![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 20, 2021, 8:38 PM IST
ಬೆಂಗಳೂರು : ಕೋವಿಡ್ ನಿಯಂತ್ರಣ ಮತ್ತು ಬೆಂಗಳೂರು ಲಾಕ್ ಡೌನ್ ಸಂಬಂಧಿಸಿದಂತೆ ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆಯಲ್ಲಿ ಮಂಗಳವಾರ (ಏಪ್ರಿಲ್ 20) ಸರ್ವ ಪಕ್ಷ ಸಭೆ ಕರೆಯಲಾಗಿತ್ತು. ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು.
ಇನ್ನು ಸರ್ವಪಕ್ಷ ಸಭೆಯಲ್ಲಿ ಆರೋಗ್ಯ ಸಚಿವ ಕೆ ಸುಧಾಕರ್, ವಿಪಕ್ಷದವರಾದ ಸಿದ್ದರಾಮಯ್ಯ, ರೇವಣ್ಣ, ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ವಜುಭಾಯಿ ವಾಲಾ : ಕೋವಿಡ್ ಪರಿಸ್ಥಿತಿಯನ್ನು ಗಂಭೀರವಾಗಿ ಯೋಚಿಸಬೇಕಾಗಿದೆ. ಈ ಸಂದರ್ಭದಲ್ಲಿ ಸರ್ಕಾರ, ನಾವು ಸರಿಯಾಗಿ ಕಾರ್ಯ ನಿರ್ವಹಿಸಬೇಕಾಗಿ. ಈ ಹಿನ್ನೆಲೆಯಲ್ಲಿ ನಿಮ್ಮ ಸಲಹೆಯನ್ನು ಕೇಳುವ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದು ಸರ್ವಪಕ್ಷ ಸಭೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ : ಸರ್ಕಾರಕ್ಕೆ ನಾವು ಸಹಕಾರ ಕೊಡಲು ಸಿದ್ಧ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳ ಕಡೆ ಕಡಿಮೆ ಗಮನ ಕೋಡಿ. ಜನರ ಆರೋಗ್ಯಕ್ಕೆ ಹೆಚ್ಚು ಅನುದಾನ ಕೊಡಿ ಎಂದು ಸರ್ವ ಪಕ್ಷ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕುಮಾರಸ್ವಾಮಿ : ಬೆಂಗಳೂರು ಸೇರಿದಂತೆ ಹೆಚ್ಚು ಕೋವಿಡ್ ಇರುವ ಕಡೆ ಲಾಕ್ ಡೌನ್ ಮಾಡುವಂತೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಹೆಚ್ಚು ಕೋವಿಡ್ ಕೇಸ್ ಗಳು ಪತ್ತೆಯಾಗುತ್ತಿರುವ ಜಾಗಗಳಲ್ಲಿ ತಕ್ಷಣ ಲಾಕ್ ಡೌನ್ ಮಾಡಬೇಕು. ನೈಟ್ ಕರ್ಫ್ಯೂ ಮಾಡೋದ್ರಿಂದ ಪ್ರಯೋಜ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರ್ವ ಪಕ್ಷ ಸಭೆಯಲ್ಲಿ ಆಗ್ರಹಿಸಿದ್ದಾರೆ.
15 ದಿನಗಳ ಕಾಲ ಲಾಕ್ ಡೌನ್ ಮಾಡಬೇಕು. ಆದ್ರೆ ಲಾಕ್ ಡೌನ್ ಮಾಡಿದ್ರೆ ಬಡವರಿಗೆ ಒಂದು ತಿಂಗಳು ಆರ್ಥಿಕ ಸಹಾಯ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ : ಕೋವಿಡ್ ನಿಯಂತ್ರಣ ಮತ್ತು ಬೆಂಗಳೂರು ಲಾಕ್ ಡೌನ್ ಸಂಬಂಧಿಸಿದಂತೆ ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆಯಲ್ಲಿ ಮಂಗಳವಾರ (ಏಪ್ರಿಲ್ 20) ಸರ್ವ ಪಕ್ಷ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಪಾಲರು ಈ ಸಭೆಯನ್ನು ಕರೆದಿರುವುದು ಸಂವಿಧಾನ ಬಾಹಿರ. ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಿರುವುದು ಕೂಡ ಸಂವಿಧಾನ ಬಾಹಿರ ಎಂದು ಸರ್ವ ಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಅಸಮಧಾನ ಹೊರ ಹಾಕಿದ್ದಾರೆ.
ನವೆಂಬರ್ ನಲ್ಲೇ ತಜ್ಞರು ಕೋವಿಡ್ ಸೋಂಕಿನ ಬಗ್ಗೆ ವರದಿಯನ್ನು ನೀಡಿದ್ದಾರೆ. ತಜ್ಞರ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. 2 ನೇ ಅಲೆ ಬಗ್ಗೆ ಮಾಹಿತಿ ಇದ್ದರೂ ಕೂಡ ಸರ್ವ ಪಕ್ಷ ಸಭೆ ಕರೆಯದೇ ಇರುವುದು ಸರ್ಕಾರದ ತಪ್ಪು ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಮೊದಲೇ ಜಾತ್ರೆ ಸಮಾರಂಭಗಳಿಗೆ ನಿರ್ಬಂಧ ಹೇರಬೇಕಿತ್ತು. ಮೊದಲೇ ಇವುಗಳನ್ನೆಲ್ಲ ನಿರ್ಬಂಧಿಸಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಾನು, ಯಡಿಯೂರಪ್ಪ, ಕುಮಾರಸ್ವಾಮಿ ಉಪ ಚುನಾವಣೆಯಲ್ಲಿ ಭಾಗಿಯಾಗಿದ್ದೆವು. ಉಪ ಚುನಾವಣೆ ನಡೆಯದಿದ್ರೆ ಸಂವಿಧಾನ ಬಿಕ್ಕಟ್ಟು ಆಗುತ್ತಿರಲಿಲ್ಲ. ಪ್ರಧಾನಿಗಳು ಕೂಡ ಈ ಬಗ್ಗೆ ಗಮನ ಕೊಡಲಿಲ್ಲ. ಚುನಾವಣೆ ವೇಳೆ ಸ್ಯಾನಿಟೈಸರ್ ಇಲ್ಲ, ಸಾಮಾಜಿಕ ಅಂತರ ಇಲ್ಲ. ಇನ್ನು ನನಗಿರುವ ಮಾಹಿತಿ ಪ್ರಕಾರ ಸಿಎಂ ಅವರ ಮಾತನ್ನು ಆರೋಗ್ಯ ಸಚಿವರು ಕೇಳುತ್ತಿಲ್ಲ. ಸಿಎಂ ಮತ್ತು ಸುಧಾಕರ್ ನಡುವೆ ಹೊಂದಾಣಿಕೆ ಇಲ್ಲ ಎಂದು ಸಿದ್ದರಾಮಯ್ಯ ಖಾರವಾಗಿ ಮಾತನಾಡಿದ್ದಾರೆ.
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿಕೆ ಮಾಡಿ. 144 ಸೆಕ್ಷನ್ ಜಾರಿ ಮಾಡಿ ಎಂದ ಸಿದ್ದರಾಮಯ್ಯ ನಾನು ವೈಯಕ್ತಿಕವಾಗಿ ಲಾಕ್ ಡೌನ್ ಮಾಡಿ ಅಂತ ಹೇಳುವುದಿಲ್ಲ. ತಜ್ಞರ ಅಭಿಪ್ರಾಯದಂತೆ ಸರ್ಕಾರ ನಡೆದುಕೊಳ್ಳಬೇಕು ಎಂದರು.
ನಳಿನ್ ಕುಮಾರ್ ಕಟೀಲ್ : ಬಿಜೆಪಿ ಅಧ್ಯಕ್ಷ ನಳಿನ್ ಕಟೀಲ್ ಮಾತನಾಡಿ, ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ ಎನ್ನುತ್ತಲೇ, ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ ಸುಲಿಗೆ ಆಗ್ತಿದೆ. ಕಂಟ್ರೋಲ್ ಮಾಡಿ ಅಂತಾ ಒತ್ತಾಯಿಸಿದರು. ಜಿಲ್ಲೆಗಳಿಂದ ಜಿಲ್ಲೆಗಳಿಗೆ ಹೋಗುವಾಗ ಒಂದು ಟೆಸ್ಟ್ ಕಡ್ಡಾಯ ಮಾಡಿಸಿ ಅಂತಾ ಆಗ್ರಹಿಸಿದರು.
ಎಸ್ ಆರ್ ಪಾಟೀಲ್ : ಪರಿಷತ್ ವಿಪಕ್ಷ ನಾಯಕ ಎಸ್‌ಆರ್ ಪಾಟೀಲ್ ಮಾತನಾಡಿ, ಅಂತ್ಯಕ್ರಿಯೆ ಗೌರವಯುತವಾಗಿ ನಡೆಯುತ್ತಿಲ್ಲ. 30-40 ಸಾವಿರ ಕೇಳ್ತಿದ್ದಾರೆ ಎನ್ನುತ್ತಾ ಪಬ್ಲಿಕ್ ಟಿವಿ ವರದಿ ಪ್ರಸ್ತಾಪಿಸಿದ್ರು. ಲಾಕ್ ಡೌನ್ ಮಾಡಿದ್ರೆ ಮೊದಲು ಎಲ್ಲರಿಗೂ ಸೌಲಭ್ಯ ಕೊಡಬೇಕು ಅಂತಾ ಒತ್ತಾಯಿಸಿದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.