ನಾವು ಕಾಂಗ್ರೆಸ್ ಪಕ್ಷದ ಗುಲಾಮರಲ್ಲ: ಎಚ್ಡಿಕೆ
Team Udayavani, Jun 19, 2017, 11:35 AM IST
ಮಂಡ್ಯ: ಕಾಂಗ್ರೆಸ್ ಪಕ್ಷದವರು ಹೇಳಿದ ಪ್ರತಿಯೊಂದು ತೀರ್ಮಾನಕ್ಕೆ ಕೈ ಎತ್ತಲು ನಾವೇನು ಹೆಬ್ಬೆಟ್ಟಿನ ಜನರಲ್ಲ.
ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳುವುದಕ್ಕೆ ನಾವೂ ಶಕ್ತರಾಗಿದ್ದೇವೆ. ಜೆಡಿಎಸ್, ಕಾಂಗ್ರೆಸ್ ಪಕ್ಷದ ಗುಲಾಮರಲ್ಲ
ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು
ನೀಡಿದರು. ತಾಲೂಕಿನ ಬಸರಾಳು ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ವಿಧಾನಪರಿಷತ್ ಸಭಾಪತಿ ವಿರುದಟಛಿ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಶಾಸಕರು ವಿರುದಟಛಿವಾದ ತೀರ್ಮಾನ ಕೈಗೊಂಡಿರುವುದು ಸರಿಯಾಗಿದೆ.
ವಿಧಾನಪರಿಷತ್ ಕಲಾಪಕ್ಕೆ ಸೀಮಿತವಾಗಿ ಜೆಡಿಎಸ್ -ಬಿಜೆಪಿ ಪಕ್ಷಗಳ ನಡುವೆ ಮೂರು ವರ್ಷದ ಹಿಂದೆಯೇ
ಒಪ್ಪಂದವಾಗಿತ್ತು ಎಂದು ಹೇಳಿದರು.
ಮತ್ತೂಬ್ಬ ಜಾತಿವಾದಿಯನ್ನು ಕಾಣಲಾಗದು: ಬಿಜೆಪಿಗೆ ಬೆಂಬಲ ನೀಡಿದ ಜೆಡಿಎಸ್‌ನ ಜಾತ್ಯತೀತ ನಿಲುವಿನ ಬಗ್ಗೆ
ಸಿಎಂ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಜಾತ್ಯತೀತ ಒಲವು ಹಾಗೂ
ಸಿದಾಟಛಿಂತಗಳನ್ನು ಅಧಿಕಾರದಲ್ಲಿ ಅಳವಡಿಸಿಕೊಂಡಿದ್ದಾರೆ ಎನ್ನುವುದನ್ನು ಒಮ್ಮೆ ಅವರ ಹೃದಯಕ್ಕೆ ಪ್ರಶ್ನಿಸಿಕೊಳ್ಳಲಿ.
ಜಾತ್ಯತೀತ ಮನೋಭಾವವನ್ನು ಯಾವ ರೀತಿ ಉಳಿಸಬೇಕೆಂಬುದನ್ನು ಕಾಂಗ್ರೆಸ್‌ನವರಿಂದ ನಾವು ಕಲಿಯಬೇಕಿಲ್ಲ ಎಂದು ನುಡಿದರು.