೆಚ್ಚಳ, ಆರೋಗ್ಯ ವಿಮೆ, 5 ಲಕ್ಷ ರೂ.ಗಳ ನಿವೃತ್ತಿ ಇಡಗಂಟು ಭರವಸೆಯನ್ನು ನಾವು ಒಪ್ಪುವುದಿಲ್ಲ. ನಮಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಸೇವಾ ಭದ್ರತೆ ಅಥವಾ ಸೇವಾ ಖಾಯಮಾತಿ ನೀಡಬೇಕು ಎಂದು ಹಠ ಹಿಡಿದಿರುವ ಅತಿಥಿ ಉಪನ್ಯಾಸಕರು, ಸೋಮವಾರ ತುಮಕೂರಿನ ಸಿದ್ಧಗಂಗಾ ಮಠದ ಆವರಣದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಿದ್ದಾರೆ.
ಸೇವಾ ಭದ್ರತೆ ನೀಡಬೇಕು ಎಂಬ ನಮ್ಮ ಬೇಡಿಕೆ ಈಡೇರುವ ತನಕ ನಾವು ಹೋರಾಟ ಮುಂದುವರಿಸಲಿದ್ದೇವೆ. ಅತಿಥಿ ಉಪನ್ಯಾಸಕರೆಲ್ಲರೂ ಒಗ್ಗಟ್ಟಾಗ್ಗಿದ್ದೇವೆ. ನಮ್ಮ ವಿರುದ್ಧ ಸರಕಾರ ಕಠಿನ ಕ್ರಮಕ್ಕೆ ಮುಂದಾದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯಾಧ್ಯಕ್ಷ ನಾಗನಾಳ ಮುನಿಯಪ್ಪ ಹೇಳಿದ್ದಾರೆ.
ನಮ್ಮ ಸರಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ, ಪರಿಹಾರ ಕಲ್ಪಿಸಲು ಪ್ರಯತ್ನಿಸಿದೆ. ಆದರೆ ಅವರು ತಮ್ಮ ಪಟ್ಟು ಸಡಿಲಿಸಿಲ್ಲ ಎಂದರೆ ನಾವು ನಮ್ಮ ಮುಂದಿರುವ ಎಲ್ಲ ಪರ್ಯಾಯ ಮಾರ್ಗಗಳನ್ನು ಶೋಧಿಸುತ್ತಿದ್ದೇವೆ. ಕಠಿನ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ.
– ಡಾ| ಎಂ. ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್
BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.