Shiggaon Bypoll: ನಾವು ಟಿಕೆಟ್ ಕೇಳಿಲ್ಲ: ಭರತ್ ಬೊಮ್ಮಾಯಿ
Team Udayavani, Oct 20, 2024, 11:54 PM IST
ಬೆಂಗಳೂರು: ನಾವು ಟಿಕೆಟ್ ಕೇಳಿರಲಿಲ್ಲ. ವರಿಷ್ಠರು ಲೆಕ್ಕಾಚಾರ ಮಾಡಿ ಒಂದು ತೀರ್ಮಾನ ಮಾಡಿದ್ದಾರೆ. ಅದಕ್ಕೆ ಬದ್ಧರಾಗಿರುತ್ತೇನೆ. ನಾಳೆಯಿಂದಲೇ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಶಿಗ್ಗಾವಿಯಲ್ಲಿ ಮತ್ತೆ ಕಮಲ ಅರಳಲಿದೆ ಎಂದು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರ ಜತೆ ಅವರು ಮಾತನಾಡಿ, ನಮ್ಮ ತಂದೆಯವರಾದ ಬಸವರಾಜ ಬೊಮ್ಮಾಯಿ 4 ಬಾರಿ ಗೆದ್ದು ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದನ್ನು ಮೆಚ್ಚಿಕೊಂಡ ಜನರ ಅಪೇಕ್ಷೆಯಂತೆ ವರಿಷ್ಠರು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.
ವೈಯಕ್ತಿಕ ಕಾರಣದಿಂದ ಟಿಕೆಟ್ ಬೇಡ ಎನ್ನಿಸಿತ್ತು. ಹೀಗಾಗಿ ನಾವು ಟಿಕೆಟ್ ಕೇಳಿರಲಿಲ್ಲ. ಆದರೆ ವರಿಷ್ಠರು ಲೆಕ್ಕಾಚಾರ ಮಾಡಿ ಒಂದು ತೀರ್ಮಾನ ಮಾಡಿದ್ದಾರೆ. ಅದಕ್ಕೆ ಬದ್ಧರಾಗಿರುತ್ತೇವೆ. 2018ರಿಂದ ತಂದೆಯ ಪರವಾಗಿ ಕ್ಷೇತ್ರದಲ್ಲಿ ಚುನಾವಣ ಕೆಲಸ ಮಾಡಿಕೊಂಡು ಬಂದಿದ್ದೇನೆ. ಲೋಕಸಭಾ ಚುನಾವಣೆ ವೇಳೆಯೂ ಅವರ ಪರವಾಗಿ ಮನೆ-ಮನೆಗೂ ಭೇಟಿ ಕೊಟ್ಟಿದ್ದೇನೆ.
ಆಕಾಂಕ್ಷಿಗಳಾಗಿದ್ದವರೂ ನಮ್ಮ ತಂದೆಯವರ ಜತೆಗೆ, ನನ್ನ ಜತೆಗೆ ಇದ್ದಾರೆ. ಎಲ್ಲರೂ ಒಟ್ಟಾಗಿ ಶಿಗ್ಗಾವಿಯಲ್ಲಿ ಮತ್ತೆ ಕಮಲ ಅರಳಿಸುತ್ತೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.