JDS MP ಪ್ರಜ್ವಲ್‌ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ

ನನಗೇನೂ ಗೊತ್ತಿಲ್ಲ, ನನ್ನನ್ನೇನೂ ಕೇಳಬೇಡಿ: ಎಚ್‌.ಡಿ. ರೇವಣ್ಣ

Team Udayavani, May 16, 2024, 7:15 AM IST

ಪ್ರಜ್ವಲ್‌ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ

ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ಜೆಡಿಎಸ್‌ ಸಂಸದ ಪ್ರಜ್ವಲ್‌ಗಾಗಿ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರೆ, ಪ್ರಜ್ವಲ್‌ ಬಗ್ಗೆ ಏನೂ ಗೊತ್ತಿಲ್ಲ ಎಂದು ಮಾಜಿ ಸಚಿವ ರೇವಣ್ಣ ಹಾಗೂ ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ಹೇಳಿದ್ದಾರೆ.

ಇದೆಲ್ಲದರ ನಡುವೆ “ಪ್ರಜ್ಞಾವಂತ ನಾಗರಿಕರು’ ಎನ್ನುವ ಹೆಸರಿನಲ್ಲಿ ಕೆಲವು ಸಾಹಿತಿಗಳು ಮುಖ್ಯಮಂತ್ರಿಗೆ ಪತ್ರ ಬರೆದು, ಪ್ರಜ್ವಲ್‌ ಬಂಧನಕ್ಕೆ ಆಗ್ರಹಿಸಿದ್ದಾರೆ.

ಆದರೆ ವಿದೇಶದಲ್ಲಿ ತಲೆಮರೆಸಿದ್ದಾರೆ ಎನ್ನಲಾಗುತ್ತಿರುವ ಪ್ರಜ್ವಲ್‌ ಆಗಾಗ ವಿಮಾನ ಪ್ರಯಾಣದ ಟಿಕೆಟ್‌ ಬುಕ್‌ ಮಾಡಿ ರದ್ದು ಪಡಿಸುತ್ತಿರುವುದು ಎಸ್‌ಐಟಿ ಅಧಿಕಾರಿಗಳಿಗೆ ತಲೆನೋವಾಗಿದೆ.

ಪ್ರಜ್ವಲ್‌ ಯಾವಾಗ ಬರುತ್ತಾರೋ ಗೊತ್ತಿಲ್ಲ
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಎಸ್‌ಐಟಿ ಅಧಿಕಾರಿಗಳು ಬ್ಲೂಕಾರ್ನರ್‌ ನೋಟಿಸ್‌ ಕೊಟ್ಟಿದ್ದಾರೆ, ಪ್ರಜ್ವಲ್‌ನನ್ನು ಬಂಧಿಸುತ್ತಾರೆ ಎಂಬುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇವೆಯೇ ಹೊರತು ಪ್ರಜ್ವಲ್‌ ಯಾಕೆ ಹೋದರು? ಯಾವಾಗ ಬರುತ್ತಾರೆ ಇತ್ಯಾದಿ ಮಾಹಿತಿ ಇಲ್ಲ. ಅವರ ಕುಟುಂಬಕ್ಕೂ ಇಲ್ಲದ ಮಾಹಿತಿ ನಮಗೆ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಯಾರ ಬಗ್ಗೆಯೂ ಗೊತ್ತಿಲ್ಲ: ರೇವಣ್ಣ
ತಮ್ಮ ವಕೀಲ ಸಿ.ವಿ.ನಾಗೇಶ್‌ ಅವರ ಬೆಂಗಳೂ ರಿನ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಕೃತಜ್ಞತೆ ಹೇಳಿದ ರೇವಣ್ಣ, ನನಗೆ ನ್ಯಾಯಾಂಗದ ಮೇಲೆ ಗೌರವ ಹಾಗೂ ದೇವರ ಮೇಲೆ ನಂಬಿಕೆ ಇದೆ. ಪ್ರಕರಣ ನ್ಯಾಯಾಲಯದಲ್ಲಿ ಇದ್ದು, ಹೆಚ್ಚು ಮಾತನಾಡುವುದಿಲ್ಲ. ಆರೋಪಮುಕ್ತವಾಗಿ ಹೊರಬರುತ್ತೇನೆ ಎಂದಷ್ಟೇ ಹೇಳಿದರು. ಪ್ರಜ್ವಲ್‌ ಬಗ್ಗೆ ಕೇಳಿದಾಗ, “ನನಗೆ ಯಾರ ಬಗ್ಗೆಯೂ ಗೊತ್ತಿಲ್ಲ’ ಎನ್ನುತ್ತಾ ನಡೆದೇ ಬಿಟ್ಟರು.ಎಸ್‌ಐಟಿ ಅಧಿಕಾರಿಗಳು ಜರ್ಮನಿಯ ಕೆಲವು ಅಧಿಕಾರಿಗಳ ಜತೆಗೆ ಸಂಪರ್ಕ ಸಾಧಿಸಿದ್ದು, ಮ್ಯೂನಿಚ್‌ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್‌ ಕಾಣಿಸಿಕೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ.

ನಿನ್ನೆ ಕಾದಿರಿಸಿದ್ದ
ವಿಮಾನ ಟಿಕೆಟ್‌ ರದ್ದು
ಮೇ 15ರಂದು ಬೆಂಗಳೂರಿಗೆ ಬರಲು ಪ್ರಜ್ವಲ್‌ ಕಾದಿರಿಸಿದ್ದ ಟಿಕೆಟ್‌ ಮತ್ತೂಮ್ಮೆ ರದ್ದಾಗಿದೆ. ಹರಿಯಾಣದ ಟ್ರಾವೆಲ್ಸ್‌ ಒಂದರಿಂದ 3 ಲಕ್ಷ ರೂ. ಮೌಲ್ಯದ ಬ್ಯುಸಿನೆಸ್‌ ಕ್ಲಾಸ್‌ ಕೆಟಗರಿ ಸೀಟನ್ನು ಪ್ರಜ್ವಲ್‌ ಬುಕ್‌ ಮಾಡಿದ್ದರು. ಆದರೆ ವಿಮಾನ ನಿಲ್ದಾಣದತ್ತ ಪ್ರಜ್ವಲ್‌ ಸುಳಿಯಲೇ ಇಲ್ಲ. ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಬರುತ್ತಾರೆಂಬ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿ ಗಳು ಬುಧವಾರ ಬೆಳಗ್ಗಿನಿಂದಲೇ ಕಾದಿದ್ದರು. ಕೊನೆಗೆ ಅವರು ನಿರಾಸೆಯಿಂದಲೇ ಮರಳಬೇಕಾಯಿತು.

ಟಾಪ್ ನ್ಯೂಸ್

Udupi 71 ವರ್ಷದ ಮಹಿಳೆಯ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು

Udupi 71 ವರ್ಷದ ಮಹಿಳೆಯ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು

Renukaswamy Case 5 ತಿಂಗಳಿನಿಂದ ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ!

Renukaswamy Case 5 ತಿಂಗಳಿನಿಂದ ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ!

Pen Drive Case: ಪ್ರಜ್ವಲ್‌ ಧ್ವನಿ ಬದಲಾಯಿಸಲು ಯತ್ನ

Pen Drive Case: ಪ್ರಜ್ವಲ್‌ ಧ್ವನಿ ಬದಲಾಯಿಸಲು ಯತ್ನ

1-sadsd

T20 WC; ಭಾರತ-ದಕ್ಷಿಣ ಆಫ್ರಿಕಾ: ಸೋಲಿಲ್ಲದ ಸರದಾರರ ಫೈನಲ್‌ ಸಮರ

1-police

New Criminal ಕಾನೂನು ಜಾರಿ: ಪೊಲೀಸ್‌ ಠಾಣೆಗಳಲ್ಲಿ ಜು.1ಕ್ಕೆ ವಿಶೇಷ ಕಾರ್ಯಕ್ರಮ

1-neet

NEET ಗದ್ದಲಕ್ಕೆ ಸಂಸತ್‌ ಕಲಾಪ ಬಲಿ; ಉಭಯ ಸದನದಲ್ಲಿ ಕೋಲಾಹಲ

CT Ravi; ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಕ್ಕೆ ಹನಿ ಟ್ರ್ಯಾಪ್‌ ನಂಟು

CT Ravi; ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಕ್ಕೆ ಹನಿ ಟ್ರ್ಯಾಪ್‌ ನಂಟು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy Case 5 ತಿಂಗಳಿನಿಂದ ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ!

Renukaswamy Case 5 ತಿಂಗಳಿನಿಂದ ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ!

Pen Drive Case: ಪ್ರಜ್ವಲ್‌ ಧ್ವನಿ ಬದಲಾಯಿಸಲು ಯತ್ನ

Pen Drive Case: ಪ್ರಜ್ವಲ್‌ ಧ್ವನಿ ಬದಲಾಯಿಸಲು ಯತ್ನ

CT Ravi; ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಕ್ಕೆ ಹನಿ ಟ್ರ್ಯಾಪ್‌ ನಂಟು

CT Ravi; ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಕ್ಕೆ ಹನಿ ಟ್ರ್ಯಾಪ್‌ ನಂಟು

Mangaluru ಅಧಿಕ ಬಡ್ಡಿದರ ಆಮಿಷವೊಡ್ಡಿ ವಂಚನೆ

Mangaluru ಅಧಿಕ ಬಡ್ಡಿದರ ಆಮಿಷವೊಡ್ಡಿ ವಂಚನೆ

CM ಸಿದ್ದರಾಮಯ್ಯ ಬದಲಾವಣೆ ಸದ್ದಿಗೆ ಪ್ರತಿರೋಧದ ದನಿ

CM ಸಿದ್ದರಾಮಯ್ಯ ಬದಲಾವಣೆ ಸದ್ದಿಗೆ ಪ್ರತಿರೋಧದ ದನಿ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

Udupi 71 ವರ್ಷದ ಮಹಿಳೆಯ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು

Udupi 71 ವರ್ಷದ ಮಹಿಳೆಯ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು

Renukaswamy Case 5 ತಿಂಗಳಿನಿಂದ ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ!

Renukaswamy Case 5 ತಿಂಗಳಿನಿಂದ ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ!

Pen Drive Case: ಪ್ರಜ್ವಲ್‌ ಧ್ವನಿ ಬದಲಾಯಿಸಲು ಯತ್ನ

Pen Drive Case: ಪ್ರಜ್ವಲ್‌ ಧ್ವನಿ ಬದಲಾಯಿಸಲು ಯತ್ನ

Terror 2

FATF;ಉಗ್ರರಿಗೆ ವಿತ್ತೀಯ ನೆರವು ತಡೆ: ಭಾರತದ ಕ್ರಮಕ್ಕೆ ಮೆಚ್ಚುಗೆ

1-sadsd

T20 WC; ಭಾರತ-ದಕ್ಷಿಣ ಆಫ್ರಿಕಾ: ಸೋಲಿಲ್ಲದ ಸರದಾರರ ಫೈನಲ್‌ ಸಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.