ವಾಹನ ನೋಂದಣಿಯಲ್ಲಿ ಏರಿಕೆ
Team Udayavani, Feb 7, 2018, 6:15 AM IST
ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 12.96 ಲಕ್ಷ ವಾಹನಗಳು ನೋಂದಣಿಯಾಗಿದೆ. ಈ ಪೈಕಿ 9.91 ಲಕ್ಷ ದ್ವಿಚಕ್ರ ವಾಹನಗಳಾಗಿವೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರ ಏಪ್ರಿಲ್‌ನಿಂದ ಜನವರಿ ಅಂತ್ಯಕ್ಕೆ ವಾಹನಗಳ ನೋಂದಣಿಯಲ್ಲಿ ಸರಾಸರಿ ಶೇ.1.26ರಷ್ಟು ಏರಿಕೆಯಾಗಿದೆ. ದ್ವಿಚಕ್ರ ವಾಹನಗಳ ಸಂಖ್ಯೆಯಲ್ಲಿ ಶೇ.3ರಷ್ಟು ಹೆಚ್ಚಳವಾಗಿದೆ. ಇನ್ನೂ ಎರಡು ತಿಂಗಳು ಬಾಕಿ ಇರುವುದರಿಂದ ಈ ಸಂಖ್ಯೆ ಮತ್ತಷ್ಟು ಏರಿಕೆ ಆಗಲಿದೆ ಎಂದು ತಿಳಿಸಿದರು.
ಒಟ್ಟಾರೆ ವಾಹನಗಳ ಸಂಖ್ಯೆ ಏರಿಕೆಯಾಗಿದ್ದರೂ, ಸರಕು ಸಾಗಣೆ ವಾಹನಗಳ ನೋಂದಣಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಭಾರೀ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ.15ರಷ್ಟು ಕಡಿಮೆಯಾಗಿವೆ. ಆದರೆ, ಲಘು ಸರಕು ಸಾಗಣೆ
ವಾಹನಗಳ ಸಂಖ್ಯೆ ಶೇ. 9.54ರಷ್ಟು ಏರಿಕೆಯಾಗಿದೆ. ಕಾರುಗಳ ನೋಂದಣಿ ಶೇ.4ರಷ್ಟು ಏರಿಕೆಯಾಗಿ ಎಂದರು. ನೋಂದಣಿಯಾದ ವಾಹನಗಳ ಪೈಕಿ ಬೆಂಗಳೂರಿನ ಪಾಲು ಹೆಚ್ಚಿದೆ. ಸಾರಿಗೆ ಇಲಾಖೆಗೆ ಜನವರಿ ಅಂತ್ಯಕ್ಕೆ 4,793.03 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಗುರಿ ಇದ್ದದ್ದು
4,634.70 ಕೋಟಿ ರೂ. ಅಂದರೆ, ಶೇ. 103ರಷ್ಟು ಆದಾಯ ಸಂಗ್ರಹವಾಗಿದೆ. ಹಣಕಾಸು ವರ್ಷದ ಅಂತ್ಯಕ್ಕೆ 5,561.62 ಕೋಟಿ ರೂ. ಸಂಗ್ರಹಿಸುವ ಗುರಿ ಇದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ಸಹಾಯವಾಣಿ
ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಸಹಾಯವಾಣಿ ಆರಂಭಿಸಿದೆ ಎಂದು ಬಿ.ದಯಾನಂದ ತಿಳಿಸಿದರು. ರಜೆ ದಿನಗಳನ್ನು ಹೊರತುಪಡಿಸಿ ನಿತ್ಯ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸಬಹುದು. ಸಲಹೆಗಳನ್ನೂ ನೀಡಬಹುದು. ಎಂದರು. ದೂ.080-25136500ಗೆ ಕರೆ ಮಾಡಬಹುದು. ವಾಟ್ಸ್ ಆ್ಯಪ್‌ಗೆ 94498 63459,
ಟ್ವಿಟರ್ [email protected] ಫೇಸ್‌ಬುಕ್ ಪೇಜ್:: http://www.facebook.com/Transport- Department-karnataka ಸಂಪರ್ಕಿಸಬಹುದು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.