Waqf: ಇಂದು, ನಾಳೆ ಬಿಜೆಪಿ ಪ್ರತಿಭಟನೆ; ಸಂತ್ರಸ್ತರಿಂದ ಅಹವಾಲು ಸ್ವೀಕಾರ
ರಾಜ್ಯದ ರೈತರು, ಸರಕಾರಿ ಜಮೀನುಗಳಿಗೆ ವಕ್ಫ್ ನೋಟಿಸ್
Team Udayavani, Nov 21, 2024, 6:50 AM IST
ಬೆಂಗಳೂರು: ರಾಜ್ಯದ ಹಲವೆಡೆ ರೈತರು, ಸರಕಾರಿ ಶಾಲೆಗಳು, ದೇವಾಲಯಗಳ ಜಮೀನಿಗೆ ನೀಡುತ್ತಿರುವ ವಕ್ಫ್ ನೋಟಿಸ್ ವಿರುದ್ಧ ಬಿಜೆಪಿ ಆಯೋಜಿಸಿರುವ ”ನಮ್ಮ ಭೂಮಿ ನಮ್ಮ ಹಕ್ಕು’ ಹೋರಾಟ ನವೆಂಬರ್ 21 ಹಾಗೂ 22ರಂದು ರಾಜ್ಯಾದ್ಯಂತ ನಡೆಯಲಿದೆ.
ಎಲ್ಲ ಜಿಲ್ಲಾಧಿಕಾರಿ ಕಚೇರಿ ಮತ್ತು ತಹಶೀಲ್ದಾರರ ಕಚೇರಿಗಳ ಮುಂದೆ ಶಾಸಕರು, ಸಂಸದರು, ಮುಖಂಡರ ನೇತೃತ್ವದಲ್ಲಿ ದಿನವಿಡಿ ಪ್ರತಿಭಟನೆ ನಡೆಯಲಿದೆ.
ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ನಡೆಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ.
ಅಹವಾಲು ಸ್ವೀಕಾರ
ಪ್ರತಿಭಟನೆಯ ಜತೆಗೆ ಎಲ್ಲ ಸಂತ್ರಸ್ತರಿಂದ ಅರ್ಜಿಗಳ ಸ್ವೀಕಾರ, ವಕ್ಫ್ ಅಧಿಕಾರ ದುರ್ಬಳಕೆಯಿಂದ ಸಮಸ್ಯೆ-ಶೋಷಣೆಗೆ ಒಳಗಾದವರ ಮಾಹಿತಿ ಸಂಗ್ರಹಿಸಲಾಗುತ್ತದೆ.
ಅಧಿವೇಶನ ವೇಳೆ
ಪ್ರತಿಭಟನೆಗೆ ಸಿದ್ಧತೆ
ಈ 2 ದಿನ ಪ್ರತಿಭಟನೆ ನಡೆಸುವುದಕ್ಕಷ್ಟೇ ಸೀಮಿತಗೊಳಿಸದ ರಾಜ್ಯ ಬಿಜೆಪಿ ನಾಯಕರು, ಡಿಸೆಂಬರ್ ವೇಳೆಗೆ ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ವಿಪಕ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ 3 ತಂಗಳನ್ನು ರಚಿಸಲಾಗಿದೆ. ಈ ತಂಡಗಳು ರಾಜ್ಯಾದ್ಯಂತ ಪ್ರತ್ಯೇಕವಾಗಿ ಪ್ರವಾಸ ಮಾಡಿ ವಕ್ಫ್ ನೋಟಿಸ್ ಸಂತ್ರಸ್ತರ ಅಹವಾಲುಗಳನ್ನು ಆಲಿಸಿ ವರದಿ ಸಿದ್ಧಪಡಿಸಲಿವೆ. ಬಳಿಕ ಬೆಳಗಾವಿ ಅಧಿವೇಶನ ವೇಳೆ ಪ್ರತಿಭಟನೆ ನಡೆಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
Naxal Encounter: ಬಂಧಿತ ಸುರೇಶ್ ಅಂಗಡಿ ಮಾಹಿತಿಯಂತೆ ʼಆಪರೇಷನ್ ವಿಕ್ರಂ ಗೌಡʼ
Naxal Encounter: ನಕ್ಸಲ್ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಹೊಂದಿದ್ದ: ಡಿಜಿಪಿ
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.