ತುಂಗಭದ್ರಾ ರೈತರ ಜಮೀನಿಗೆ ನೀರು
Team Udayavani, Aug 30, 2017, 11:31 AM IST
ಬೆಂಗಳೂರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಚಟುವಟಿಕೆಗೆ ನೀರು ಬಿಡಲು ಸರ್ಕಾರ ಅನುಮತಿ ನೀಡಿದೆ. ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರನ್ನು ಒಳಗೊಂಡ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ, ಈ ನೀರಿನಿಂದ ಈ ಭಾಗದ ಪ್ರಮುಖ ಬೆಳೆಯಾದ ಭತ್ತ ಬೆಳೆಯದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಕೃಷಿ ಜಮೀನಿಗೆ ನೀರು ಹರಿಸುವ ಸಂಬಂಧ ಮಂಗಳವಾರ ನಡೆದ ಸಲಹಾ ಸಮಿತಿ ಸಭೆಯಲ್ಲಿ ಒಟ್ಟು 90 ದಿನಗಳ ವರೆಗೆ ರೈತರ ಬೆಳೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿರುವುದರಿಂದ 75 ಟಿಎಂಸಿ ನೀರು ಸಂಗ್ರಹವಾಗುವ ಸಾಧ್ಯತೆ ಇದೆ. ಅದರಲ್ಲಿ ರಾಜ್ಯದ ಪಾಲು 42.850 ಟಿಎಂಸಿ. ರೈತರ ಬೆಳೆಗಳಿಗೆ 33 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಮಳೆಯ ಪರಿಸ್ಥಿತಿ ನೋಡಿಕೊಂಡು ಬಳಕೆ ಮಾಡಿಕೊಳ್ಳಲಾಗುವುದು. ಸದ್ಯಕ್ಕೆ ಎಡದಂಡೆ ಹಾಗೂ ಬಲದಂಡೆ ಕಾಲುವೆ ಮೂಲಕ ಮೂರು ಜಿಲ್ಲೆಗಳ ರೈತರ ಜಮೀನುಗಳಿಗೆ 24 ಟಿಎಂಸಿ ನೀರು ಹರಿಸಲು ನಿರ್ಧರಿಸಲಾಗಿದೆ. ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೂಲಕ ಸೆಪ್ಟಂಬರ್ 1 ರಿಂದ 30ರ ವರೆಗೆ ಪ್ರತಿದಿನ 2800 ಕ್ಯೂಸೆಕ್ಸ್ ನೀರು ಹರಿಸಲಾಗುವುದು. ಉಳಿದ 16.740 ಟಿಎಂಸಿ ನೀರನ್ನು ಪ್ರತಿ ದಿನ 3800 ಕ್ಯೂಸೆಕ್ಸ್ ನಂತರ ನವೆಂಬರ್ 20ರವರೆಗೂ ರೈತರಿಗೆ ನೀಡಲಾಗುವುದು ಎಂದರು.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಮೂಲಕ ಪ್ರತಿದಿನ 600 ಕ್ಯೂಸೆಕ್ ನಂತೆ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ತಿಂಗಳಲ್ಲಿ ಮೊದಲ 20 ದಿನ ರೈತರಿಗೆ ನೀರು ಬಿಡಲಾಗುವುದು. ಬಲದಂಡೆಯ ಮೇಲ್ಮಟ್ಟದ ಕಾಲುವೆಯಿಂದ ಪ್ರತಿದಿನ 1200 ಕ್ಯೂಸೆಕ್ಸ್‌ನಂತೆ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಪ್ರತಿ ತಿಂಗಳ 5ನೇ ತಾರೀಖೀನಿಂದ 25ನೇ ತಾರೀಖೀನವರೆಗೂ ಕಾಲುವೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರಾಯ ಬಸವಣ್ಣ ಕಾಲುವೆ ಮೂಲಕ ಪ್ರತಿದಿನ 200 ಕ್ಯೂಸೆಕ್ಸ್‌ನಂತೆ ಸೆಪ್ಟೆಬರ್‌ನಿಂದ ನವೆಂಬರ್ ವರೆಗೆ ಪ್ರತಿ ತಿಂಗಳು 10ರಿಂದ ಮಾಸಾಂತ್ಯದವರೆಗೂ ಇಪ್ಪತ್ತು ದಿನಗಳವರೆಗೆ ನೀರು ಹರಿಸಲಾಗುವುದು. ನಂತರ 2018ರ ಜನವರಿ 1 ರಿಂದ ಏಪ್ರಿಲ್ 1ರ ವರೆಗೆ ಆನ್ ಆಂಡ್ ಆಫ್ ಆಧಾರದಲ್ಲಿ ಪ್ರತಿದಿನ 200 ಕ್ಯೂಸೆಕ್ಸ್‌ನಂತೆ ನೀರು ಹರಿಸಲು ನಿರ್ಧರಿಸಲಾಗಿದೆ. ಇನ್ನು ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯಿಂದ ಪ್ರತಿ ದಿನ 33 ಕ್ಯೂಸೆಕ್ಸ್‌ನಂತೆ ಸೆಪ್ಟಂಬರ್ 1 ರಿಂದ 30ರ ವರೆಗೆ ಎಡದಂಡೆ ವಿಜಯನಗರ ಕಾಲುವೆ ಮೂಲಕ 150 ಕ್ಯೂಸೆಕ್ಸ್‌ನಂತೆ ಸೆ.1ರಿಂದ 30 ರವರೆಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದರು.
ಭತ್ತ ಬೆಳೆಯಬೇಡಿ
ಕುಡಿಯುವ ನೀರಿಗೆ 12 ಟಿಎಂಸಿ ನೀರು ಉಳಿಸಿಕೊಳ್ಳ ಬೇಕಿದೆ. ಅಲ್ಲದೆ, ಬಿಸಿಲಿಗೆ ಸುಮಾರು 5 ಟಿಎಂಸಿ ನೀರು ಆವಿಯಾಗಿ ಹೋಗುವ ಸಾಧ್ಯತೆ ಇರುವುದರಿಂದ ರೈತರು ಆದಷ್ಟು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವಂತೆ ಸೂಚಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರೈತರಿಗೆ ಭತ್ತ ಬೆಳೆಯದಂತೆ ಮನವಿ ಮಾಡಿಕೊಂಡಿದ್ದಾರೆ ಎಂದರು. ಮೂರು ಜಿಲ್ಲೆಗಳಲ್ಲಿ ಸುಮಾರು 6.5 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ ಎಂದು
ಸಂತೋಷ್ ಲಾಡ್ ಹೇಳಿದರು. ತುಂಗಭದ್ರಾ ಎಡದಂಡೆ ಕಾಲುವೆಯಡಿ ಬರುವ ವಿತರಣಾ ಕಾಲುವೆಗಳಿಗೂ ಪೊಲೀಸ್ ಬಂದೋಬಸ್ತ್ ಒದಗಿಸಲು ಕಲುಬುರಗಿ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಲಾಗಿದ್ದು, ಅನಧಿಕೃತ ಪಂಪ್‌ಸೆಟ್‌ಗಳನ್ನು ತಕ್ಷಣ ತೆರವುಗೊಳಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ನದಿ ಮೂಲಕವೇ ನೀರು ಹರಿಸಲು ತುಂಗಭದ್ರಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಲಾಡ್ ತಿಳಿಸಿದರು.
ನಾವೀಗಾಗಲೇ ಸಸಿ ಮಾಡಿ ಇಟ್ಟುಕೊಂಡಿದ್ದೇವೆ. ನಾಟಿ ಮಾಡೋದಕ್ಕೆ ಈಗಾಗಲೇ 15 ದಿನ ತಡವಾಗಿದೆ. ಈಗ ಭತ್ತ ನಾಟಿ ಮಾಡಲೇಬೇಕು. ಬೆಳೆ ಒಣಗಿದರೆ ರೈತರೇ ಹೊಣೆ ಎಂದು ಸರ್ಕಾರ ನಮ್ಮ ಮೇಲೆ ಹಾಕುತ್ತದೆ. ಈಗ ನಾಲೆಗಳಿಗೆ ನೀರು ಬಿಡಲು ಒಪ್ಪಿಕೊಂಡಿರುವುದರಿಂದ ನಮಗೆ ಭತ್ತ ನಾಟಿ ಮಾಡಲು ಅನುಕೂಲ ಆಗಿದೆ.
ವೀರೇಶ್ ಗಂಗಾವತಿ, ತುಂಗಭದ್ರಾ ರೈತ ಸಂಘ, ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.