ಪೊಲೀಸ್ ಕಾರ್ಯವೈಖರಿಗೆ ಹೈಕೋರ್ಟ್ ಗರಂ
Team Udayavani, Jul 18, 2018, 6:00 AM IST
ಬೆಂಗಳೂರು: ಶಾಸಕರು ಹಾಗೂ ಸಂಸದರು ಸೇರಿ ರಾಜಕಾರಣಿಗಳ ಮಕ್ಕಳು ಕಾಣೆಯಾದರೆ ಶರವೇಗದಲ್ಲಿ ಕಾರ್ಯನಿರ್ವಹಿಸಿ ಪತ್ತೆ ಹಚ್ಚುವ ಪೊಲೀಸರು, ನಾಪತ್ತೆಯಾಗುವ ಬಡವರ ಮಕ್ಕಳ ಪತ್ತೆಗೆ ಏಕೆ ಕಾಳಜಿ ವಹಿಸುವುದಿಲ್ಲವೆಂದು ಹೈಕೋರ್ಟ್ ಪ್ರಶ್ನಿಸಿದೆ.
ವರ್ಷದ ಹಿಂದೆ ಮನೆಯಿಂದ ಹೊರಹೋಗಿ ನಾಪತ್ತೆಯಾಗಿರುವ ತನ್ನ ಮಗನನ್ನು ಹುಡುಕಿಕೊಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಕೆಂಪಾಪುರ ನಿವಾಸಿ ರಘುವೀರ್ ರಾಥೋಡ್ ಎಂಬುವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾ. ರಾಘವೇಂದ್ರ ಎಸ್ ಚೌಹಾಣ್ ಹಾಗೂ ನ್ಯಾ.ಎಚ್. ಟಿ ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ಅಮೃತಹಳ್ಳಿ ಠಾಣೆ ಪೊಲೀಸರ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಬಡ ಕೂಲಿ ಕಾರ್ಮಿಕನೊಬ್ಬ ನಾಪತ್ತೆಯಾಗಿರುವ ಮಗನನ್ನು ಹುಡುಕಿಕೊಡುವಂತೆ ದೂರು ನೀಡಿ ವರ್ಷ ಕಳೆದರೂ ತನಿಖೆ ಮುಗಿದಿಲ್ಲ. ಆತನ ಸುಳಿವು ಪತ್ತೆ ಹಚ್ಚಿಲ್ಲ ಎಂದರೆ ಏನರ್ಥ? ತನಿಖೆಯನ್ನು ಚುರುಕುಗೊಳಿಸಿ ನ್ಯಾಯ ಒದಗಿಸುವುದು ನಿಮ್ಮ ಕರ್ತವ್ಯ ಅಲ್ಲವೇ ಎಂದು ಕಟುವಾಗಿ ಪ್ರಶ್ನಿಸಿತು.
ಶಾಸಕರು, ಸಂಸದರು, ರಾಜಕಾರಣಿಗಳ ಮಕ್ಕಳು ನಾಪತ್ತೆಯಾದರೆ ಅತ್ಯಂತ ವೇಗವಾಗಿ 24 ಗಂಟೆಯಲ್ಲಿಯೇ ತನಿಖೆ ನಡೆಸಿ ಪತ್ತೆ ಹಚ್ಚುವ
ಪೊಲೀಸರು, ಬಡವರ ವಿಚಾರದಲ್ಲಿ ಯಾಕೆ ಮುತುವರ್ಜಿ ವಹಿಸುವುದಿಲ್ಲ, ನಿರ್ಲಕ್ಷ್ಯ ಧೋರಣೆ ಏಕೆ ಅನುಸರಿಸುತ್ತೀರಾ ಎಂದು ತೀವ್ರ ತರಾಟೆ
ತೆಗೆದುಕೊಂಡಿತು. ರಾಜ್ಯದಲ್ಲಿ ಮಕ್ಕಳ ಕಳ್ಳಸಾಗಣೆ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ನ್ಯಾಯಪೀಠ, 2015ರ ಜನವರಿಯಿಂದ ಇಲ್ಲಿಯವರೆಗೂ ಎಷ್ಟು ಹೆಣ್ಣು ಹಾಗೂ ಗಂಡು ಮಕ್ಕಳು ನಾಪತ್ತೆಯಾಗಿದ್ದಾರೆ. ಎಷ್ಟು ಮಂದಿಯನ್ನು ರಕ್ಷಿಸಲಾಗಿದೆ. ಮಕ್ಕಳ ಕಳ್ಳಸಾಗಣೆಯನ್ನು ತಡೆಗಟ್ಟಲು ರೂಪಿಸಿರುವ ಕ್ರಮಗಳೇನು ಎಂಬುದರ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಬಳಿ ಮಾಹಿತಿ ತರಿಸಿಕೊಂಡು ಮುಂದಿನ ವಿಚಾರಣೆ ವೇಳೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿತು.
ಪ್ರಕರಣ ಏನು?
ಮಧ್ಯಪ್ರದೇಶ ಮೂಲದ ರಘುವೀರ್ ರಾಥೋಡ್ ಕಳೆದ 10 ವರ್ಷಗಳಿಂದ ಹೆಬ್ಟಾಳದ ಕೆಂಪಾಪುರದಲ್ಲಿ ಕುಟುಂಬದ ಜತೆ ವಾಸವಿದ್ದಾರೆ. ಅವರ 17 ವರ್ಷದ ಮಗ ರಾಮ್ ಲಖನ್ 2017ರ ಜೂ.22ರಂದು ಮನೆಯಿಂದ ಹೊರಗಡೆ ಹೋಗಿ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ರಘುವೀರ್, ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ವರ್ಷ ಕಳೆದರೂ ಮಗನ ಸುಳಿವಿನ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಪುತ್ರನನ್ನು ಪತ್ತೆ ಮಾಡಿಕೊಡುವಂತೆ ಕೋರಿ ಹೈಕೋರ್ಟ್ ಮೊರೆಹೋಗಿದ್ದರು. ಹೈಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ಅಮಿಕಸ್ ಕ್ಯೂರಿ (ಅರ್ಜಿದಾರರ ಪರ ವಾದಿಸಲು ಕೋರ್ಟ್ ನೇಮಕ ಮಾಡುವ ವಕೀಲರು) ನೇಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.