ಉಡುಪಿಯಲ್ಲಿ ಸಂಭ್ರಮದ ವಿಟ್ಲಪಿಂಡಿ
Team Udayavani, Aug 25, 2019, 3:05 AM IST
ಉಡುಪಿ: ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಶ್ರೀಕೃಷ್ಣ ಮಠದಲ್ಲಿ ವೈಭವದಿಂದ ಸಂಪನ್ನಗೊಂಡಿತು. ಅಷ್ಟಮಿ ದಿನ ನಿರ್ಜಲ ಉಪವಾಸವಿರುವ ಕಾರಣ ಶನಿವಾರ ದ್ವಾದಶಿಯಂತೆ ಮುಂಜಾವು ಶ್ರೀಕೃಷ್ಣ-ಮುಖ್ಯ ಪ್ರಾಣರಿಗೆ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಗೋಪಾಲಕೃಷ್ಣನ ಅಲಂಕಾರ ನಡೆಸಿದರು. ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ ಮೆರವಣಿಗೆ ನಡೆಯಿತು.
ಮೂರು ವಿಗ್ರಹಗಳ ಉತ್ಸವ: ಚಿನ್ನದ ರಥದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ಮೂರ್ತಿ, ನವರತ್ನ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳ ಉತ್ಸವ ನಡೆಯಿತು. ಉತ್ಸವದಲ್ಲಿ ಪರ್ಯಾಯ ಪಲಿಮಾರು, ಕೃಷ್ಣಾಪುರ, ಅದಮಾರು ಕಿರಿಯ, ಪಲಿಮಾರು ಕಿರಿಯ ಶ್ರೀಪಾದರು ಪಾಲ್ಗೊಂಡಿದ್ದರು.
ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಒಂದೊಂದೇ ಮಡಕೆಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಸಾಗಿದರು. ಅಲಂಕೃತ ಆನೆ ಸುಭದ್ರೆ ಮೆರವಣಿಗೆಗೆ ಶೋಭೆ ನೀಡಿತು. ಮುಂಬೈನಿಂದ ಬಂದ ಅಲಾರೆ ತಂಡದವರು ಮಾನವ ಪಿರಮಿಡ್ ಮೂಲಕ ಮೊಸರು ಕುಡಿಕೆಗಳನ್ನು ಒಡೆದರು. ಕೊನೆಯಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜಿಸಲಾಯಿತು. ಉತ್ಸವ ನಡೆಯುವಾಗ ಪ್ರಸಾದ ಎಸೆಯುವ ಕ್ರಮವನ್ನು ಕೇವಲ ಸಾಂಕೇತಿಕವಾಗಿ ಹಣ್ಣುಗಳಿಗೆ ಮಾತ್ರ ಸೀಮಿತವಾಗಿಡಲಾಯಿತು.
ಹುಟ್ಟಿದ ಹೊತ್ತಿಗೆ ಮಳೆ: ಶ್ರೀಕೃಷ್ಣನ ಜನಿಸಿದ್ದು ಅಷ್ಟಮಿಯ ಮಧ್ಯರಾತ್ರಿ ಚಂದ್ರೋದಯದ ಹೊತ್ತಿಗೆ. ಆಗ ಮಳೆ ಬರುತ್ತಿತ್ತು. ಶುಕ್ರವಾರ ಮಧ್ಯರಾತ್ರಿ ಶ್ರೀಕೃಷ್ಣ ಮಠದಲ್ಲಿ ಮಹಾಪೂಜೆ, ಅರ್ಘ್ಯಪ್ರದಾನ ನಡೆಯುವಾಗಲೂ ಮಳೆ ಬರುತ್ತಿತ್ತು. ಶನಿವಾರ ಮಧ್ಯಾಹ್ನ ಮಳೆ ಬಂದಿದ್ದರೂ ಅಪರಾಹ್ನ ವಿಟ್ಲಪಿಂಡಿ ಉತ್ಸವ ನಡೆಯುವಾಗ ಮಳೆ ವಿರಾಮ ಹಾಡಿತ್ತು.
ಅತಿವೃಷ್ಟಿ ಪೀಡಿತರಿಗೆ ನಿಧಿ ಸಂಗ್ರಹಿಸಿದ ವೇಷಧಾರಿ ಗಾಂಧಿ!: ಈ ಬಾರಿ ಗಾಂಧೀಜಿ ವೇಷ ತೊಟ್ಟ ಉತ್ತರ ಕರ್ನಾಟಕದ ಐಹೊಳೆ ಮೂಲದ ಹನುಮಂತ ಅವರು ಕನಕದಾಸರ ಗುಡಿ ಎದುರು ಬಹಳ ಹೊತ್ತು ನಿಂತು ಜನರನ್ನು ದಂಗುಬಡಿಸಿದರು. 85 ವರ್ಷಗಳ ಹಿಂದೆ 1934ರ ಫೆ.25ರಂದು ಗಾಂಧೀಜಿಯವರು ಉಡುಪಿ ಅಜ್ಜರಕಾಡಿನಿಂದ ಕಲ್ಸಂಕಕ್ಕೆ ಇದೇ ರಥಬೀದಿ ಮಾರ್ಗ ವಾಗಿ ಕುಂದಾಪುರಕ್ಕೆ ತೆರಳಿದ್ದರು. ಅವರು ದಲಿತೋ ದ್ಧಾರಕ್ಕಾಗಿ ನಿಧಿ ಸಂಗ್ರಹಿಸಲು ಬಂದಿದ್ದರೆ, ವೇಷಧಾರಿ ಗಾಂಧಿ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಸಂತ್ರ ಸ್ತರಾದವರಿಗೆ ನೆರವಾಗಲು ನಿಧಿ ಸಂಗ್ರಹಿಸಿದ್ದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.