ಮೋದಿಗೆ ಪರ್ಯಾಯ ನಾಯಕ ಯಾರ್ರಿ: ಯಡಿಯೂರಪ್ಪ ಪ್ರಶ್ನೆ
Team Udayavani, Feb 25, 2019, 12:50 AM IST
ಬೆಂಗಳೂರು: “ಯಾರ್ರೀ… ಪ್ರಧಾನಿ ಮೋದಿಯವರಿಗೆ ಪರ್ಯಾಯ ನಾಯಕ? ಕೆಲವರು ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಜನರಿಗೆ ಭರವಸೆ ಹುಟ್ಟಿಸುವಂತಹ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಬೇಕಲ್ಲ. ಮೋದಿ ಬಿಟ್ಟರೆ ದೇಶದ ನಾಯಕತ್ವ ವಹಿಸಿಕೊಳ್ಳಲು ಯಾರಿದ್ದಾರೆ?’ – ಇದು ಬಿಜೆಪಿ ರಾಜ್ಯಾಧ್ಯಕ್ಷರೂ ಆದ ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಪ್ರಶ್ನೆ. ಈ ಬಾರಿಯೂ ಮೋದಿ ಅಲೆಯಿದ್ದು, ಅಭ್ಯರ್ಥಿಗಳಿಗಿಂತ ಮೋದಿ ಅಲೆಯೇ ಪಕ್ಷದ ಗೆಲುವಿಗೆ ವರದಾನವಾಗಲಿದೆ. ಮೋದಿಯವರಿಗೆ ಪರ್ಯಾಯ ನಾಯಕರು ಯಾರು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಹಾಗಾಗಿ, ಬಿಜೆಪಿ ಸ್ವಂತ ಬಲದೊಂದಿಗೆ 272 ಸ್ಥಾನ ಗಳಿಸುವ ವಿಶ್ವಾಸವಿದೆ ಎಂದರು.
ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ರಾಜ್ಯ ಪ್ರವಾಸದಲ್ಲಿ ನಿರತರಾಗಿರುವ ಯಡಿಯೂರಪ್ಪ, ತಮ್ಮ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳ ನಡುವೆ ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ.
ನರೇಂದ್ರ ಮೋದಿ ಅವರ ನಾಯಕತ್ವ ಈ ಬಾರಿಯೂ ಕೈಹಿಡಿಯುವುದೇ?
ಯಾರಿದ್ದಾರ್ರೀ ಮೋದಿಯವರಿಗೆ ಪರ್ಯಾಯ ನಾಯಕರು? ದೇಶಕ್ಕೆ ಮೋದಿಯವರಲ್ಲದೆ ಯಾರಿದ್ದಾರೆ ಹೇಳಲಿ? ಮೋದಿಯವರು ನೀಡಿರುವ ಕೊಡುಗೆ ಜನರ ಮುಂದಿದೆ.
ಅಭ್ಯರ್ಥಿಗಳ ಆಯ್ಕೆ ಯಾವಾಗ ನಡೆಯಲಿದೆ?
“ಮೋದಿ ವಿಜಯ ಸಂಕಲ್ಪ ಯಾತ್ರೆ’ಯಡಿ 28 ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೇನೆ. ಹಾಲಿ ಬಿಜೆಪಿ ಸಂಸದರಿರುವ ಕ್ಷೇತ್ರಗಳಲ್ಲೂ ಅವರ ಸ್ಪರ್ಧೆ ಕುರಿತು ಅಭಿಪ್ರಾಯ ಪಡೆಯಲಾಗುವುದು. ಜತೆಗೆ ಹಿಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರಾಭವಗೊಂಡಿರುವ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ಎಲ್ಲ ಮಾಹಿತಿಯನ್ನು 15 ದಿನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾಗೆ ಸಲ್ಲಿಸಲಾಗುವುದು.
ಹಾಲಿ ಬಿಜೆಪಿ ಸಂಸದರಿರುವ ಕ್ಷೇತ್ರಗಳ ಪೈಕಿ ಎಲ್ಲಾದರೂ ಅಭ್ಯರ್ಥಿಗಳು ಬದಲಾಗುವರೇ?
ಬಹುತೇಕ ಹಾಲಿ ಸಂಸದರೇ ಅಭ್ಯರ್ಥಿಗಳಾಗಿ ಕಣ ಕ್ಕಿಳಿಯಬಹುದು. ಒಂದೆರಡು ಕಡೆ ಬದಲಾವಣೆ ಯಾಗಬೇಕೆನಿಸಿದರೆ ಅಮಿತ್ ಶಾ ಅವರ ಗಮನಕ್ಕೆ ತರಲಾಗುವುದು. ಆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರೇ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿಗೆ ಅನುಕೂಲವೋ ಅನಾನುಕೂಲವೋ?
ರಾಜ್ಯ ಸರಕಾರದ ಮೈತ್ರಿ ಪಕ್ಷಗಳಲ್ಲಿ ಸೀಟು ಹಂಚಿಕೆ ಗೊಂದಲದ ಗೂಡಾಗಿದ್ದು, ಭಿನ್ನಾಭಿಪ್ರಾಯ ಬಯಲಾಗಿದೆ. ಉಭಯ ಪಕ್ಷಗಳ ಹಿರಿಯರು ಮೈತ್ರಿ ಮಾಡಿಕೊಂಡರೂ ಕಾರ್ಯಕರ್ತರು ಒಪ್ಪುವುದಿಲ್ಲ. ಹಾಗಾಗಿ ಈ ಮೈತ್ರಿ ಚುನಾವಣೆಯಲ್ಲಿ ಯಶಸ್ಸು ಕಾಣುತ್ತದೆ ಎಂಬ ವಿಶ್ವಾಸ ನನಗಿಲ್ಲ. ಇದರ ಲಾಭ ಬಿಜೆಪಿಗೆ ಸಿಗುವ ವಿಶ್ವಾಸವಿದೆ.
ಮತದಾರರು ಬಿಜೆಪಿಗೆ ಏಕೆ ಮತ ಹಾಕಬೇಕು?
ನಾಲ್ಕೂ ಮುಕ್ಕಾಲು ವರ್ಷದ ಅವಧಿಯಲ್ಲಿನ ಮೋದಿಯ ಸಾಧನೆ. ಒಂದು ದಿನವೂ ವಿಶ್ರಾಂತಿ ಪಡೆಯದೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಬಜೆಟ್, ಅನ್ಯ ಪಕ್ಷಗಳೊಂದಿಗಿನ ಹೊಂದಾಣಿಕೆ ಹಾಗೂ ಮೋದಿ ಸಾಧನೆಗಳು ಪ್ಲಸ್ ಪಾಯಿಂಟ್ ಆಗಿದ್ದು, ನಮ್ಮ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗಲಿದೆ.
ರಾಜ್ಯದಲ್ಲಿ ಬಿಜೆಪಿ ನಿರೀಕ್ಷಿತ ಸೀಟು ಪಡೆದರೆ ಸಮ್ಮಿಶ್ರ ಸರಕಾರದ ಮೇಲೆ ಪರಿಣಾಮ ಬೀರುವುದೇ?
ರೈತರ 48,000 ಕೋಟಿ ರೂ. ಸಾಲ ಮನ್ನಾ ಮಾಡ ಲಾಗಿದ್ದು, ದೇಶದಲ್ಲಿ ತಾವೊಬ್ಬರೇ ಚಾಂಪಿಯನ್ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದರು. ಆದರೆ ಸಾಲ ಮನ್ನಾಗೆ ಬಜೆಟ್‌ನಲ್ಲಿ ಕಾಯ್ದಿರಿಸಿರುವ ಹಣ ವೆಷ್ಟು? ಇದಕ್ಕೆಲ್ಲ ಜನ ತಕ್ಕ ಪಾಠ ಕಲಿಸಲಿದ್ದಾರೆ. ಸಮ್ಮಿಶ್ರ ಸರಕಾರ ಲೋಕಸಭಾ ಚುನಾವಣೆಯ ಬಳಿಕ ಮುಂದುವರಿಯುವ ವಿಶ್ವಾಸ ನನಗೆ ಇಲ್ಲ. ನನ್ನ ಅಂದಾಜಿನ ಪ್ರಕಾರ ಪಕ್ಷ 20- 22 ಸ್ಥಾನ ಗೆದ್ದಾಗ ಸಹಜವಾಗಿಯೇ ಜೆಡಿಎಸ್, ಕಾಂಗ್ರೆಸ್ ಒಡಕು 100 ಪಟ್ಟು ಜಾಸ್ತಿಯಾಗುತ್ತದೆ. ಇದು ನಿಶ್ಚಿತವಾಗಿಯೂ ಮೈತ್ರಿ ಸರಕಾರಕ್ಕೆ ಧಕ್ಕೆಯಾಗುತ್ತದೆ.
ಯಾವ ವರ್ಗದ ಮತದಾರರನ್ನು ಸೆಳೆಯಲು ಒತ್ತು ನೀಡಲಾಗುತ್ತಿದೆ?
ಪ. ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯಲು ವಿಶೇಷ ಗಮನ ನೀಡ ಲಾಗುತ್ತಿದೆ. ಕೇಂದ್ರ ಸರಕಾರದ ಎಲ್ಲ ತೀರ್ಮಾನ ಗಳು ಸಹಜವಾಗಿಯೇ ಮತಬ್ಯಾಂಕ್‌ಗಳಾಗಿ ಪರಿವರ್ತನೆಯಾಗಲಿವೆ. ಮುಖ್ಯವಾಗಿ ಯುವ ಮತದಾರರಲ್ಲಿ ಶೇ.90ರಷ್ಟು ಮತದಾರರು ಪ್ರಧಾನಿ ಮೋದಿ ಹಾಗೂ ಬಿಜೆಪಿ ಪರ ಇದ್ದಾರೆ. ಅದು ನಮಗೆ ದೊಡ್ಡ ಶಕ್ತಿ.
ಆಡಿಯೋ ಪ್ರಕರಣ, ಆಪರೇಷನ್ ಕಮಲ’ ಚುನಾವಣೆ ಮೇಲೆ ಪರಿಣಾಮ ಬೀರುವುದೇ?
ಎಲ್ಲವೂ ಮಾಧ್ಯಮ ಸೃಷ್ಟಿ. “ಆಪರೇಷನ್ ಕಮಲ’ ನಡೆಸುತ್ತಿದ್ದೇವೆ ಎಂದು ನಾವು ಎಲ್ಲಿ ಹೇಳಿದ್ದೇವೆ? ಕಾಂಗ್ರೆಸ್‌ನ ಅತೃಪ್ತ 10 – 12 ಶಾಸಕರು ಎಲ್ಲೋ ಹೋಗುತ್ತಾರೆ. 20ಕ್ಕೂ ಹೆಚ್ಚು ಶಾಸಕರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಒಪ್ಪಿಗೆ ಇಲ್ಲ ಎನ್ನುತ್ತಾರೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.