ನಾವೆಲ್ಲರೂ ಒಂದೇ, ಸ್ವತಂತ್ರ ಧರ್ಮಕ್ಕೆ ಪಂಚಾಚಾರ್ಯರ ವಿರೋಧ
Team Udayavani, Aug 24, 2017, 6:00 AM IST
ಬೆಂಗಳೂರು: ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮತ್ತೂಂದು ತಿರುವು ಪಡೆದಿದೆ. ಬೆಳಗಾವಿಯಲ್ಲಿ ವಿರಕ್ತ ಮಠಾಧೀಶರು ನಡೆಸಿದ ಸಮಾವೇಶಕ್ಕೆ ಪರ್ಯಾಯವಾಗಿ ಬೆಂಗಳೂರಿನಲ್ಲಿ ಪಂಚಾಚಾರ್ಯ ಶ್ರೀಗಳ ನೇತೃತ್ವದಲ್ಲಿ ವೀರಶೈವ- ಲಿಂಗಾಯತ ಸ್ವಾಮೀಜಿಗಳು ಸಭೆ ನಡೆಸಿದ್ದು, ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕ ಧರ್ಮದ ಬೇಡಿಕೆ ಬಿಟ್ಟು ಶೇ. 15 ಮೀಸಲಾತಿಗಾಗಿ ಹೋರಾಟ ನಡೆಸಬೇಕು ಎಂಬ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ.
ಬಾಳೆಹೊನ್ನೂರು ಪೀಠದ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮನ್ವಯ ಸಮಿತಿ ಹೆಸರಿನಲ್ಲಿ ನಡೆದ ಸಮಾಲೋಚನಾ ಧರ್ಮ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಠಾಧೀಶರು ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಪ್ರತಿಪಾದಿಸಿದರು.
ಕೇದಾರ ಪೀಠದ ಸ್ವಾಮೀಜಿ ಹೊರತುಪಡಿಸಿ, ಕಾಶಿ, ಉಜ್ಜಯಿನಿ, ರಂಭಾಪುರಿ ಹಾಗೂ ಶ್ರೀಶೈಲ ಪೀಠಗಳ ಸ್ವಾಮೀಜಿಗಳು ಹಾಗೂ ವಿರಕ್ತ ಮಠಾಧೀಶ ರಾದ ಧಾರವಾಡದ ಮುರುಘಾ ಮಠದ ಸ್ವಾಮೀಜಿ, ಮುಂಡರಗಿ ಅನ್ನದಾನೇಶ್ವರ ಸ್ವಾಮೀಜಿಗಳು ಧರ್ಮ ಒಡೆಯುವುದನ್ನು ತಡೆಯಬೇಕು ಎಂಬ ಒಕ್ಕೊರಲಿನ ನಿರ್ಣಯಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಪಂಚಾಚಾರ್ಯರ ಹೊರತಾಗಿ ವಿರಕ್ತ ಮಠಗಳ ಅನೇಕ ಸ್ವಾಮೀಜಿಗಳಿಂದ ಪಂಚಾಚಾರ್ಯರ ಮಾರ್ಗದರ್ಶನದಂತೆ ಲಿಂಗಾಯತ ಹಾಗೂ ವೀರಶೈವ ಇಬ್ಭಾಗವಾಗದಂತೆ ನೋಡಿಕೊಳ್ಳಲು ಸಮ ನ್ವಯ ಸಮಿತಿ ರಚಿಸಬೇಕು ಎಂಬ ಸಲಹೆಯೂ ಕೇಳಿ ಬಂದಿತು.
ಪ್ರತ್ಯೇಕ ಧರ್ಮದ ಬೇಡಿಕೆ ಇಡುವ ಬದಲು ಇರುವ ಲಿಂಗಾ ಯತ ವೀರಶೈವ ಧರ್ಮಕ್ಕೆ ಅಗತ್ಯ ಮೀಸಲಾತಿ ಹಾಗೂ ಶಿಕ್ಷಣ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕೆಂಬ ಆಗ್ರಹವನ್ನು ಮಾಡಲಾಯಿತು.
ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಗೆ ನಡೆಯುತ್ತಿರುವ ಹೋರಾಟಕ್ಕೆ ಪರ್ಯಾಯವಾಗಿ ಸಮನ್ವಯ ಸಮಿತಿ ಸಮಾ ವೇಶಗಳನ್ನು ಮಾಡಬೇಕು. ರೇಣುಕಾಚಾರ್ಯರು, ಬಸವಣ್ಣ ಹಾಗೂ ಹಾನಗಲ… ಕುಮಾರಸ್ವಾಮಿ ಜಯಂತಿಯನ್ನು ವರ್ಷದ ಒಂದು ದಿನ ಪಂಚಾ ಚಾರ್ಯರು ಮತ್ತು ವಿರಕ್ತ ಮಠಾಧೀಶರು ಸೇರಿಯೇ ಮಾಡಬೇಕು ಎಂಬ ತೀರ್ಮಾನ ಮಾಡಲಾಯಿತು.
ಪ್ರತಿ ವರ್ಷ ಗುರು ವಿರಕ್ತ ಮಠಾಧೀಶ ಸಮಾ ವೇಶವನ್ನು ಕೂಡಲ ಸಂಗಮದಲ್ಲಿ ಆಯೋಜಿಸಿ, ವೀರಶೈವ ಲಿಂಗಾಯತ ಒಂದೇ ಎಂಬ ಸಂದೇಶ ಸಾರಬೇಕು. ಸೆಪ್ಟಂಬರ್ 4ರಂದು ಗುರು ವಿರಕ್ತ ಮಠಾಧೀಶರು ಹಾನಗಲ… ಕುಮಾರಸ್ವಾಮಿ ಶಿವ ಯೋಗಿ ಮಂದಿರದಲ್ಲಿ ಸಮಾವೇಶ ನಡೆಸಬೇಕು. ನಂತರ ದಾವಣಗೆರೆ, ಕಲಬುರಗಿ ಮಹಾರಾಷ್ಟ್ರದ ಸೊÇÉಾಪುರದಲ್ಲಿಯೂ ಬೃಹತ್ ಸಮಾವೇಶ ನಡೆಸಬೇಕು ಎಂದು ನಿರ್ಧರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.