ಬೆಂಗಳೂರಿಗೆ ಸಮುದ್ರ ತೀರದಿಂದ ನೀರು:  ಜಾರ್ಜ್‌

Team Udayavani, Aug 31, 2017, 10:41 AM IST

31-STATE-13.jpg

ಬೆಂಗಳೂರು: ಮಂಗಳೂರು ಬಳಿ ಸಮುದ್ರ ಸೇರುವ ನದಿಗಳ ಸಿಹಿನೀರನ್ನು ಸಮುದ್ರದ ತಟದಲ್ಲಿ ಸಂಗ್ರಹಿಸಿ ಅದನ್ನು ಬೆಂಗಳೂರಿಗೆ ಹರಿಸುವ ಯೋಜನೆ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ಮೀನುಗಾರರ ಸಂಘಟನೆಗಳು, ನಾಗರಿಕ ಸಂಘಟನೆಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಪತ್ರಕರ್ತರ ಜತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನದಿಗಳು ಸಮುದ್ರ ಸೇರುವ ಕಡೆ ತಡೆಗೋಡೆ ನಿರ್ಮಿಸಿ ಅಲ್ಲಿಂದ ನೀರನ್ನು ಬೆಂಗಳೂರಿಗೆ ತರುವ ಬಗ್ಗೆ ಜಲಮಂಡಳಿ ಈಗಾಗಲೇ ಕಾರ್ಯಸಾಧ್ಯತೆ ವರದಿ ಸಿದ್ಧಪಡಿಸಿದೆ. ಅದನ್ನು ಆಧರಿಸಿ ಈ ಚರ್ಚೆ ನಡೆಸಲಾಗುವುದು ಎಂದರು. ಈ ಹಿಂದೆ ಎತ್ತಿನಹೊಳೆ ಯೋಜನೆ ಜಾರಿಗೆ ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತ ವಾಗಿತ್ತು. ಅದೇ ರೀತಿ ಇದಕ್ಕೂ ವಿರೋಧ ವ್ಯಕ್ತ ವಾಗಬಾರದು ಎಂಬ ಕಾರಣಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಮೀನುಗಾರರ ಸಂಘಟನೆ, ನಾಗರಿಕ ಸಂಘಟನೆಗಳ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಯೋಜನೆಯ ಬಗ್ಗೆ ವಿವರಿಸುವಂತೆ ಸೀತಾರಾಮ್‌ ಅವರನ್ನು ಕೋರಲಾಗಿದ್ದು, ಅವರೂ ಸಮ್ಮತಿಸಿದ್ದಾರೆ. ಸ್ಥಳೀಯರ ಒಪ್ಪಿಗೆ ಪಡೆದು ಯೋಜನೆ ಅನುಷ್ಠಾನ ಮಾಡುವುದು ಸರಕಾರದ ಉದ್ದೇಶ ಎಂದು ತಿಳಿಸಿದರು.

ಕೊರಿಯಾ, ಸಿಂಗಾಪುರ, ಹಾಂಕಾಂಗ್‌, ನೆದರ್‌ಲ್ಯಾಂಡ್‌ ದೇಶಗಳಲ್ಲಿ ಸಿಹಿನೀರು ಸಂಗ್ರಹಿಸಿ ಪೂರೈಸುವ ಯೋಜನೆ ಯಶಸ್ವಿ ಯಾಗಿ ಅನುಷ್ಠಾನವಾಗಿದೆ. ಗುಜರಾತ್‌ ನಲ್ಲೂ ಇಂತಹ ಪ್ರಯತ್ನ ನಡೆಯುತ್ತಿದ್ದು, ಅದೇ ಮಾದರಿಯಲ್ಲಿ ಜಲ ಮಂಡಳಿ ಮೂಲಕ ರಾಜ್ಯ ಸರಕಾರವೂ ಈ ಪ್ರಯತ್ನಕ್ಕೆ ಮುಂದಾಗಿದೆ ಎಂದರು.  

ಪ್ರೊ| ಟಿ.ಜಿ. ಸೀತಾರಾಮ್‌ ಅವರಿಂದ ವರದಿ: ಭಾರತೀಯ ವಿಜ್ಞಾನ ಸಂಸ್ಥೆಯ  ಪ್ರೊ| ಟಿ.ಜಿ. ಸೀತಾರಾಮ್‌ ಅವರು ಈ ಕುರಿತಂತೆ ವರದಿ ಸಿದ್ಧಪಡಿಸಿದ್ದರು. ನೂರು ವರ್ಷಗಳ ಸರಾಸರಿ ಅಂದಾಜಿನಂತೆ ಪಶ್ಚಿಮಘಟ್ಟದಲ್ಲಿ ಹುಟ್ಟುವ ನೇತ್ರಾವತಿ ನದಿಯಿಂದ ಪ್ರತಿವರ್ಷ 350 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಸಮುದ್ರ ಸೇರುವ ಜಾಗದಲ್ಲಿ ಈ ಸಿಹಿ ನೀರನ್ನು ಸಂಗ್ರಹಿಸಿ, ವಾರ್ಷಿಕ ಸುಮಾರು 22 ಟಿಎಂಸಿ ನೀರನ್ನು ಪಂಪ್‌ ಮಾಡಿ, ಪೈಪ್‌ಲೈನ್‌ ಮೂಲಕ ಬೆಂಗಳೂರಿಗೆ ತರಲು ಸಾಧ್ಯವಿದೆ ಎಂದು ಅವರು ವರದಿಯಲ್ಲಿ ತಿಳಿಸಿದ್ದರು. 

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.