ರಾಜ್ಯದಲ್ಲಿ ಮತ ನಿರ್ಲಕ್ಷ್ಯ ಹೆಚ್ಚು: ಚುನಾವಣ ಆಯುಕ್ತ ರಾಜೀವ್ ಕುಮಾರ್
Team Udayavani, Mar 30, 2023, 5:08 AM IST
ಬೆಂಗಳೂರು: ಕರ್ನಾಟಕದಲ್ಲಿ ಮತದಾನದಿಂದ ಹೊರಗೆ ಉಳಿಯುವವರ ಪ್ರಮಾಣ ಹೆಚ್ಚು ಎಂದು ಚುನಾವಣ ಆಯುಕ್ತ ರಾಜೀವ್ ಕುಮಾರ್ ಹೇಳಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಶೇ.72 ಹಕ್ಕು ಚಲಾವಣೆಯಾಗಿತ್ತು. ಆದರೆ ಬೆಂಗ ಳೂರು ವ್ಯಾಪ್ತಿಯಲ್ಲಿ ಇರುವ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.55 ಹಕ್ಕು ಚಲಾವಣೆಯಾಗಿತ್ತು. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಚುನಾವಣ ಆಯೋಗ ಮಾಹಿತಿ ತಂತ್ರಜ್ಞಾನ ಕಂಪೆನಿಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು, ಸ್ಟಾರ್ಟಪ್‌ಗ್ಳಲ್ಲಿ ಕೆಲಸ ಮಾಡುವವರನ್ನು ಸಂಪರ್ಕಿಸಿ ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾವಣೆ ಮಾಡುವಂತೆ ಮನವೊ ಲಿಲಾಗಿದೆ. ಅದಕ್ಕಾಗಿ ವಿವಿಧ ಕಂಪೆನಿಗಳ ಸಹ ಯೋಗದಲ್ಲಿ “ಹ್ಯಾಕಥಾನ್’ ಮಾದರಿಯಲ್ಲಿ “ಎಲೆಕ್ತಾನ್’ (ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಮಾಡುವಂತೆ ಮನವೊಲಿಕೆ ಕಾರ್ಯಕ್ರಮ) ನಡೆಸಲಾಗುತ್ತದೆ ಎಂದರು.
ಶೇ.100 ಸಾಧನೆ: ರಾಜ್ಯದ ಬುಡಕಟ್ಟು ಜನಾಂಗ ದವರು ಇರುವ ಪ್ರದೇಶಗಳಲ್ಲಿ ಶೇ.100ರಷ್ಟು ಪ್ರಮಾಣದಲ್ಲಿ ಮತದಾರರನ್ನು ನೋಂದಣಿ ಮಾಡುವ ವ್ಯವಸ್ಥೆ ಪೂರ್ಣಗೊಂಡಿದೆ. ಅದಕ್ಕಾಗಿ “ವಿಶೇಷವಾಗಿ ಬುಡಕಟ್ಟು ಜನಾಂಗದ ಗುಂಪು’ಗಳನ್ನು ರಚಿಸಲಾಗಿತ್ತು ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯ ವಾದ ಮಣಿಪುರ ವಿಧಾನಸಭೆಯಲ್ಲಿ ಇದೇ ಮಾದರಿ ಅನುಸರಿಸಲಾಗಿತ್ತು. ಸುಮಾರು 40 ಇಂಥ ಬುಡಕಟ್ಟು ಜನರ ಗುಂಪುಗಳನ್ನು ರಚಿಸಿ, ಅವರಲ್ಲಿ ಹೆಚ್ಚಿನ ಪ್ರಮಾಣದ ಮತ ಚಲಾ ವಣೆಯಾಗುವಂತೆ ಮಾಡಲಾಗುತ್ತದೆ ಎಂದರು.
5,24,11,557- ಒಟ್ಟುಮತದಾರರು
2,63,32, 445- ಪುರುಷ ಮತದಾರರು
2,60,26, 752- ಮಹಿಳಾ ಮತದಾರರು
4,751- ತೃತೀಯ ಲಿಂಗಿ ಮತದಾರರ
58,282- ಪ್ರಸಕ್ತ ಸಾಲಿನ ಮತಗಟ್ಟೆ
24,063- ನಗರ ಪ್ರದೇಶ ಮತಗಟ್ಟೆ
34,219- ಗ್ರಾಮೀಣ ಪ್ರದೇಶ ಮತಗಟ್ಟೆ
1,320- ಮಹಿಳೆಯರೇ ನಿರ್ವಹಿಸಲಿರುವ ಮತಗಟ್ಟೆ
224- ಯುವಕರೇ ನಿರ್ವಹಿಸಲಿರುವ ಮತಗಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.