ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿದ್ಯಾರ್ಥಿಯಿಂದ ವೆಬ್ಸೈಟ್ ಹ್ಯಾಕ್
Team Udayavani, Oct 4, 2017, 7:00 AM IST
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ ವಿದ್ಯಾರ್ಥಿ ತನ್ನದೇ ವಿಶ್ವವಿದ್ಯಾಲಯದ ವೆಬ್ಸೈಟ್ ಹ್ಯಾಕ್ ಮಾಡಿ, ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ ಮತ್ತು ಫೋಟೋ ಕಾμಗೆ ಶುಲ್ಕ ಪಾವತಿಸದೇ ಅರ್ಜಿ ಸಲ್ಲಿಸಿದ್ದಾನೆ.
ವಿಟಿಯು ಆಡಳಿತ ಮಂಡಳಿಯಿಂದ ಉತ್ತರ ಪತ್ರಿಕೆಯ ಫೋಟೋ ಕಾμ ಮೇಲ್ ಮಾಡಿದ ನಂತರ, ಆ ವಿದ್ಯಾರ್ಥಿ ವಿವಿಗೆ ಹಣ ಪಾವತಿಸಿದ್ದಾನೆ. ಈ ಪ್ರಕರಣವು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಒಂದಾಗಿರುವ ವಿಟಿಯು ವೆಬ್ಸೈಟ್ ಯಾರು ಬೇಕಾದರೂ ಹ್ಯಾಕ್ ಮಾಡಬಹುದಾದಷ್ಟು ದುರ್ಬಲವೇ
ಎಂಬ ಚರ್ಚೆಗೆ ಗ್ರಾಸವಾಗಿದೆ.
ವಿಟಿಯು ವೆಬ್ಸೈಟ್ನಲ್ಲಿ 3 ಲಕ್ಷ ವಿದ್ಯಾರ್ಥಿಗಳ ಅಂಕಪಟ್ಟಿ, ಫಲಿತಾಂಶ, ಪರೀಕ್ಷೆಯಲ್ಲಿ ಪಡೆದ ಅಂಕ ಸೇರಿ
ಎಲ್ಲಾ ಮಾಹಿತಿ ಲಭ್ಯವಿದೆ. ಗೌಪ್ಯತೆಯ ಅಂಶಗಳನ್ನು ವಿವಿಯ ಆಡಳಿತ ಮಂಡಳಿ ಹಾಗೂ 17 ಸಾವಿರ
ಉಪನ್ಯಾಸಕರು ಮಾತ್ರ ಪಡೆಯಲು ಸಾಧ್ಯ. ಆದರೆ, ವಿಟಿಯು ಅಂತಿಮ ವರ್ಷದ ವಿದ್ಯಾರ್ಥಿ ಸಾಯಿ ಕೆ. ವೆಬ್ಸೈಟ್ ಹ್ಯಾಕ್ ಮಾಡಿದ್ದಾನೆ. ವೆಬ್ಸೈಟ್ ಹ್ಯಾಕ್ ಆಗಿರುವ ಬಗ್ಗೆ ಆಡಳಿತ ಮಂಡಳಿಗೆ ಎಸ್ಎಂಎಸ್ ಕೂಡ ಹೋಗಿಲ್ಲ.
ಯಾರಾದರೂ ವೆಬ್ಸೈಟ್ ಒಳಗೆ ಪ್ರವೇಶಿಸಿ, ಗೌಪ್ಯ ಮಾಹಿತಿ ಪಡೆದಾಗ, ಮಾಹಿತಿ ಬದಲಾವಣೆ ಮಾಡಿದಾಗ ಸಂಬಂಧಪಟ್ಟ ಉಪನ್ಯಾಸಕರಿಗೆ ಅಥವಾ ಅಡ್ಮಿನ್ಗೆ ಅಲರ್ಟ್ ಸಂದೇಶ ಹೋಗಬೇಕು. ವಿಟಿಯು ವೆಬ್ಸೈಟ್
ನಲ್ಲಿ ಆ ವ್ಯವಸ್ಥೆ ಇಲ್ಲ.
ವಿಟಿಯು ವೆಬ್ಸೈಟ್ ಅತ್ಯಂತ ಸೆಕ್ಯೂರ್ ಆಗಿದೆ. ಅಷ್ಟು ಸುಲಭದಲ್ಲಿ ಯಾರಿಗೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಅತ್ಯಂತ ಆಧುನಿಕ ತಂತ್ರಜ್ಞಾನ ಬಳಸಿ ಸಿದಟಛಿಪಡಿಸಲಾಗಿದೆ. ವೆಬ್ಸೈಟ್ ಉನ್ನತೀಕರಿಸಲು ಇತ್ತೀಚೆಗಷ್ಟೆ ನಿರ್ಧಾರ ತೆಗೆದುಕೊಂಡಿದ್ದೇವೆ. ಆ ವಿದ್ಯಾರ್ಥಿಗೆ ನೋಟಿಸ್ ನೀಡಿದ್ದೇವೆ. ಭದ್ರತೆಗೆಬೇಕಾದ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ ಎಂದು ವಿಟಿಯು ಅಧಿಕಾರಿಯೊಬ್ಬರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.