Waqf Board ಜನರನ್ನು ಕ್ಯಾನ್ಸರ್‌ನಂತೆ ಕಾಡುತ್ತಿದೆ : ಆರ್. ಅಶೋಕ್
Team Udayavani, Dec 3, 2024, 1:51 AM IST
ಮೈಸೂರು: ಕಾಂಗ್ರೆಸ್ ಪಕ್ಷ ಈ ಹಿಂದೆ ಉಳುವವನೇ ಭೂಮಿಯ ಒಡೆಯ ಎಂದಿತ್ತು. ಆದರೀಗ ರೈತರ ಜಮೀನು ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳುತ್ತಿದೆ ಎಂದು ಸರಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಆಶೋಕ್ ವಾಗ್ಧಾಳಿ ನಡೆಸಿದರು.
ಮೈಸೂರು ನಗರದ ಮುನೇಶ್ವರ ಬಡಾವಣೆ ಮತ್ತು ಗುಂಡೂರಾವ್ ನಗರಕ್ಕೆ ಸೋಮವಾರ ತಮ್ಮ ನೇತೃತ್ವದ ನಿಯೋಗದೊಂದಿಗೆ ತೆರಳಿ ವಕ್ಫ್ ಬೋರ್ಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವವರ ಸಮಸ್ಯೆ ಆಲಿಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್‌ನ ವೋಟ್ ಬ್ಯಾಂಕ್ ರಾಜಕಾರಣ, ಮುಸ್ಲಿಮರ ತುಷ್ಟೀಕರಣದಿಂದ ವಕ್ಫ್ ಬೋರ್ಡ್ ರಾಜ್ಯದ ಜನರನ್ನು ಕ್ಯಾನ್ಸರ್‌ನಂತೆ ಕಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ತವರು ಜಿಲ್ಲೆ ಮೈಸೂರಿನಲ್ಲೂ 44 ಎಕರೆಗೂ ಹೆಚ್ಚು ಭೂಮಿ ವಕ್ಫ್ ಬೋರ್ಡ್ ಹೆಸರಿನಲ್ಲಿದೆ. ವಾಸವಿರುವ ಜನರಿಗೆ ನೋಟಿಸ್ ನೀಡಿ, ಒಕ್ಕಲೆಬ್ಬಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ವಕ್ಫ್ ಬೋರ್ಡ್ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದ್ದು ಕಾಂಗ್ರೆಸ್ ಎಷ್ಟೇ ವಿರೋಧ ಮಾಡಿದರೂ ಸಂಸತ್‌ನಲ್ಲಿ ವಕ್ಫ್ ಬೋರ್ಡ್ ಬಿಲ್ ತಿದ್ದುಪಡಿ ಮಾಡೇ ಮಾಡುತ್ತೇವೆ ಎಂದರು.
ಸರಕಾರದ ಎದೆಮೇಲೆ ಹೊಡೆಯುತ್ತೇನೆ
ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ಗಳನ್ನು ರಾಜ್ಯ ಸರಕಾರ ರದ್ದು ಮಾಡದಿದ್ದರೆ, ಅಧಿವೇಶನದಲ್ಲಿ ಸರಕಾರದ ಎದೆ ಮೇಲೆ ಹೊಡೆಯುತ್ತೇನೆ ಎಂದು ಅಶೋಕ್ ಕಿಡಿಕಾರಿದರು.
ವಕ್ಫ್ ಬೋರ್ಡ್ ವಿಚಾರದಲ್ಲಿ ಸರಕಾರ ತಪ್ಪು ಮಾಡಿದೆ ಎಂದು ಹೇಳುವವರೆಗೂ ಬಿಡುವುದಿಲ್ಲ. ಒಂದು ಇಡೀ ದಿನ ವಿಧಾನಸಭೆ ಅಧಿವೇಶನ ದಲ್ಲಿ ಹೋರಾಟ ಮಾಡುತ್ತೇವೆ. ತತ್‌ಕ್ಷಣವೇ ವಕ್ಫ್ ನೀಡಿರುವ ಎಲ್ಲ ನೋಟಿಸ್ ರದ್ದು ಮಾಡಬೇಕು. ರೈತರ ಆರ್‌ಟಿಸಿಯಲ್ಲಿ ವಕ#… ಹೆಸರು ಕೈಬಿಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರಕಾರ ವಕ್ಫ್ ಕಾನೂನನ್ನೇ ವಜಾ ಮಾಡಬೇಕಿದೆ ಎಂದರು.
ಮತಾಂಧರಿಗೆ ಶಕ್ತಿ ತುಂಬುವ ಕಾಂಗ್ರೆಸ್: ಸಿ.ಟಿ. ರವಿ ಆರೋಪ
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಕಾಂಗ್ರೆಸ್ ಪಕ್ಷ ಮತಾಂಧರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ. ವ್ಯಾಕರಣ, ಸಂಧಿ, ವಚನ ಗಳ ಬಗ್ಗೆ ಗೊತ್ತಿದೆಯಾ ಎಂದು ಕೇಳುವ ಸಿಎಂ ಸಿದ್ದರಾಮಯ್ಯನವರು ವಕ್ಫ್ ಬೋರ್ಡ್ ಕಾಯ್ದೆ ಸಂವಿಧಾನ ಬದ್ಧವಾಗಿದೆಯಾ, ಕಾನೂನು ಪ್ರಕಾರವಾಗಿದೆಯಾ ಎಂಬ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Air Quality: ದೆಹಲಿಯಲ್ಲಿ ವಿಧಿಸಿರುವ ನಿರ್ಬಂಧ ತೆಗೆಯಲು ಸುಪ್ರೀಂಕೋರ್ಟ್ ನಕಾರ!
Film Screening: “ದ ಸಾಬರ್‌ಮತಿ’ ಸಿನಿಮಾ ನೋಡಿ ಭಾವುಕರಾದ ಪ್ರಧಾನಿ ನರೇಂದ್ರ ಮೋದಿ
Survey Stay: ಮಸೀದಿ ಸಮೀಕ್ಷೆ ಮನವಿ ಪರಿಗಣಿಸದಂತೆ ಕೋರಿ ಸುಪ್ರೀಂಗೆ ಕಾಂಗ್ರೆಸ್ ಅರ್ಜಿ
RSS vs INC: ಹೆಚ್ಚು ಮಕ್ಕಳ ಹೆರಲು ನಾವು ಮೊಲಗಳೇ?: ಕಾಂಗ್ರೆಸ್ ಪ್ರಶ್ನೆ
Space Scientist: ಭೂ ಕೆಳಕಕ್ಷೆ ಮುಚ್ಚುತ್ತಿರುವ 14,000 ಉಪಗ್ರಹ, ತ್ಯಾಜ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.