ರಾಜ್ಯೋತ್ಸವಕ್ಕೂ ಸಿದ್ಧವಾಗದ “ಗ್ರಾಮ ಚರಿತ್ರೆ’; 13 ಜಿಲ್ಲೆಗಳ ಸಂಪುಟಗಳು ಬಾಕಿ
ಯೋಜನೆ ವಿಳಂಬಕ್ಕೆ ಹಣಕಾಸಿನ ಕೊರತೆ ಕಾರಣ
Team Udayavani, Nov 1, 2022, 6:40 AM IST
ಬೆಂಗಳೂರು: ರಾಜ್ಯದ ಎಲ್ಲ ಗ್ರಾಮಗಳು ಮತ್ತು ಗ್ರಾಮೀಣ ಜನವಸತಿಗಳ ಸಮಗ್ರ ಇತಿಹಾಸವನ್ನು ಅನಾವರಣಗೊಳಿಸುವ “ಗ್ರಾಮ ಚರಿತ್ರೆ ಕೋಶ’ ತಯಾರಿಸುವ ಯೋಜನೆ ನಿಗದಿತ ಗಡುವು ಮುಗಿದರೂ ಪೂರ್ಣಗೊಂಡಿಲ್ಲ.
ರಾಜ್ಯೋತ್ಸವ ದಿನವಾದ ನ. 1 ರಂದು ಗ್ರಾಮ ಚರಿತ್ರೆ ಕೋಶ ಯೋಜನೆಯ ಎಲ್ಲ ಸಂಪುಟಗಳನ್ನು ಪ್ರಕಟಿ ಸುವ ಗುರಿಯನ್ನು ಇಟ್ಟುಕೊಂಡು ಗ್ರಾಮೀಣಾಭಿವೃದ್ಧಿ ಇಲಾಖೆ ಗಡುವು ಹಾಕಿಕೊಂಡಿತ್ತು. ನ. 1 ಬಂದರೂ ಯೋಜನೆ ಪೂರ್ಣಗೊಂಡಿಲ್ಲ.
ಕರ್ನಾಟಕ ರಾಜ್ಯ ಜಾನಪದ ವಿವಿ ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಈ ಯೋಜನೆಯನ್ನು ಜಾರಿಗೆ ತರುತ್ತಿದೆ. 2017ರಲ್ಲಿ ಆರಂಭಗೊಂಡು ಕುಂಟುತ್ತಾ ಸಾಗುತ್ತಿದ್ದ ಈ ಯೋಜನೆಗೆ ವೇಗ ನೀಡಲು ಈ ವರ್ಷ ಜುಲೈ ತಿಂಗಳಲ್ಲಿ ದೊಡ್ಡ ಮಟ್ಟದ ಕಾರ್ಯಾಗಾರ ನಡೆಸಲಾಗಿತ್ತು. ಅದರಲ್ಲಿ ಯೋಜನೆ ಪೂರ್ಣಗೊಳಿಸಲು ನವೆಂಬರ್ 1ರ ಗಡುವು ಹಾಕಿಕೊಳ್ಳಲಾಗಿತ್ತು. ಆದರೆ ಇದುವರೆಗೆ ಯೋಜನೆಯಲ್ಲಿ ಹೆಚ್ಚಿನ ಪ್ರಗತಿ ಕಂಡಿಲ್ಲ.
ಕರ್ನಾಟಕ ಜಾನದಪ ವಿವಿಯಲ್ಲಿ ಪ್ರಭಾರ ಕುಲಪತಿಗಳಿದ್ದು, ಇತ್ತೀಚೆ ಗಷ್ಟೇ ಖಾಯಂ ಕುಲಪತಿಗಳು ನೇಮಕವಾಗಿದ್ದಾರೆ. ಇದರಿಂದಾಗಿ ಯೋಜನೆ ವಿಳಂಬವಾಯಿತು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಹೇಳುತ್ತಿದ್ದರೆ, ಇಲಾಖೆಯಿಂದ ನಮಗೆ ಹಣ ಬಂದಿಲ್ಲ. ಹಾಗಾಗಿ ಯೋಜನೆ ಪೂರ್ಣಗೊಳಿಸಲು ಆಗಿಲ್ಲ ಎಂದು ಜಾನಪದ ವಿವಿ ಅಧಿಕಾರಿಗಳು ಹೇಳುತ್ತಾರೆ.
ಇಲಾಖೆ ಹಣ ಕೊಟ್ಟಿಲ್ಲ
ಗ್ರಾಮ ಚರಿತ್ರೆ ಕೋಶ ತಯಾರಿ ಸುವ ಕೆಲಸ ನಡೆದಿದೆ. ಈವರೆಗೆ 17 ಜಿಲ್ಲೆಗಳ 28 ಸಂಪುಟಗಳು ಸಿದ್ಧವಾಗಿವೆ. ಇನ್ನೂ 13 ಜಿಲ್ಲೆಗಳ ಸಂಪುಟಗಳು ತಯಾರಾಗಬೇಕಿವೆ. ಅದರಲ್ಲಿ 5 ಸಂಪುಟಗಳನ್ನು ಮುದ್ರ ಣಕ್ಕೆ ಕಳಿಸಲಾಗಿದೆ. ಇಲಾಖೆಯಿಂದ 2.55 ಕೋಟಿ ರೂ. ಬರಬೇಕು. ಈ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರನ್ನು ಎರಡೂ¾ರು ಬಾರಿ ಭೇಟಿ ಮಾಡಲಾಗಿದೆ. ಬಿಲ್‌ಗಳನ್ನು ಸಲ್ಲಿಸಲು ಹೇಳಿದ್ದರು. ಅದರಂತೆ, ಎಲ್ಲ ಬಿಲ್‌ಗಳನ್ನು ಸಲ್ಲಿಸ ಲಾಗಿದೆ. ಆದರೂ ಈವರೆಗೆ ಒಂದು ರೂಪಾಯಿಯೂ ಬಿಡುಗಡೆ ಆಗಿಲ್ಲ. ಹೀಗಿದ್ದರೂ ನಾವು ಕೆಲಸ ನಿಲ್ಲಿಸಿಲ್ಲ. ಸಕಾಲಕ್ಕೆ ಹಣ ಬಂದಿದ್ದರೆ ಕೆಲಸ ಇನ್ನಷ್ಟು ತ್ವರಿತಗೊಳಿಸಲು ಸಾಧ್ಯವಾಗುತ್ತಿತ್ತು. ನ. 1ರ ಗಡುವು ಹಾಕಿಕೊಂಡಿದ್ದು ನಿಜ. ಆದರೆ ಹಣವೇ ಬರದಿದ್ದರೆ ಕೆಲಸ ಮಾಡುವುದು ಹೇಗೆ ಎಂದು ಜಾನಪದ ವಿವಿಯ ಹಿರಿಯ ಅಧಿಕಾರಿಗಳು ಪ್ರಶ್ನಿಸುತ್ತಾರೆ.
ಕೋಶದಲ್ಲಿ ಏನಿರಲಿದೆ?
ಗ್ರಾಮದ ಹೆಸರಿನ ಹಿನ್ನೆಲೆ ಸೇರಿ ಇತಿಹಾಸ, ಪರಂಪರೆ, ಭಾಷೆ, ಕಲೆ-ಸಂಸ್ಕೃತಿ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು, ಕುಲಕಸಬುಗಳು, ಮಠ-ಮಂದಿರ, ಚರ್ಚ್, ಮಸೀದಿ, ಗಡಿ-ಗೋಪುರಗಳು, ನದಿ, ಹಳ್ಳಗಳು, ಸ್ಮಾರಕ, ಶಾಸನಗಳು, ಐತಿಹಾಸಿಕ ಸ್ಥಳಗಳು, ಪ್ರವಾಸಿ ತಾಣಗಳು, ಗ್ರಾಮದ ಕೃಷಿ ಜಮೀನು, ಉದ್ಯೋಗ, ಶಿಕ್ಷಣ, ಸಾಕ್ಷರತೆ, ನಾಗರಿಕ ಸೌಲಭ್ಯಗಳು, ಆರ್ಥಿಕ ವ್ಯವಸ್ಥೆ ಸೇರಿ ಗ್ರಾಮದ ಸಮಗ್ರ ಇತಿಹಾಸವು ಗ್ರಾಮ ಚರಿತ್ರೆ ಕೋಶದಲ್ಲಿರಲಿದೆ.
ಏನಿದು ಗ್ರಾಮಚರಿತ್ರೆ ಕೋಶ?
ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2006ರಲ್ಲಿ “ಕರ್ನಾಟಕ ಜಾನಪದ ಕೋಶ’ ಯೋಜನೆ ಜಾರಿಗೆ ತಂದಿತ್ತು. 2010ರಲ್ಲಿ ಇದಕ್ಕೆ ಗ್ರಾಮ ಚರಿತ್ರೆ ಕೋಶ ಯೋಜನೆಯ ಸ್ವರೂಪ ಸಿಕ್ಕಿತು. 2013ರಲ್ಲಿ ಆಗಿನ ಗ್ರಾಮೀ ಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಇದಕ್ಕಾಗಿ 10 ಕೋಟಿ ರೂ. ಅನುದಾನವನ್ನು ಸರಕಾರದಿಂದ ಒದಗಿಸಿಕೊಟ್ಟರು. ಗ್ರಾಮೀಣಾಭಿವೃದ್ಧಿ ಇಲಾಖೆಯು ಕರ್ನಾಟಕ ಜಾನಪದ ವಿವಿಯ ಸಹಯೋಗದೊಂದಿಗೆ 2017ರಲ್ಲಿ ಯೋಜನೆಗೆ ಮರು ಜೀವ ನೀಡಿತು. ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಕಂದಾಯ ಗ್ರಾಮಗಳಿವೆ. ಇದಲ್ಲದೇ ತಾಂಡಾ, ಹಾಡಿ, ಹಟ್ಟಿ, ಬೇಚರಾಕ್ ಮತ್ತಿತರರು ಕಂದಾಯವಲ್ಲದ, ದಾಖಲೆ ಹೊಂದಿಲ್ಲದ ಜನವಸತಿ ಪ್ರದೇಶಗಳನ್ನು ಸೇರಿಸಿಕೊಂಡರೆ ರಾಜ್ಯದಲ್ಲಿ ಒಟ್ಟಾರೆ 55 ಸಾವಿರ ಜನವಸತಿಗಳಿವೆ, ಪ್ರತಿ ತಾಲೂಕಿನಲ್ಲಿ ಸುಮಾರು 180ಕ್ಕೂ ಹೆಚ್ಚು ಜನವಸತಿಗಳು ಬರುತ್ತವೆ. ಅದರಂತೆ ರಾಜ್ಯದ 31 ಜಿಲ್ಲೆಗಳ, 226 ತಾಲೂಕುಗಳ ಗ್ರಾಮ ಮತ್ತು ಗ್ರಾಮೀಣ ಜನವಸತಿ ಪ್ರದೇಶಗಳ ಸಮಗ್ರ ಇತಿಹಾಸವನ್ನು ಗ್ರಾಮ ಚರಿತ್ರೆ ಕೋಶ ಯೋಜನೆ ಮೂಲಕ ಸಂಪುಟಗಳ ರೂಪದಲ್ಲಿ ತರಲಾಗುತ್ತಿದೆ. ಗ್ರಾಮಗಳ ಇತಿಹಾಸ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.