ಹಳ್ಳಿ ಕಡೆಯವ್ರು ಟ್ಯಾಕ್ಸ್ ಕಟ್ಟಲ್ಲ: ಡಿ.ಕೆ.ಶಿವಕುಮಾರ್
Team Udayavani, Jun 15, 2019, 3:06 AM IST
ಬೆಂಗಳೂರು: “ಹಳ್ಳಿ ಕಡೆಯವ್ರು ಟ್ಯಾಕ್ಸ್ ಕಟ್ಟಲ್ಲ, ಫಾರ್ಮಿಂಗ್ ಮಾಡ್ತಾರೆ ಅಷ್ಟೇ. ಉದ್ಯಮಿಗಳು ಟ್ಯಾಕ್ಸ್ ಕಟಾ¤ರೆ, ಉದ್ಯೋಗ ಸೃಷ್ಟಿ ಆಗಬೇಕು ಅಂದ್ರೆ ಜಮೀನು ಕೊಡಬೇಕಾಗುತ್ತದೆ’
-ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಜಿಂದಾಲ್‌ಗೆ ಜಮೀನು ಪರಭಾರೆ ಮಾಡುವ ತೀರ್ಮಾನ ಸಮರ್ಥಿಸಿಕೊಂಡ ಪರಿಯಿದು.
ಜಿಂದಾಲ್‌ಗೆ ಭೂಮಿ ಪರಭಾರೆ ಕುರಿತು ಪ್ರತಿಪಕ್ಷ ಬಿಜೆಪಿಯಿಂದ ಪ್ರತಿಭಟನೆ ಹಾಗೂ ವಿರೋಧ ವ್ಯಕ್ತವಾಗಿರುವ ಬಗ್ಗೆ ರಾಜಭವನದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, “ತೆರಿಗೆ ಕಟ್ಟುವವರು ಉದ್ಯಮಿಗಳು. ಅವರಿಗೆ ನಾವು ಅನುಕೂಲ ಮಾಡಿಕೊಡದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.
“ರಾಜ್ಯದಿಂದ ಉದ್ಯಮಿಗಳು ಹೊರ ಹೋಗಬಾರದು, ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ಸರ್ಕಾರದ ಗುರಿ. ಹೀಗಾಗಿ, ಜಿಂದಾಲ್‌ಗೆ ಭೂಮಿ ನೀಡುವ ತೀರ್ಮಾನ ಆಗಿದೆ. ಈ ನಿರ್ಧಾರ ಮರು ಪರಿಶೀಲನೆ ಮಾಡಲು ಮುಖ್ಯಮಂತ್ರಿಯವರು ಹೇಳಿದ್ದಾರೆ, ಆಗಲಿ’ ಎಂದು ಹೇಳಿದರು.
“ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಸದಾನಂದಗೌಡ , ಜಗದೀಶ್ ಶೆಟ್ಟರ್ ಅವರೇ ಜಿಂದಾಲ್‌ಗೆ ಭೂಮಿ ನೀಡಿಕೆ ವಿಚಾರದಲ್ಲಿ ಅಡಿಪಾಯ ಹಾಕಿದ್ದು, ಅವರೇ ಜಮೀನು ನೀಡಲು ತೀರ್ಮಾನ ಮಾಡಿದ್ದು. ಅದನ್ನು ನಮ್ಮ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ’ ಎಂದರು.
“ಬಿಜೆಪಿಯವರು ಜಿಂದಾಲ್ ವಿಚಾರದಲ್ಲಿ ಪ್ರತಿಭಟನೆ-ಹೋರಾಟ ಮಾಡಲಿ, ಲೇಟ್ ಮಾಡಬಾರದು. ಜಮೀನು ಹಂಚಿಕೆ ಯಡಿಯೂರಪ್ಪ ಅವರದ್ದೇ ತೀರ್ಮಾನ’ ಎಂದವರು ಲೇವಡಿ ಮಾಡಿದರು. ಜಿಂದಾಲ್ ವಿಚಾರದಲ್ಲಿ ಬೇಕಾದರೆ ಕಾಗದ ಪತ್ರ ನೋಡಲಿ, ದಾಖಲೆ ತೆಗೆಸಲಿ.
ನಾವು ಕೈಗಾರಿಕೆ ಬೆಳೆಸದಿದ್ದರೆ ಸರ್ಕಾರ ಎಲ್ಲ ಜನರಿಗೆ ಉದ್ಯೋಗ ಕೊಡಲು ಆಗುತ್ತದೆಯೇ? ಜಿಂದಾಲ್ ಗುಡ್ ಬಿಸಿನೆಸ್ ಮನ್, ಲಾಭ ಇಲ್ಲದೆ ಯಾರೂ ಬಿಜಿನೆಸ್ ಮಾಡಲ್ಲ ಎಂದು ತಿಳಿಸಿದರು. ಈ ಹಿಂದೆ ಬಳ್ಳಾರಿಯಲ್ಲಿ ಗಣಿ ಲೂಟಿಯಿಂದಾಗಿ ನಿರುದ್ಯೋಗ ಸಮಸ್ಯೆ ಯಾವ ಸ್ವರೂಪದಲ್ಲಿದೆ ಎಂಬುದು ನನಗೆ ಗೊತ್ತಿದೆ. ಅಲ್ಲಿನ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದು ನಮ್ಮ ಗುರಿ ಎಂದರು.
ಕೋಳಿವಾಡ ಹೇಳಿಕೆಗೆ ವ್ಯಂಗ್ಯ: “ಕೋಳಿವಾಡ ಅವರು ಮಾರ್ಚ್ ಅಂತ್ಯಕ್ಕೆ ಸಮ್ಮಿಶ್ರ ಸರ್ಕಾರ ಪತನವಾಗುವುದಾಗಿ ಹೇಳಿದ್ದಾರೆ. ನಾನು ಬಹಳ ಜನರ ಭವಿಷ್ಯ ನೋಡಿದ್ದೀನಿ, ಕೇಳಿದ್ದೀನಿ’ ಎಂದು ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಬಿಜೆಪಿಯವರ ಭವಿಷ್ಯವನ್ನೂ ಕೇಳಿದ್ದೀನಿ, ಯಡಿಯೂರಪ್ಪ ಅವರು ಹೇಳಿದ್ರು 20 ಶಾಸಕರು ಹೊರ ಬರ್ತಾರೆ, ಅವರೇ ಕಚ್ಚಾಡಿಕೊಳ್ತಾರೆ ಅಂತ. ಅದೆಲ್ಲವೂ ಆಯಿತೆ? ಅವರ ಖುಷಿಗೆ ಏನಾದ್ರೂ ಹೇಳಿಕೊಳ್ಳಲಿ’ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.