ಸಾತ್ವಿಕ ಹತ್ತಿರಕ್ಕೆ ಸಾಗಿದ ರಕ್ಷಣಾ ತಂಡ; ಮಗು ಸುರಕ್ಷಿತ: ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ
ಅಡ್ಡ ಸುರಂಗದಲ್ಲಿ ಕಾಣಿಸಿಕೊಂಡ ಕಲ್ಲು ಕಾರ್ಯಾಚರಣೆಗೆ ತೊಡಕು
Team Udayavani, Apr 4, 2024, 9:40 AM IST
ಇಂಡಿ (ವಿಜಯಪುರ) : ಕೊಳವೆ ಬಾವಿಗೆ ಬಿದ್ದಿರುವ ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ.
16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ ಕೊರೆಯಲಾಗಿದ್ದು, 6 ಅಡಿ ಅಡ್ಡ ರಂದ್ರ ಮಾದರಿಯಲ್ಲಿ ಸುರಂಗ ಕೊರೆಯಲಾಗಿದೆ. ಸಾತ್ವಿಕ ಇರುವ ಸ್ಥಳ ತಲುಪಲು ಇನ್ನು ಅರ್ಧ ಅಡಿ ಮಾತ್ರ ಬಾಕಿ ಇದೆ.
ಆದರೆ ಸಾತ್ವಿಕ್ ಇರುವ ಸ್ಥಳಕ್ಕೆ ರಂದ್ರ ಕೊರೆಯುವ ಹಂತದಲ್ಲಿ ಮತ್ತೊಂದು ಕಲ್ಲು ಕಾಣಿಸಿಕೊಂಡಿದ್ದು, ಕಾರ್ಯಾಚರಣೆಗೆ ಕೊಂಚ ತೊಡಕಾಗಿದೆ. ಯಂತ್ರದಿಂದ ಸುರಕ್ಷಿತ ಕೆಲಸ ಅಸಾಧ್ಯವಾದ ಕಾರಣ ಮಾನವಾಧಾರಿತ ಹಾರೆಯಿಂದ ಕಲ್ಲು ಒಡೆಯುವ ತಂತ್ರ ಅನುಸರಿಸಲಾಗುತ್ತಿದೆ. ಇದರಿಂದಾಗಿ ಕಾರ್ಯಾಚರಣೆ ಕೊಂಚ ವಿಳಂಬವಾಗಿದೆ. ಆದರೆ ಬಾಲಕ ಸಾತ್ವಿಕ ಸುರಕ್ಷಿತವಾಗಿದ್ದು, ಆಕ್ಸಿಜನ್ ಪೂರೈಕೆ ಮುಂದುವರೆದಿದೆ.
16 ಅಡಿ ಆಳದಲ್ಲಿರುವ ಸಾತ್ವಿಕ ಕೆಳಗೆ ಕುಸಿಯದಂತೆ ಮೇಲಿನಿಂದ ಎರಡೂ ಕಾಲಿಗೆ ಹಗ್ಗ ಕಟ್ಟಿದ್ದು, ಒಂದು ಹಗ್ಗ ಸುರಕ್ಷಿತವಾಗಿ ಸಾತ್ವಿಕ್ ಸ್ಥಿರವಾಗಿ ಹಿಡಿದಿದೆ.
ಹೈದರಾಬಾದ್ ನಿಂದ ಬಂದಿರುವ ಎನ್.ಡಿ.ಆರ್.ಎಫ್. ತಂಡ ಹಾಗೂ ರಾಜ್ಯದ ಎಸ್.ಡಿ.ಅರ್.ಎಫ್. ತಂಡಗಳು ಬಾಲಕ ಸಾತ್ವಿಕನನ್ನು ಸುರಕ್ಷಿತವಾಗಿ ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿವೆ.
ಬಾಲಕನನ್ನು ಸುರಕ್ಷಿತವಾಗಿ ಹೊರ ತೆಗೆಯುತ್ತಲೇ ತುರ್ತು ಆರೋಗ್ಯ ಸೇವೆ ನೀಡುತ್ತಲೇ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಬಾಲಕನ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಇಂಡಿ ತಾಲೂಕು ಆಡಳಿತ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಇರುವ ಸಕಲ ಸಿದ್ಧತೆಯೊಂದಿಗಿ ಇಡೀ ರಾತ್ರಿ ಸ್ಥಳದಲ್ಲೇ ಬೀಡು ಬಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.